ಮನದ ಮಂಥನ…

ಮನದ ಮಂಥನ…

ಮನದ ಮಂಥನವಾಗದೊಡೆ
ಮನವು ತಿಳಿಯಾಗದು
ಭೂಮಿಯೊಳು ಬೀಜವ ಬಿತ್ತದೊಡೆ
ಧರೆಯು ಶುಭಫಲವನೆಂದೂ ನೀಡದು.
ಕಂದನು ರೋದಿಸದಿದ್ದೊಡೆ
ಕಂದನ ಉದರವೆಂದೂ ತುಂಬದು.
ಸಂಕಲ್ಪಿಸಿ ಕರ್ಮವ ಮಾಡದಿದ್ದೊಡೆ
ಕಾರ್ಯದಲಿ ಜಯಸಿಗದೆಂದನು
ನಮ್ಮ ವೀರೇಶ್ವರ.


ಶ್ರೀ ಈರಪ್ಪ ಬಿಜಲಿ