ಶಿರಮಗೊಂಡನಹಳ್ಳಿ : ರೇಷನ್ ಕಾರ್ಡ್ ಇಲ್ಲದವರಿಗೆ ಫುಡ್ ಕಿಟ್

ಶಿರಮಗೊಂಡನಹಳ್ಳಿ : ರೇಷನ್ ಕಾರ್ಡ್ ಇಲ್ಲದವರಿಗೆ ಫುಡ್ ಕಿಟ್

ದಾವಣಗೆರೆ, ಮೇ 16-ಶಿರಮಗೊಂಡನಹಳ್ಳಿ ಗ್ರಾಮದಲ್ಲಿ ರೇಷನ್ ಕಾರ್ಡ್ ಇಲ್ಲದ  ಕುಟುಂಬಗಳಿಗೆ ಜಿಲ್ಲಾಡಳಿತದ ವತಿಯಿಂದ ಗ್ರಾಮ ಪಂಚಾಯ್ತಿ ಮುಖಾಂತರ ರೇಷನ್ ಸಾಮಗ್ರಿ ಕಿಟ್‍ಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯ್ತಿ ಅಧ್ಯಕ್ಷರಾದ ನಾಗವೇಣಿ ವಿಜಯಕುಮಾರ್, ಸದಸ್ಯರಾದ ಚಂದ್ರಪ್ಪ, ಲೋಕಮ್ಮ, ಮಾಲತೇಶ್, ಪಿಡಿಓ, ಗ್ರಾಮ ಲೆಕ್ಕಿಗ ಅಂಜಿನಪ್ಪ, ವಕೀಲರಾದ ಜೆ.ಉಮೇಶ್, ಕೆ.ನಾಗರಾಜ್ ಮತ್ತಿತರರು ಇದ್ದರು.
ನಂತರ ಶಿರಮಗೊಂಡನಹಳ್ಳಿ ಗ್ರಾ.ಪಂ. ವ್ಯಾಪ್ತಿಯ ನಾಗನೂರು ಗ್ರಾಮದಲ್ಲೂ ಒಟ್ಟು 66 ಫಲಾನುಭವಿಗಳಿಗೆ ರೇಷನ್ ಸಾಮಗ್ರಿ ಕಿಟ್‍ಗಳನ್ನು ವಿತರಣೆ ಮಾಡಲಾಯಿತು. ರೇಷನ್ ಕಾರ್ಡ್ ಇಲ್ಲದ ಮತ್ತು ವಲಸೆ ಕಾರ್ಮಿಕರಿಗೆ ರೇಷನ್ ಕಿಟ್‍ಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ವೀಣಾ, ಮಲ್ಲಿಕಾರ್ಜುನ, ಎ.ಎಂ.ಸುರೇಶಬಾಬು, ಎ.ಬಿ. ಚನ್ನಬಸಪ್ಪ, ವಸಂತ ಜರೀಕಟ್ಟೆ,
ಕೆ. ನಾಗರಾಜಪ್ಪ ಮತ್ತಿತರರು ಇದ್ದರು.