ಬೆಳವನೂರು-ತುರ್ಚಘಟ್ಟ ಗ್ರಾಮಕ್ಕೆ ನಗರ ಸಾರಿಗೆ ಸೌಲಭ್ಯ

ಬೆಳವನೂರು-ತುರ್ಚಘಟ್ಟ ಗ್ರಾಮಕ್ಕೆ ನಗರ ಸಾರಿಗೆ ಸೌಲಭ್ಯ

ದಾವಣಗೆರೆ, ಮಾ.2- ಬೆಳವನೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹೊಸ ಬೆಳವನೂರು ಗ್ರಾಮದ ಮುಖಾಂತರ ತುರ್ಚಘಟ್ಟ ಗ್ರಾಮಕ್ಕೆ ನಗರ ಸಾರಿಗೆ ವ್ಯವಸ್ಥೆಗಾಗಿ ಗ್ರಾಮಸ್ಥರು ಮನವಿ ಸಲ್ಲಿಸಿದ್ದು, ಸಾರಿಗೆ ವ್ಯವಸ್ಥಾಪಕರು ವ್ಯವಸ್ಥೆ ಕಲ್ಪಿಸಿದ್ದಾರೆ.

ಶಾಸಕರುಗಳಾದ ಡಾ. ಶಾಮನೂರು ಶಿವಶಂಕರಪ್ಪ, ಎಸ್.ಎ. ರವೀಂದ್ರನಾಥ್ ಅವರುಗಳ ಶಿಫಾರಸ್ಸಿನಂತೆ ಸದರಿ ಗ್ರಾಮಗಳಿಗೆ ಬಸ್ ಸಂಚಾರ ಆರಂಭವಾಗಿದೆ. 

ಗ್ರಾಮ ಪಂಚಾಯ್ತಿ ಅಧ್ಯಕ್ಷ ಜಿ.ಹೆಚ್. ಮಹಂತೇಶ್, ಜಿಲ್ಲಾ ಪಂಚಾಯ್ತಿ ಸದಸ್ಯ ಜಿ.ಸಿ. ನಿಂಗಪ್ಪ, ತಾಲ್ಲೂಕು ಪಂಚಾಯ್ತಿ ಸದಸ್ಯರಾದ ಮಂಜಪ್ಪ, ಮೀನಾ ಶ್ರೀನಿವಾಸ್,  ಗ್ರಾಮ ಪಂಚಾಯ್ತಿ ಉಪಾಧ್ಯಕ್ಷೆ ಕೆ. ಶೃತಿ ಹಾಗೂ ಗ್ರಾಮ ಪಂಚಾಯ್ತಿ ಸದಸ್ಯರುಗಳು, ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಪಿ.ಟಿ. ರೇವತಿ ಹಾಗೂ ಸಿಬ್ಬಂದಿ ವರ್ಗದವರು ಹಾಗೂ ಗ್ರಾಮಸ್ಥರುಗಳು ಬಸ್‌ಗೆ ಪೂಜೆ ಸಲ್ಲಿಸಿದರು.

ಬಸ್ಸಿನ ಚಾಲಕ ಹಾಗೂ ನಿರ್ವಾಹಕರಿಗೆ ಗೌರವಾರ್ಪಣೆ ಮಾಡಿ, ನಗರ ಸಾರಿಗೆ ಬಸ್ಸಿಗೆ ಚಾಲನೆ ನೀಡಲಾಯಿತು.