ಅಕ್ರಮ ಕಸಾಯಿ ಖಾನೆಗಳ ತೆರವಿಗೆ ಆಗ್ರಹ

ಅಕ್ರಮ ಕಸಾಯಿ ಖಾನೆಗಳ ತೆರವಿಗೆ ಆಗ್ರಹ

ಬಿಜೆಪಿ ದಕ್ಷಿಣ ಯುವ ಮೋರ್ಚಾ ಮನವಿ

ದಾವಣಗೆರೆ, ನ.21- ನಗರದಲ್ಲಿರುವ ಅಕ್ರಮ ಕಸಾಯಿ ಖಾನೆಗಳನ್ನು ತೆರವುಗೊಸಬೇಕೆಂದು ಆಗ್ರಹಿಸಿ ದಕ್ಷಿಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ನಗರ ಪಾಲಿಕೆಗೆ ಹಾಗೂ ಜಿಲ್ಲಾಡಳಿತಕ್ಕೆ ಇಂದು ಮನವಿ ಸಲ್ಲಿಸಿದರು.

ಬಾಷಾ ನಗರದ ಮುಖ್ಯರಸ್ತೆ, ಅಜಾದ್ ನಗರ, ಹಳೇ ಬೇತೂರು ರಸ್ತೆ, ಕೆಟಿಜೆ ನಗರ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಅಕ್ರಮವಾಗಿ ಕಸಾಯಿ ಖಾನೆಗಳನ್ನು ನಿರ್ಮಾಣ ಮಾಡಿಕೊಂಡು ಗೋವಧೆ ಮಾಡುತ್ತಾ ಹಿಂದೂಗಳ ಭಾವನೆಗಳಿಗೆ ಧಕ್ಕೆ ತರುತ್ತಿದ್ದಾರೆ. ಕೂಡಲೇ ಇಂತಹ ಅಕ್ರಮ ಕಸಾಯಿ ಖಾನೆಗಳನ್ನು ಶೀಘ್ರವೇ ತೆರವುಗೊಳಿಸಬೇಕೆಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ದಕ್ಷಿಣ ಯುವ ಮೋರ್ಚಾ ಅಧ್ಯಕ್ಷ ರಾಕೇಶ್ ಭಜರಂಗಿ, ಮಂಡಲದ ಪ್ರಧಾನ ಕಾರ್ಯದರ್ಶಿ ರಾಜು ನೀಲಗುಂದ, ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಗಣೇಶ್ ಕಂದನಕೋವಿ, ಕಿರಣ್ ಎಚ್ ಉಪಾಧ್ಯಕ್ಷ ಪುಲಯ, ಅಭಿಷೇಕ್ ಎಳೆಹೊಳೆ ಕಾರ್ಯದರ್ಶಿ ಪ್ರದೀಪ್, ದೊಡ್ಡೇಶ್, ಖಜಾಂಚಿ ಗಣೇಶ್ ಬಾಬು, ಸದಸ್ಯರಾದ  ಸಂತೋಷ್, ಚಿರು, ಸಂತೋಷ್, ಸಚಿನ್, ನಂದೀಶ್, ಮಂಜು, ಯುವ ಮುಖಂಡ ಪ್ರವೀಣ್ ಜಾಧವ್, ನವೀನ್ ಕುಮಾರ್, ಮಂಜು,  ಮಾಂತೇಶ, ಚಿರು, ಉತ್ತರದ ಯುವ ಮೋರ್ಚಾ ಅಧ್ಯಕ್ಷ ಸಚಿನ್ ವರ್ಣೇಕರ್, ಹರೀಶ್ ಶಾಮನೂರು ಇನ್ನಿತರರು ಭಾಗವಹಿಸಿದ್ದರು.

Leave a Reply

Your email address will not be published.