ನಗರದೊಳಗಿನ ಕ್ವಾರಂಟೈನ್‌ ಸ್ಥಳಗಳು : ಜನರ ಆತಂಕ

ದಾವಣಗೆರೆ, ಮೇ 5- ಕೊರೊನಾ ಸೋಂಕಿತರ ಸಂಖ್ಯೆ ದಾವಣಗೆರೆಯಲ್ಲಿ ಹೆಚ್ಚಾಗುತ್ತಲೇ ಇದೆ. ಇದರೊಟ್ಟಿಗೆ ಸೋಂಕಿತರ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕದಲ್ಲಿದ್ದವರನ್ನು ಹುಡುಕಿ ಕ್ವಾರಂಟೈನ್‌ ನಲ್ಲಿಡುವ ಪ್ರಕ್ರಿಯೆ ನಡೆಯುತ್ತಿದ್ದು, ಇವರ ಸಂಖ್ಯೆಯೂ ದಿನೇ ದಿನೇ ಹೆಚ್ಚುತ್ತಲೇ ಇದೆ.

ಸದ್ಯ ನಗರದಲ್ಲಿ ಸೋಂಕಿತರ ಸಂಪರ್ಕದಲ್ಲಿದ್ದವರನ್ನು ಕ್ವಾರಂಟೈನ್‌ ಮಾಡಿರುವ ಸಂಖ್ಯೆ ಸಹಸ್ರದ ಸಮೀಪವಿದೆ. ನಗರ ಹತ್ತಾರು ಲಾಡ್ಜ್‌ಗಳು, ಹಾಸ್ಟೆಲ್‌, ಶಾಲಾ-ಕಾಲೇಜುಗಳ ಕಟ್ಟಡಗಳನ್ನು ಇದಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ. 

ಆದರೆ ಜನವಸತಿ ಪ್ರದೇಶದ ಬಳಿ ಇರುವ, ಸೂಕ್ತ ಕಾಂಪೌಂಡ್ ಇಲ್ಲದ, ಶಂಕಿತರಿಗೆ ಸೂಕ್ತ ರಕ್ಷಣೆ ನೀಡಲಾಗದಂತಹ ವಸತಿ ಗೃಹಗಳಲ್ಲಿ, ಅದರಲ್ಲೂ ನಗರದ ಮದ್ಯಭಾಗದಲ್ಲಿರುವ ಲಾಡ್ಜ್‌ಗಳಲ್ಲಿ ಕ್ವಾರಂಟೈನ್‌ ಮಾಡುತ್ತಿರುವುದು ನಗರದ ಜನತೆಯ ಆತಂಕ ಹೆಚ್ಚಿಸಿದೆ.

ಸೋಂಕು ಹರಡುವುದನ್ನು ತಡೆಯಲು ಸೋಂಕಿತರ ಸಂಪರ್ಕದಲ್ಲಿದ್ದವರನ್ನು ಗುರುತಿಸಿ  ಪ್ರತ್ಯೇಕವಾಗಿರಿಸುವುದು ಅನಿವಾರ್ಯ. ಜಿಲ್ಲಾಡಳಿತದ ಮನವಿಗೆ ತಮ್ಮ ಲಾಡ್ಜ್‌ಗಳನ್ನು ಬಿಟ್ಟು ಕೊಟ್ಟು ಮಾಲೀಕರು ಸ್ಪಂದಿಸುತ್ತಿದ್ದಾರೆ. ಆದರೆ ಲಾಡ್ಜ್‌ಗಳ ಆಯ್ಕೆಯಲ್ಲಿ ಜಿಲ್ಲಾಡಳಿತ ಎಡವುತ್ತಿದೆ. ಇದರಿಂದ ಸೋಂಕು ಮತ್ತಷ್ಟು ಹೆಚ್ಚಾಗ ಬಹುದುಎಂದು ಲಾಡ್ಜ್ ಸುತ್ತಮುತ್ತ ಲಿನ ನಿವಾಸಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಕೆಲ ಹೋಟೆಲ್‌ಗಳಿಂದ ಹತ್ತರಿಂದ ಹದಿನೈದು ಅಡಿಯಷ್ಟು ದೂರದಲ್ಲಿಯೇ ವಾಸದ ಮನೆಗಳಿವೆ. ಎಟಿಎಂ ಕೇಂದ್ರಗಳಿವೆ. ಬ್ಯಾಂಕುಗಳಿವೆ. ಇಂತಹ ಜನ ನಿಬಿಡ ಪ್ರದೇಶ ಕ್ವಾರಂಟೈನ್‌ಗೆ ಸುರಕ್ಷಿತವೇ?

