ವಾಲ್ಮೀಕಿ ಜಾತ್ರೆ ನಿಮಿತ್ತ ಬೈಕ್‌ ರಾಲಿ

ವಾಲ್ಮೀಕಿ ಜಾತ್ರೆ ನಿಮಿತ್ತ ಬೈಕ್‌ ರಾಲಿ

ಮಲೇಬೆನ್ನೂರು, ಫೆ.5- ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದಲ್ಲಿ ಇದೇ ದಿನಾಂಕ 8 ಮತ್ತು 9 ರಂದು ಜರುಗಲಿರುವ 3ನೇ ವರ್ಷದ ವಾಲ್ಮೀಕಿ ಜಾತ್ರೆ ಅಂಗವಾಗಿ ಮಲೇಬೆನ್ನೂರಿನಿಂದ ಹರಿಹರ ಮಾರ್ಗವಾಗಿ ರಾಜನಹಳ್ಳಿ ಮಠದವರೆಗೆ ಬೈಕ್ ರಾಲಿಯನ್ನು ನಿನ್ನೆ ನಡೆಸಲಾಯಿತು.

ಮಲೇಬೆನ್ನೂರಿನ ನೀರಾವರಿ ಇಲಾಖೆಯಿಂದ ಪ್ರಾರಂಭವಾದ ಬೈಕ್ ರಾಲಿ ಹರಿಹರ ನಗರದ ಮೂಲಕ ರಾಜನಹಳ್ಳಿ ಮಠ ತಲುಪಿತು. ವಾಲ್ಮೀಕಿ ಭಾವಚಿತ್ರ, ಬಾವುಟಗಳು ಬೈಕ್ ರಾಲಿಯಲ್ಲಿ ರಾರಾಜಿಸಿದವು. 

ಕ್ರಿಕೆಟ್ : ವಾಲ್ಮೀಕಿ ಜಾತ್ರೆ ಅಂಗವಾಗಿ ಹರಿಹರ ಗಾಂಧಿ ಮೈದಾನದಲ್ಲಿ ಇಂದಿನಿಂದ ಮೂರು ದಿನಗಳ ಕಾಲ ರಾಜ್ಯಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಿ ಹಮ್ಮಿಕೊಳ್ಳಲಾಗಿದೆ.

Leave a Reply

Your email address will not be published.