ಸುದ್ದಿ ಸಂಗ್ರಹ

Home ಸುದ್ದಿ ಸಂಗ್ರಹ

ಅವೈಜ್ಞಾನಿಕ ರಸ್ತೆ ನಿರ್ಮಾಣ – ಭ್ರಷ್ಟಾಚಾರಕ್ಕೆ ದಾರಿ

ನಗರ ಪಾಲಿಕೆಯ 17ನೇ ವಾರ್ಡ್‍ನ ಪಿ.ಜೆ.ಬಡಾವಣೆಯ  ಡಾ|| ಶಿವಲಿಂಗಪ್ಪನವರ ಮನೆಯಿಂದ ಮಹಾವೀರ ವೃತ್ತದವರೆಗೆ ನಿರ್ಮಿಸುತ್ತಿರುವ ಕಾಂಕ್ರೀಟ್ ರಸ್ತೆ ಕಾಮಗಾರಿ ಸಂಪೂರ್ಣವಾಗಿ ಅವೈಜ್ಞಾನಿಕವಾಗಿದ್ದು, ಈ ವಾರ್ಡಿನ ಪಾಲಿಕೆ ಸದಸ್ಯ ಬಿ.ಜೆ.ಅಜಯ್ ಕುಮಾರ್ ಅವರು, ಭ್ರಷ್ಟಾಚಾರಕ್ಕೆ ದಾರಿ ಮಾಡಿಕೊಡುತ್ತಿದ್ದಾರೆ

ದಾವಣಗೆರೆ ಅರ್ಬನ್ ಬ್ಯಾಂಕಿನ ನಿರ್ದೇಶಕರಾಗಿ ಅರ್ಚನಾ ರುದ್ರಮುನಿ

ದಾವಣಗೆರೆ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿನ ನಿರ್ದೇಶಕರಾಗಿ ಸಾಮಾಜಿಕ ಸೇವಾ ಕಾರ್ಯಕರ್ತರಾದ ಶ್ರೀಮತಿ ಎ.ಆರ್. ಅರ್ಚನಾ ನೇಮಕಗೊಂಡಿದ್ದಾರೆ.

ಹುಲ್ಲನ್ನು ಗೋಶಾಲೆಗೆ ಮಾರಾಟ ಮಾಡಲು ಮನವಿ

ಆವರಗೆರೆ ಬಳಿಯ ಶ್ರೀ ಭಗವಾನ್ ಮಹಾವೀರ ಗೋಶಾಲೆಯಲ್ಲಿ 550 ಹಸು ಮತ್ತು ಕರುಗಳನ್ನು ಸಾಕಲಾಗಿದ್ದು, ಈ ಬಾರಿ  ಅತಿವೃಷ್ಟಿ ಯಿಂದ ಹುಲ್ಲು ಕಡಿಮೆ ಪ್ರಮಾಣದಲ್ಲಿ ಬರುತ್ತಿದೆ.

ಡಾ.ಅನಿತಾ ಹೆಚ್.ದೊಡ್ಡಗೌಡರ್‌ಗೆ ಜಿಲ್ಲಾಡಳಿತದಿಂದ ರಾಜ್ಯೋತ್ಸವ ಗೌರವ

ಶಿಕ್ಷಣ ಮತ್ತು ಸಾಹಿತ್ಯ ಕ್ಷೇತ್ರಗಳಲ್ಲಿನ ಸೇವೆಯನ್ನು ಪರಿಗಣಿಸಿ, ನಗರದ ಎಸ್‌.ಎಸ್‌.ಎಂ.ಬಿ. ಶಿಕ್ಷಣ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾದ ಡಾ. ಅನಿತಾ ಹೆಚ್. ದೊಡ್ಡಗೌಡರ್ ಅವರನ್ನು ರಾಜ್ಯೋತ್ಸವದ ಗೌರವ ಪುರಸ್ಕಾರ ನೀಡುವುದರ ಮೂಲಕ ಸನ್ಮಾನಿಸಲಾಯಿತು.

