ಘಾತ

ಘಾತ

ಓ… ಕಡಲೇ ನಿನ್ನ ಆ ಭೋರ್ಗರೆತ
ನನ್ನೊಡಲಲಿ ನಿನ್ನ ಸೇರುವ ತುಡಿತ.

ಬರುವೆ…ಓಡುತಾ ಕಲ್ಲುಮುಳ್ಳುಗಳೆನ್ನದೇ…
ಗಿರಿಪರ್ವತಗಳ ಕಾನನಗಳ ದಾಟುತಾ ನಿಲ್ಲದೇ…

ಧುಮ್ಮಿಕ್ಕಿ… ಹರಿಯುತಾ
ಒಡಲಲಿ ನಿನ್ನದೇ ಮಿಡಿತಾ…

ನಿನ್ನ ಸೇರುವ ತವಕ
ಮನದಿ ಎಂಥದೋ ಪುಳಕ.

ಬೇಗುದಿಯಲಿ ಸರಸರನೇ ಹರಿಯುವೆ
ಮನದಿ ಒಂದೇ ಆಸೆ ಎಂದು ನಿನ್ನ ಸೇರುವೆ.

ನಾ ಎಷ್ಟು ಸಿಹಿಯಾಗಿದ್ದರೇನು
ನಿನ್ನೊಡಲಲಿ ನನ್ನ ನಾ ಕಳೆದುಕೊಳ್ಳುವೆನು.

ನನ್ನ ನೀರಿನ ಸಿಹಿಯನು ನನ್ನತನವನು
ನಿನ್ನಲಿ ಒಂದಾಗಿ

ಕಳೆದುಕೊಳ್ಳುವೆ ನಾ ನದಿ ಎಂಬ ಹೆಸರನು
ಮರೆಯುವೆ ನಾ ಸಿಹಿನೀರೆಂಬ ನೆನಪನು.


ಸುಕನ್ಯ ತ್ಯಾವಣಿಗೆ
9986328069