ಎಸ್ಸೆಸ್ ನಿವಾಸಕ್ಕೆ ಕೋಡಿಮಠದ ಶ್ರೀ

ಎಸ್ಸೆಸ್ ನಿವಾಸಕ್ಕೆ ಕೋಡಿಮಠದ ಶ್ರೀ

ದಾವಣಗೆರೆ, ನ. 23 – ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲೆಂದು ಇಂದು ನಗರಕ್ಕಾಗಮಿಸಿದ್ದ ಹಾರನಹಳ್ಳಿ ಕೋಡಿ ಮಠದ ಶ್ರೀ ಜಗದ್ಗುರು ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಮಹಾ ಸ್ವಾಮೀಜಿ ಹಿರಿಯ ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಅವರ ನಿವಾಸಕ್ಕೆ ಭೇಟಿ ನೀಡಿದ್ದರು. 

ಎಸ್ಸೆಸ್ ಕುಟುಂಬದಿಂದ ಪಾದಪೂಜೆ ಸ್ವೀಕರಿಸಿದ ಶ್ರೀಗಳು, ಎಸ್ಸೆಸ್ ಮತ್ತು ಅವರ ಕುಟುಂಬ ವರ್ಗದವರಿಗೆ ಶುಭ ಹಾರೈಸಿದರು. `ನೀವು ಸಮಾಜ  ಮತ್ತು ಸರ್ವ ಜನಾಂಗಕ್ಕೆ ಬೇಕಾದವರು. ಶತಾಯುಷಿಗಳಾಗಿ ಬಾಳಿ, ಬಾಳುತ್ತೀರಿ’ ಎಂದು ಶ್ರೀಗಳು ಎಸ್ಸೆಸ್ ಅವರಿಗೆ ಆಶೀರ್ವದಿಸಿದರು. 

ಮಾಜಿ ಸಚಿವ ಶಾಮನೂರು ಮಲ್ಲಿಕಾರ್ಜುನ್, ಶ್ರೀಮತಿ ಪ್ರಭಾ ಮಲ್ಲಿಕಾರ್ಜುನ್ ಕುಟುಂಬದವರು ಶ್ರೀಗಳ ಪಾದಪೂಜೆ ನೆರವೇರಿಸಿದರು.

ಕೈಗಾರಿಕೋದ್ಯಮಿ ಅಥಣಿ ವೀರಣ್ಣ, ಉಪ ವಿಭಾಗಾಧಿಕಾರಿ ಶ್ರೀಮತಿ ಮಮತಾ ಗೌಡರ್, ಎನ್ ಸಿದ್ದೇಶ್, ಪಾಲಿಕೆ ಸದಸ್ಯ ಗಡಿಗುಡಾಳ್ ಮಂಜುನಾಥ,  ಹಿರಿಯ ಪತ್ರಕರ್ತರಾದ ಬಾ.ಮ. ಬಸವರಾಜಯ್ಯ, ವೀರಪ್ಪ ಎಂ. ಬಾವಿ, ಎಚ್. ಬಿ. ಮಂಜುನಾಥ್, ಮುಖಂಡರಾದ ಮುದೇಗೌಡ್ರ ಗಿರೀಶ್, ಕುರುಡಿ ಗಿರೀಶ್, ಮಾಗಾನಹಳ್ಳಿ ಪರಶುರಾಮ್ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಕೈಗಾರಿಕೋದ್ಯಮಿ ಎಸ್. ಎಸ್. ಗಣೇಶ್  ಅವರ ನಿವಾಸಕ್ಕೂ ಭೇಟಿ ನೀಡಿ, ಗಣೇಶ್ ಮತ್ತು ಶ್ರೀಮತಿ ರೇಖಾ ದಂಪತಿಯನ್ನು ಆಶೀರ್ವದಿಸಿದರು.

Leave a Reply

Your email address will not be published.