ವರಮಹಾಲಕ್ಷ್ಮಿ ಹಬ್ಬಕ್ಕೆ ಖರೀದಿ

ವರಮಹಾಲಕ್ಷ್ಮಿ  ಹಬ್ಬಕ್ಕೆ ಖರೀದಿ

ದಾವಣಗೆರೆ, ಜು. 30- ಕೊರೊನಾ ಸಂಕಷ್ಟದ ನಡುವೆಯೂ ಶುಕ್ರವಾರದ ವರಮಹಾಲಕ್ಷ್ಮಿ ಹಬ್ಬಕ್ಕೆ ಹಣ್ಣು, ಹೂ, ಬಾಳೆ ದಿಂಡುಗಳ ಖರೀದಿ ನಡೆಯಿತು. ಆದರೆ ಕಳೆದ ವರ್ಷಗಳಿಗೆ ಹೋಲಿಸಿದರೆ ಖರೀದಿ ಸಂಭ್ರಮ ಅಷ್ಟಾಗಿ ಕಾಣಲಿಲ್ಲ.  ಸಮುದಾಯದ ಒಗ್ಗೂಡು ವಿಕೆ ಪ್ರದರ್ಶಿಸುವ ಹಬ್ಬವೆಂದೇ ಹೆಸರಾಗಿರುವ ಈ ಹಬ್ಬದಲ್ಲಿ  ನೆರೆಹೊರೆಯವರು, ಸಂಬಂಧಿಗಳು, ಸ್ನೇಹಿತರು, ಮುತ್ತೈದೆಯರನ್ನು ಮನೆಗೆ ಆಹ್ವಾನಿಸಿ ಉಡಿ ತುಂಬುವ ಮೂಲಕ ಹಬ್ಬ ಸಂಪನ್ನಗೊಳ್ಳುತ್ತದೆ. ಆದರೆ, ಕೊರೊನಾ ಪರಿಣಾಮ ಒಬ್ಬರ ಮನೆ ಯವರು ಇನ್ನೊಬ್ಬರ ಮನೆಗೆ ಹೋಗಲಾಗುತ್ತಿಲ್ಲ. ಅರಿಶಿನ, ಕುಂಕುಮಕ್ಕೆ ನೆರೆಯವರನ್ನು ಕರೆಯಲೂ ಯೋಚಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ.