ನರ್ಸ್‌ಗೆ ಅವಹೇಳನ: ಮಹಿಳೆ ಬಂಧನ

ದಾವಣಗೆರೆ, ಜೂ. 6- ಕೊರೊನಾ ಸೋಂಕು ತಗುಲಿದ್ದ ನರ್ಸ್ ತನ್ನ ಬಗ್ಗೆ ಅವಹೇಳನ ಕಾರಿ ಸುದ್ದಿಯನ್ನು ಸಾಮಾಜಿಕ ಜಾಲ ತಾಣದಲ್ಲಿ ಹರಿಬಿಟ್ಟ ಬಗ್ಗೆ ದೂರು ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿದ ಫೇಸ್ ಬುಕ್ ಖಾತೆದಾರರೋರ್ವರನ್ನು ಪೊಲೀಸರು ಬಂಧಿಸಿದ್ದಾರೆ.

ವಂದು ವಾಣಿ ಎಂಬ ಹೆಸರಿನ ಫೇಸ್ ಬುಕ್ ನಲ್ಲಿ ತನ್ನ ಬಗ್ಗೆ ಅವಮಾನಿಸುವ, ಜಾತಿ ನಿಂದನಾತ್ಮಕ, ಸಮಾಜದಲ್ಲಿ ತಲೆ ಎತ್ತಿ ಬದುಕದಂತಹ, ಸ್ತ್ರೀತನಕ್ಕೆ ಧಕ್ಕೆ ತರುವ ತಪ್ಪು ಹೇಳಿಕೆಗಳ ಹರಿಬಿಟ್ಟಿರು ವುದಾಗಿ ಆರೋಪಿಸಿ ಕೊರೊನಾ ಸೋಂಕಿಗೆ ಒಳಗಾಗಿದ್ದ ನರ್ಸ್ ಇಲ್ಲಿನ ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಮೇ 29ರಂದು ದೂರು ದಾಖಲಿಸಿದ್ದರು.

ಈ ಸಂಬಂಧ ಫೇಸ್ ಬುಕ್ ಖಾತೆದಾರರಾದ ಡಿ. ಮಂಜುಳಾ ಇವರನ್ನು ದಾವಣಗೆರೆ ಸಿಇಎನ್ ಅಪರಾಧ ಪೊಲೀಸ್ ಠಾಣೆಯ ಪೊಲೀಸರು ಪತ್ತೆ ಹಚ್ಚಿ ಬಂಧಿಸಿ, ಕಾನೂನು ಕ್ರಮ ಜರುಗಿಸಿರುವುದಾಗಿ ಪೊಲೀಸ್ ಪ್ರಕಟಣೆ ತಿಳಿಸಿದೆ.