ಜಂಗಮ ಸಹಕಾರಿಗೆ ವೀರಯ್ಯ ಅಧ್ಯಕ್ಷ

ಉಪಾಧ್ಯಕ್ಷರಾಗಿ ಇಂದೂಧರ ನಿಶಾನಿಮಠ

ದಾವಣಗೆರೆ,ಫೆ.1- ನಗರದ ಕ್ರೆಡಿಟ್ ಕೋ-ಆಪರೇಟಿವ್ ಬ್ಯಾಂಕುಗಳಲ್ಲೊಂದಾದ ಜಂಗಮ ಸೌಹಾರ್ದ ಸಹಕಾರಿ ಆಡಳಿತ ಮಂಡಳಿ ಅಧ್ಯಕ್ಷರಾಗಿ ಸಂಘದ ಹಾಲಿ ಅಧ್ಯಕ್ಷ ಪ್ರೊ. ಎಸ್.ಎಂ. ವೀರಯ್ಯ ಅವರು ಮತ್ತೊಂದು ಅವಧಿಗೆ ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರಾಗಿ ಇಂದೂ ಧರ ನಿಶಾನಿಮಠ ಆಯ್ಕೆಯಾಗಿ ದ್ದಾರೆ. ಸಂಘದ ಕಚೇರಿ ಸಭಾಂ ಗಣದಲ್ಲಿ ನಡೆದ ಸಂಘದ ಆಡಳಿತ ಮಂಡಳಿ ಸಭೆಯಲ್ಲಿ ಈ ಆಯ್ಕೆ ಅವಿರೋಧವಾಗಿ ನಡೆಯಿತು. ಸಿ.ಎಂ. ಜಯದೇವಯ್ಯ, ಡಾ. ಎಲ್. ಎಂ. ಜ್ಞಾನೇಶ್ವರ, ಕೆ.ಎಂ. ಬಕ್ಕೇಶ್ವರ ಸ್ವಾಮಿ, ಬಿ.ಎಂ. ಚಂದ್ರಶೇಖರಯ್ಯ, ಎನ್.ಎಂ. ಬಸವರಾಜ ಯ್ಯ, ವೀರಯ್ಯ ಬಸಯ್ಯ ಮಳೇಮಠ, ಜೆ. ಕಿರಣ್ ಕುಮಾರ್, ಶ್ರೀಮತಿ ಕೆ.ಎಸ್. ನಳಿನ, ಶ್ರೀಮತಿ ಜಿ.ಎಂ. ಪ್ರೇಮಾ ಅವರುಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ಸಂಘದ ಆಡಳಿತ ಮಂಡಳಿಗೆ ಇದೇ ದಿನಾಂಕ 16ರಂದು ಚುನಾವಣೆ ನಡೆದಿದ್ದನ್ನು ಇಲ್ಲಿ ಸ್ಮರಿಸಬ ಹುದು. ಚುನಾವಣೆ ನಂತರ ನಡೆದ ಈ ಸಭೆಯಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಆಯ್ಕೆ ಮಾಡಲಾಯಿತು.