ಕೊರೊನಾದಿಂದ ಹೆಚ್ಚಾದ ಅಸಮಾನತೆ

ಮಹಾಮಾರಿಯ ಅವಧಿಯಲ್ಲಿ ಅಂಬಾನಿ ಆದಾಯ ಗಂಟೆಗೆ 90 ಕೋಟಿ ರೂ.

ನವದೆಹಲಿ, ಜ. 26 –  ಕೌಶಲ್ಯರಹಿತ ಕಾರ್ಮಿಕನೋರ್ವ ಹತ್ತು ಸಾವಿರ ವರ್ಷಗಳಲ್ಲಿ ದುಡಿಯುವುದನ್ನು ರಿಲೈಯನ್ಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಗಂಟೆಯಲ್ಲೇ ದುಡಿಯುತ್ತಾರೆ. ಇಂತಹ ಅಸಮಾನತೆ ಕೊರೊನಾದಿಂದಾಗಿ ಅಸಮಾನತೆ ಏರುಮುಖವಾಗಿದೆ ಎಂದು ವರದಿಯೊಂದು ತಿಳಿಸಿದೆ.

ಆಕ್ಸ್‌ಫಾಮ್‌ ಇನಿಕ್ವಾಲಿಟಿ ವರದಿಯ ಪ್ರಕಾರ, ಕೊರೊನಾ ಮಹಾಮಾರಿಯಿಂದಾಗಿ ಪ್ರಸಕ್ತ ಇರುವ ಸಾಮಾಜಿಕ, ಆರ್ಥಿಕ ಹಾಗೂ ಲಿಂಗ ತಾರತಮ್ಯ ಹೆಚ್ಚಾಗಿದೆ.

ಶ್ರೀಮಂತರು ಕೊರೊನಾ ಮಹಾಮಾರಿಯ ತೀವ್ರ ಪ್ರಕೋಪದಿಂದ ಪಾರಾಗಿದ್ದಾರೆ. ಕೌಶಲ್ಯದ ಕಾರ್ಮಿಕರು ಸುಲಭವಾಗಿ ತಮ್ಮನ್ನು ತಾವು ಕೊರೊನಾ ತೊಡಕುಗಳಿಂದ ದೂರ ಉಳಿದಿದ್ದಾರೆ ಮತ್ತು ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ಆದರೆ, ಬಹುತೇಕ ಭಾರತೀಯರು ಜೀವನಾಧಾರ ಕಳೆದುಕೊಳ್ಳುವ ಅಪಾಯ ಎದುರಿಸಿದ್ದಾರೆ ಎಂದು ವರದಿ ಹೇಳಿದೆ.

ಕೊರೊನಾ ಮಹಾಮಾರಿಯ ಸಂದರ್ಭದಲ್ಲಿ ರಿಲೈಯನ್ಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಅವರು ವಿಶ್ವದ ನಾಲ್ಕನೇ ಶ್ರೀಮಂತ ವ್ಯಕ್ತಿಯಾಗಿದ್ದಾರೆ. 

ಕೊರೊನಾ ಸಂದರ್ಭದಲ್ಲಿ ಅಂಬಾನಿ ಪ್ರತಿ ಗಂಟೆಗೆ 90 ಕೋಟಿ ರೂ. ಗಳಿಸಿದ್ದಾರೆ. ಇದೇ ವೇಳೆ ದೇಶದ ಶೇ.24ರಷ್ಟು ಜನರ ಆದಾ ತಿಂಗಳಿಗೆ 3 ಸಾವಿರ ರೂ.ಗಳಿಗೂ ಕಡಿಮೆ ಇತ್ತು ಎಂದು ಆಕ್ಸ್‌ಫಾಮ್‌ ತಿಳಿಸಿದೆ.

ಅಂಬಾನಿ ಅಷ್ಟೇ ಅಲ್ಲದೇ ಲಾಕ್‌ಡೌನ್ ವೇಳೆ ಭಾರತದ ಕೋಟ್ಯಾಧೀಶರ ಆಸ್ತಿ ಶೇ.35ರಷ್ಟು ಹೆಚ್ಚಾಗಿದೆ. 2009ರ ನಂತರ ಅವರ ಆಸ್ತಿಯಲ್ಲಿ ಶೇ.90ರಷ್ಟು ಏರಿಕೆ ಯಾಗಿದೆ. ಅವರ ಒಟ್ಟು ಆಸ್ತಿ ಮೌಲ್ಯ ಈಗ 422.9 ಶತ ಕೋಟಿ ಡಾಲರ್ ಎಂದು ಅಂದಾಜಿಸಲಾಗಿದೆ. ಅಮೆರಿಕ, ಚೀನಾ, ಜರ್ಮನಿ, ರಷ್ಯಾ ಹಾಗೂ ಫ್ರಾನ್ಸ್ ನಂತರದಲ್ಲಿ ಭಾರತದ ಕೋಟ್ಯಾಧೀಶರ ಆಸ್ತಿ ಮೌಲ್ಯ ಹೆಚ್ಚಾಗಿದೆ.

ಕೊರೊನಾ ಅವಧಿಯಲ್ಲಿ ಉನ್ನತ 11 ಕೋಟ್ಯಾಧೀಶರ ಆಸ್ತಿ ಮೌಲ್ಯ ಹೆಚ್ಚಾಗಿದ್ದನ್ನು ಪರಿಗಣಿಸಿದರೆ, ಆ ಹಣದಲ್ಲಿ ಉದ್ಯೋಗ ಖಾತ್ರಿ ಇಲ್ಲವೇ ಆರೋಗ್ಯ ಸಚಿವಾಲಯವನ್ನು ಹತ್ತು ವರ್ಷಗಳವರೆಗೆ ನಿಭಾಯಿಸಬಹುದು.

Leave a Reply

Your email address will not be published.