ಕುಂಬಳೂರಿನಲ್ಲಿ ಸಂಪ್ರೋಕ್ಷಣೆ ಪೂಜೆ

ಕುಂಬಳೂರಿನಲ್ಲಿ ಸಂಪ್ರೋಕ್ಷಣೆ ಪೂಜೆ

ಮಲೇಬೆನ್ನೂರು, ನ.15- ಕುಂಬಳೂರು ಗ್ರಾಮದ ಆರಾಧ್ಯ ದೈವ ಶ್ರೀ ಹನುಮಂತ ದೇವರ ದೇವಸ್ಥಾನದಲ್ಲಿ ಗ್ರಾಮಕ್ಕೆ ಹಿತವನ್ನು ಬಯಸಿ ದೇವರ ಸಂಪ್ರೋಕ್ಷಣೆ ಪೂಜಾ ಕಾರ್ಯಕ್ರಮಗಳು ಗ್ರಾಮಸ್ಥರ ಸಮ್ಮುಖದಲ್ಲಿ ಶನಿವಾರ ಶ್ರದ್ಧಾ-ಭಕ್ತಿಯಿಂದ ಜರುಗಿದವು.

ಬೆಳಗಿನಜಾವ 4 ಗಂಟೆಗೆ ಗಂಗಾ ಪೂಜೆ ನಂತರ ಆಲಯ ಪ್ರವೇಶವು ಮಹಾಗಣಪತಿ ಪ್ರಾರ್ಥನೆ ಹಾಗೂ ಮಹಾಸಂಕಲ್ಪ, ವಾಸುದೇವ ಪುಣ್ಯ ರಕ್ಷಾಬಂಧನ, ನವಗ್ರಹ ಆರಾಧನಾ ಚತುರ್ವಿಂಶತಿ ಕಲಶ ಆರಾಧನೆ ಮತ್ತು ಶ್ರೀರಾಮಚಂದ್ರ, ಗೀತಾ ದೇವಿಯವರ ಕಳಶಾರಾಧನೆ ಮಾಡಲಾಯಿತು.

ನಂತರ ಅಗ್ನಿ ಪ್ರತಿಷ್ಠಾಪನೆ, ಮಹಾಗಣಪತಿ ಹೋಮ, ನವಗ್ರಹ ಹೋಮ, ಜಯಾದಿ ಹೋಮ, ಕಲಾವೃದ್ಧಿ ಹೋಮ, ಶ್ರೀರಾಮ ತಾರಕ ಹೋಮ ಹಾಗೂ ಪೂಜಾ ಕಾರ್ಯಕ್ರಮಗಳು ವೈಭವದಿಂದ ಪಾಂಚರಾತ್ರ ಆಗಮೋಕ್ತವಾಗಿ ಬಹಳ ವಿಜೃಂಭಣೆಯಿಂದ ನಡೆದವು.