ಜಗಳೂರಿನ ಪಿಎಸ್ಐ ಆಗಿ ಸಂತೋಷ್  

ಜಗಳೂರು, ನ.22- ಇಲ್ಲಿನ ಪೊಲೀಸ್ ಠಾಣೆಯ ಆರಕ್ಷಕ ಉಪ ನಿರೀಕ್ಷಕರಾಗಿ ಸಂತೋಷ್ ಬಾಗೋಜಿ ಅವರು ಇಂದು ಅಧಿಕಾರ ವಹಿಸಿಕೊಂಡಿದ್ದಾರೆ.

ಆರಕ್ಷಕ ಉಪ ನಿರೀಕ್ಷಕರಾಗಿದ್ದ ಉಮೇಶ್ ಬಾಬು ಅವರು  ದಾವಣಗೆರೆಯ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಪಿಎಸ್‌ಐ ಆಗಿ ವರ್ಗಾವಣೆಗೊಂಡಿ ದ್ದರಿಂದ ಸ್ಥಾನ ತೆರವಾಗಿತ್ತು. ಸಂತೋಷ್ ಬಾಗೋಜಿ ಅವರು ಮೂಲತಃ ಬೆಳಗಾವಿ ಜಿಲ್ಲೆ ಮೂಡಲಗಿ ಪಟ್ಟಣದವರಾಗಿದ್ದು, ಇವರು 2017 ನೇ ಸಾಲಿನ ಬ್ಯಾಚ್‌ನಲ್ಲಿ ಪಿಎಸ್‌ಐ ಹುದ್ದೆಗೆ ಆಯ್ಕೆಯಾಗಿದ್ದರು. ತಮ್ಮ ಪ್ರೊಬೆಷನರಿ ತರಬೇತಿಯನ್ನು ಶಿವಮೊಗ್ಗ ಜಿಲ್ಲೆಯಲ್ಲಿ ಪೂರೈಸಿ, ಜಗಳೂರು ಪೊಲೀಸ್ ಠಾಣೆಯ ಆರಕ್ಷಕ ಉಪ ನಿರೀಕ್ಷಕರಾಗಿ ಆಗಮಿಸಿದ್ದಾರೆ.

Leave a Reply

Your email address will not be published.