ಹಿಮಾಲಯದಲ್ಲಿ ವಚನಾನಂದ ಶ್ರೀ

ಹಿಮಾಲಯದಲ್ಲಿ ವಚನಾನಂದ ಶ್ರೀ

ಮಲೇಬೆ ನ್ನೂರು, ನ.4- ಹರಿಹರದ ಪಂಚಮಸಾಲಿ ಜಗದ್ಗುರು ಪೀಠದ  ಶ್ರೀ ವಚನಾನಂದ ಸ್ವಾಮೀಜಿ ಹಿಮಾಲಯದ ಸನ್ನಿಧಿಯಲ್ಲಿದ್ದು,  ಮಹಾ ಚಳಿ ಆರಂಭವಾಗಿದೆ. ಮುಂದಿನ ಆರು ತಿಂಗಳು ಹಿಮಾಲಯದ ಎಲ್ಲಾ ದೇಗುಲಗಳೂ ಮುಚ್ಚುತ್ತವೆ. ಹಿಮ ಏಕಾಂತ ಅನುಭವಿಸುವ ಕಾಲ ಇದು ಎಂದಿದ್ದಾರೆ. 

ತಾವು ಮತ್ತು ಋಷಿಕೇಶದ ವೇದ ನಿಕೇತನ ಆಶ್ರಮದ ಶ್ರೀ ವಿಜಯಾನಂದ ಸರಸ್ವತಿ ಸ್ವಾಮೀಜಿ  ಬದ್ರಿನಾಥ ನಾರಾಯಣ ದರ್ಶನ ಪಡೆದು ಹಿಂದಿರುಗುವ ಸಂದರ್ಭದಲ್ಲಿ ಉಡುಪಿಯ ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದಂಗಳವರು ಭೇಟಿಯಾಗಿದ್ದರು ಎಂದು ವಚನಾನಂದ ಸ್ವಾಮೀಜಿ ತಿಳಿಸಿದ್ದಾರೆ.

Leave a Reply

Your email address will not be published.