ನಗರ ಪಾಲಿಕೆ ಕನ್ನಡ ಜಾಗೃತಿ ಸಮಿತಿಗೆ ಬಾಮ ಸೇರಿದಂತೆ ಆರು ಜನರ ನೇಮಕ

ದಾವಣಗೆರೆ,ನ.23-ಮಹಾನಗರ ಪಾಲಿಕೆಯ ಕನ್ನಡ ಜಾಗೃತಿ ಸಮಿತಿಗೆ ಅಧಿಕಾರೇತರ ಸದಸ್ಯರು ಗಳನ್ನಾಗಿ ಹಿರಿಯ ಸಾಹಿತಿ ಬಾ.ಮ. ಬಸವರಾಜಯ್ಯ ಅವರೂ ಸೇರಿದಂತೆ, ಆರು ಜನರನ್ನು ನೇಮಕ ಮಾಡಿ ಸರ್ಕಾರ ಇಂದು ಆದೇಶ ಹೊರಡಿಸಿದೆ.

ಹಿರಿಯ ಚಿತ್ರ ಕಲಾವಿದ ಎ.ಮಹಲಿಂಗಪ್ಪ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ಬಿ.ದಿಳ್ಳೆಪ್ಪ, ಕನ್ನಡಪರ ಹೋರಾಟಗಾರ ಬಂಕಾಪುರದ ಚನ್ನಬಸಪ್ಪ, ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷೆ ಶ್ರೀಮತಿ ಸಹನಾ ರವಿ ಮತ್ತು ಶಿಕ್ಷಣಾಧಿಕಾರಿ ಶ್ರೀಮತಿ ಪುಷ್ಪಾವತಿ ಅವರುಗಳು ಕನ್ನಡ ಜಾಗೃತಿ ಸಮಿತಿಗೆ ನೇಮಕಗೊಂಡಿರುವ ಇತರೆ ಸದಸ್ಯರು.

Leave a Reply

Your email address will not be published.