ಸದ್ಯ ಕೆಲಕಡೆ ಕ್ವಾರಂಟೈನ್‌ ಇಟ್ಟಿರುವ ಪ್ರದೇಶಗಳೇ ಸುರಕ್ಷಿತವಾಗಿಲ್ಲ. ಕ್ವಾರಂಟೈನ್‌ ಇಟ್ಟಿರುವ ಹೋಟೆಲ್‌ಗೆ ಓರ್ವ ಪೊಲೀಸ್ ಸಿಬ್ಬಂದಿ ಮಾತ್ರ ನಿಯೋಜಿಸಲಾಗಿದೆ. ಗೇಟ್ ಮುಂಭಾಗ ಕುಳಿತ ಇವರು ಹಿಂಬದಿಯ ಕಿಟಕಿಗಳಲ್ಲಿ ಉಗಿಯುವುದನ್ನು ನಿಯಂತ್ರಿಸ ಲಾರರು. ಜೊತೆಗೆ ತಮ್ಮವರು ಇಂತಹ ಕಡೆ ಇದ್ದಾರೆ ಎಂದು ಕೈ ಸನ್ನೆ ಮಾಡುತ್ತಾ ಬಂದು ನಿಲ್ಲುವವರೂ ಹೆಚ್ಚಾಗುತ್ತಿದ್ದಾರೆ.

ಲಾಕ್‌ಡೌನ್‌ ಆರಂಭವಾದಾಗಿನಿಂದ ಚಾಚೂ ತಪ್ಪದೇ ಪಾಲಿಸಿ, ಮನೆಯಲ್ಲಿಯೇ ಇದ್ದು, ವ್ಯಾಪಾರಗಳನ್ನು ಬಿಟ್ಟು ನಾವೆಲ್ಲಾ ಸ್ಪಂದಿಸುತ್ತಿದ್ದೇವೆ. ಆದರೆ ನಿರ್ಲಕ್ಷ್ಯ ಮಾಡಿ ಸೋಂಕು ಹಚ್ಚಿಸಿಕೊಂಡು ಬಂದವರು ಇಲ್ಲಿ ಯೂ ಎಚ್ಚರಿಕೆ ವಹಿಸುತ್ತಾರೆ ಎಂಬ ಗ್ಯಾರಂಟಿ ಏನು? ಎಂಬುದು ಜನತೆಯ ಪ್ರಶ್ನೆಯಾಗಿದೆ. 

ನಗರದ ಹೊರ ಭಾಗದಲ್ಲಿ ಸಾಕಷ್ಟು ವಸತಿ ಶಾಲೆಗಳಿವೆ, ಗೋಡೌನ್‌ಗಳಿವೆ, ನಮ್ಮದೇ ದೇಶದ ಕೆಲ ನಗರಗಳಲ್ಲಿ ಹೊರ ಭಾಗದಲ್ಲಿ ತಾತ್ಕಾಲಿಕ ಆಸ್ಪತ್ರೆ, ಶೆಡ್‌ಗಳನ್ನು ನಿರ್ಮಿಸಿದ ಉದಾಹರಣೆಗಳಿವೆ. ಇಲ್ಲಿಯೂ ಆ ರೀತಿ ಮಾಡಿಕೊಳ್ಳಬಹುದು. ಇತ್ತೀಚೆಗೆ ಹಳ್ಳಿಗರೇ ಯಾರೊಬ್ಬರನ್ನೂ ಒಳ ಬಿಟ್ಟುಕೊಳ್ಳುತ್ತಿಲ್ಲ. ಈ ವೇಳೆ ಜನರ ಮಧ್ಯೆ ಶಂಕಿತರನ್ನು ತಂದು ಇಟ್ಟರೆ ಸೋಂಕು ಮತ್ತಷ್ಟು ಹೆಚ್ಚಾಗಬಹುದು.

ಕಮಿಟಿ ರಚನೆ ಸೂಕ್ತ : ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಸೋಂಕು ನಿಯಂ ತ್ರಣಕ್ಕೆ ಸಾಕಷ್ಟು ಶ್ರಮಿಸುತ್ತಿವೆ. ಕೆಲ ವೇಳೆ ಅವರಿಗೆ ಕೆಲ ನಿರ್ಧಾರ ತೆಗೆದುಕೊಳ್ಳಲು ಸಮಯವೂ ಇಲ್ಲದಿರಬಹುದು. ನಗರದಲ್ಲಿನ ಬುದ್ದಿವಂತರು, ಪ್ರೊಫೆಸರ್‌ಗಳು, ವ್ಯಾಪಾರ ಸ್ಥರು ಮುಂತಾದ ಕೆಲವರ ಕಮಿಟಿ ರಚಿಸಿ ಸಲಹೆ ಕೇಳಬಹುದು. ಇದರಿಂದ ಜಿಲ್ಲಾಡಳಿತದ ನಿರ್ಧಾರ ಸಮರ್ಪಕವೋ ಅಥವಾ ಬೇರೇನಾ ದರೂ ಸಲಹೆಗಳಿವೆಯೋ ಎಂಬುದು ಕಮಿಟಿಯಿಂದ ತಿಳಿಯಬಹುದಾಗಿದೆ ಎಂಬುದೂ ಸಹ ಕೆಲವರ ಸಲಹೆಯಾಗಿದೆ.