ಅಕ್ರಮವಾಗಿ ಜಾನುವಾರುಗಳ ಸಾಗಾಟ: ವಶ

 ಚನ್ನಗಿರಿ, ಜೂ.22- ಎರಡು ಗೂಡ್ಸ್ ವಾಹನಗಳಲ್ಲಿ ಅಕ್ರಮವಾಗಿ ಜಾನುವಾರು ಗಳನ್ನು ಸಾಗಿಸುತ್ತಿದ್ದ ವೇಳೆ  ಪೊಲೀಸರು ದಾಳಿ ನಡೆಸಿ, 4 ಹಸುಗಳು ಮತ್ತು 6 ಸಾವಿರ ಮೌಲ್ಯದ 3 ಕರುಗಳನ್ನು ವಾಹನ ಗಳು ಹಾಗೂ ಅವುಗಳ ಚಾಲಕರ ಸಹಿತ ವಶಕ್ಕೆ ಪಡೆದಿದ್ದಾರೆ.

ಚನ್ನಗಿರಿ ಟೌನ್ ವಾಸಿಗಳೆನ್ನಲಾದ ಮೊಹಮ್ಮದ್ ಜಾವೀದ್, ಅಬ್ದುಲ್ ಗಫಾರ್ ಬಂಧಿತ ಚಾಲಕರು. ಅಕ್ರಮವಾಗಿ ಜಾನುವಾರು ಗಳನ್ನು ಸಾಗಿಸುತ್ತಿದ್ದ ವೇಳೆ ಚನ್ನಗಿರಿ ತಾಲ್ಲೂಕು ಹಟ್ಟಿ ಗ್ರಾಮದ ವೃತ್ತದ ಬಳಿ   ಅಪರಾಧ ವಿಭಾಗದ ಪಿಎಸ್ ಐ ರೂಪ್ಲಿಬಾಯಿ ಮತ್ತು ಸಿಬ್ಬಂದಿಗಳು ದಾಳಿ ನಡೆಸಿದ್ದಾರೆ.

ಚನ್ನಗಿರಿ ಟೌನ್ ವಾಸಿಗಳೆನ್ನಲಾದ ರಜಾಕ್ ಮತ್ತು ಸಿದ್ದಿಕ್ ಎಂಬುವವರು ಈ ಜಾನುವಾರು ಗಳನ್ನು ಖರೀದಿಸಿ ವಾಹನಗಳಲ್ಲಿ ತುಂಬಿ ಚನ್ನಗಿರಿ ಟೌನ್ ಗೆ ಹೋಗಲು ಹೇಳಿರುವುದಾಗಿ ಬಂಧಿತ ಚಾಲಕರು ವಿಚಾರಣೆ ವೇಳೆ ಬಾಯಿ ಬಿಟ್ಟಿದ್ದಾರೆ.

ಈ ವಾಹನಗಳಲ್ಲಿ ಜಾನುವಾರುಗಳನ್ನು ಸಾಗಾಣಿಕೆ ಮಾಡಲು ಸಾಕಷ್ಟು ಸ್ಥಳದ ಅವಕಾಶವಿಲ್ಲದಿದ್ದರೂ ಸಹ ಯಾವುದೇ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸದೇ ಹಿಂಸಾತ್ಮಕವಾಗಿ ತುಂಬಿಕೊಂಡು ಸಾಗಾಣಿಕೆ ಮಾಡುತ್ತಿದ್ದುದು ಪೊಲೀಸರ ಕಣ್ಣಿಗೆ ಬಿದ್ದಿದೆ.