ಪ್ರೇಮ ಪತ್ರ

ಪ್ರೇಮ ಪತ್ರ

ನಾನಂದು ಕೊಟ್ಟೆ ನಿನಗೆ ಪ್ರೇಮ ಪತ್ರ
ನೀನ್ಯಾಕೆ ಹೂಂ ಅನ್ನಲಿಲ್ಲ ನನ್ನ ಹತ್ರ
ನೀ ತಗೊಳ್ಳದೆ ಹೋದರೆ ನನ್ನ ಈ ಪತ್ರ
ದಿನ ಹಗಲು ಬರಿತೀನಿ ನಿಂದೇ ಚಿತ್ರ.

ಹೂಂ ಅಂದರೆ ನಿನ್ನ ಹತ್ರ
ನಮ್ಮಪ್ಪ ಬುಕ್ ಮಾಡ್ತಾರೆ ಬೇರೆಯವರ
ಜೊತೆ ನನ್ನ ಲಗ್ನದ ಛತ್ರ
ಹಾಗಾಗಿ ಸುತ್ತಬೇಡ ನನ್ನ ಹತ್ರ
ನಾನು ಒಲಿಯೋದು ನನ್ನವನಿಗೆ ಮಾತ್ರ.

ನಿನಗಿನ್ನು ತಿಳಿದಿಲ್ಲ ನನ್ನ ಪ್ರೀತಿಯ ಗಾತ್ರ
ಬೇಕಾಗಿಲ್ಲ ನನಗೆ ನಿನ್ನ ಕುಲಗೋತ್ರ
ನೀ ಅರಿತರೆ ನನ್ನ ಪ್ರೀತಿಯ ಪಾತ್ರ
ನಮ್ಮ ಜೀವನವಾಗುವುದು ಸುಸೂತ್ರ.

ಹೂಂ ಅನ್ನೋಕೆ ಆಗ್ತಿಲ್ಲೋ ಮಿತ್ರ
ಯಾಕಂದ್ರ ಇನ್ನೂ ಇದಾಳ್ ನಮ್ಮ ಅಕ್ಕ ಸುಮಿತ್ರ
ಆಕಿ ಕೊರಳಿಗೆ ಬಿತ್ತಂದ್ರ ಮಂಗಳ ಸೂತ್ರ
ನಾನ್ ಅಕ್ಕೆನಿ ನಿನ್ನ ಜೀವನದ ಮುಖ್ಯ ಪಾತ್ರ.


ಸುಮತೀಂದ್ರ ಕೆ.ಆರ್.
7019130306

Leave a Reply

Your email address will not be published.