October 3, 2022
Janathavani

ಮಧ್ಯ ಕರ್ನಾಟಕದ ಆಪ್ತ ಒಡನಾಡಿ

ಹರಪನಹಳ್ಳಿ ಮೇಗಳಪೇಟೆ ಶಾಲೆಯ ಶತಮಾನೋತ್ಸವಕ್ಕೆ ಸಿದ್ಧತೆ

ಹರಪನಹಳ್ಳಿ,ಸೆ.29- ಪಟ್ಟಣದ ಪ್ರತಿಷ್ಠಿತ ಶಾಲೆಗಳಲ್ಲಿ ಒಂದಾದ ಮೇಗಳ ಪೇಟೆಯ ಸರ್ಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಪೂರ್ವಭಾವಿ ಸಭೆಯನ್ನು ಶಾಲೆಯ ಆವರಣದಲ್ಲಿ   ನಡೆಸಲಾಯಿತು.

ಶಾಲಾ ಶತಮಾನೋತ್ಸವ ಸಮಿತಿಯ ಅಧ್ಯಕ್ಷ ಪಾರಸ್‌ಮಲ್ ಜೈನ್ ಮಾತನಾಡಿ, ಈ ಶಾಲೆಯಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಇಂದು    ಉನ್ನತ  ಅಧಿಕಾರಿಗಳಾಗಿದ್ದಾರೆ. ಆ ಎಲ್ಲ  ಹಳೆಯ ವಿದ್ಯಾರ್ಥಿಗಳ ಸಹಾಯದಿಂದ  ಅದ್ಧೂರಿಯಾಗಿ  ಶತಮಾನೋತ್ಸವ ಆಚರಿಸಬೇಕು ಎಂದು ನುಡಿದರು.

 ಪುರಸಭೆ  ಅಧ್ಯಕ್ಷ  ಹರಾಳ್ ಹೆಚ್. ಎಂ. ಅಶೋಕ ಮಾತನಾಡಿ, ಶತ ಮಾನೋತ್ಸವ ಆಚರಿಸಿಕೊಳ್ಳುತ್ತಿರುವ ಈ ಶಾಲೆಯ ಹಳೆ ವಿದ್ಯಾರ್ಥಿಗಳು ಎಲ್ಲರೂ ಸಂಘಟಿತರಾಗಿ ಕಾರ್ಯಕ್ರಮ ವನ್ನು ಯಶಸ್ವಿಗೊಳಿಸಬೇಕು. ಕಾರ್ಯ ಕ್ರಮವನ್ನು ಒಂದೇ ದಿನದಲ್ಲಿ ಪೂರ್ತಿ ಗೊಳಿಸಲು ಸಾಧ್ಯವಿಲ್ಲ.   ಎರಡು ದಿನ ಗಳ ಕಾಲ ಕಾರ್ಯಕ್ರಮವನ್ನು ನಡೆಸು ವುದು ಸೂಕ್ತ. ಅದಕ್ಕೆ   ನನ್ನ ಸಹಕಾರ ಸದಾ ಇರುತ್ತದೆ ಎಂದು ತಿಳಿಸಿದರು.

ಪಿಎಲ್‌ಡಿ ಬ್ಯಾಂಕ್  ನಿರ್ದೇಶಕ ಪಾಟೀಲ್ ಬೆಟ್ಟನಗೌಡ, ಪುರಸಭೆ ಮಾಜಿ ಅಧ್ಯಕ್ಷ ಇಜಂತ್ಕರ್ ಮಂಜು ನಾಥ್,  ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಕೋರಿಶೆಟ್ಟಿ ಉಚ್ಚೆಂಗೆಪ್ಪ, ಮುಖ್ಯೋಪಾಧ್ಯಾಯ ಸಲೀಂ ಉಳ್ಳಿ ಕೊಟ್ರಪ್ಪ ಮಾತನಾಡಿದರು.  

ಈ ಸಂದರ್ಭದಲ್ಲಿ ಪುರಸಭೆ ಉಪಾಧ್ಯಕ್ಷರಾದ ಭೀಮವ್ವ ನಿಟ್ಟೂರು, ಪುರಸಭೆ ಸದಸ್ಯ ಜಾವೀದ್,  ಎಸ್‌ಡಿಎಂಸಿ  ಅಧ್ಯಕ್ಷರಾದ  ರೇಖಮ್ಮ, ಸದಸ್ಯ ಪಟ್ನಾಮದ ಬಸವರಾಜ್, ನಿವೃತ್ತ ಶಿಕ್ಷಕಿಯರಾದ ಲಲಿತಮ್ಮ, ಸಿದ್ದಮ್ಮ, ನಿವೃತ್ತ ಶಿಕ್ಷಕ ಶರಣಪ್ಪ, ಚಂದ್ರಶೇಖರಯ್ಯ, ಕೊಟ್ರಯ್ಯ ಮುಂತಾದವರು ಉಪಸ್ಥಿತರಿದ್ದರು.

Share via
Copy link
Powered by Social Snap