ವೈಮಾನಿಕ ಸಂಪರ್ಕ ಕಡಿತದಿಂದ ರೂಪಾಂತರಿ ತಡೆಯಲಾಗದು

ಸಿಡ್ನಿ : ಕೊರೊನಾ ವೈರಸ್ ರೂಪಾಂತರಿ ಜಾಗತಿಕವಾಗಿ ಹರಡುವುದನ್ನು ತಡೆಯಲು ಹಲವಾರು ದೇಶಗಳು ವೈಮಾನಿಕ ಸಂಪರ್ಕದ ಮೇಲೆ ನಿಷೇಧ ಹೇರಿವೆ. ಆದರೆ, ಈ ರೀತಿಯ ನಿಷೇಧಗಳು ವೈರಸ್ ತಡೆಯಲು ಸಾಧ್ಯವೇ ಎಂಬ ಬಗ್ಗೆ ಪ್ರಶ್ನೆಗಳು ಹುಟ್ಟಿಕೊಂಡಿವೆ.

ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ : ಗಂಭೀರ ಗಾಯ

ಮನೆಯ ಪಕ್ಕದಲ್ಲಿ ಆಟವಾಡುತ್ತಿದ್ದ ಏಳು ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿದ್ದು, ಬಾಲಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ಸ್ಥಳೀಯ ಬಾಷಾ ನಗರದಲ್ಲಿ ನಡೆದಿದೆ. 

ಎಡೆಕುಂಟೆ ಹೊಡೆದ ಕಾಗಿನೆಲೆ ಶ್ರೀ

ಎಡೆಕುಂಟೆ ಹೊಡೆದ ಕಾಗಿನೆಲೆ ಶ್ರೀ

ಕಾಗಿನೆಲೆ ಕನಕ ಗುರುಪೀಠದ ಬೆಳ್ಳೂಡಿ ಶಾಖಾ ಮಠದ ಬಿಳಿ ಜೋಳದ ಹೊಲದಲ್ಲಿ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಎಡೆಕುಂಟೆ ಹೊಡೆಯುವ ಮೂಲಕ ಗಮನ ಸೆಳೆದರು.

ಬಾಪೂಜಿ ಬ್ಯಾಂಕ್‌ನ 9 ಜನ ಉದ್ಯೋಗಿಗಳಿಗೆ ಡಿಸ್ಟಿಂಕ್ಷನ್

ಕರ್ನಾಟಕ ರಾಜ್ಯ ಪಟ್ಟಣ ಸಹಕಾರ ಬ್ಯಾಂಕುಗಳ ಮಹಾಮಂಡಳ ಬೆಂಗಳೂರು ಇವರು ಪ್ರತಿ ವರ್ಷವೂ ನಡೆಸುವ ಡಿಪ್ಲೋಮಾ ಇನ್ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿಂಗ್ ಮ್ಯಾನೇಜ್ ಮೆಂಟ್ ಕೋರ್ಸ್ ಪರೀಕ್ಷೆಯಲ್ಲಿ ನಗರದ ಪ್ರತಿಷ್ಟಿತ ಬಾಪೂಜಿ ಕೋ ಆಪರೇಟಿವ್ ಬ್ಯಾಂಕ್ ನ 9 ಜನ ಉದ್ಯೋಗಿಗಳು ಡಿಸ್ಟಿಂಕ್ಷನ್ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ಕಾರ್ತಿಕ ಮಾಸ ಮುಗಿಯುವವರೆಗೂ ಮಳೆ : ಕೋಡಿಮಠ ಶ್ರೀಗಳ ಭವಿಷ್ಯ

ಧಾರವಾಡ, : ರಾಜ್ಯದಲ್ಲಿ ವರುಣನ ರುದ್ರನರ್ತನಕ್ಕೆ ಜನಜೀವನ ತತ್ತರಿಸಿ ಹೋಗಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಅಕ್ಷರಶಃ ಜನಜೀವನ ಅಸ್ತವ್ಯಸ್ತಗೊಂಡಿದೆ. ಹಲವೆಡೆ ರೈತರ ಬೆಳೆಗಳು

ಹರಿಹರ ತಾ.ನಲ್ಲಿ ಬೆಳೆ ನಾಶ : ತಹಶೀಲ್ದಾರ್ ಗಿರೀಶ್ ಭೇಟಿ

ಹರಿಹರ ತಾ.ನಲ್ಲಿ ಬೆಳೆ ನಾಶ : ತಹಶೀಲ್ದಾರ್ ಗಿರೀಶ್ ಭೇಟಿ

ದೇವರ ಬೆಳಕೆರೆ ಪಿಕಪ್ ಡ್ಯಾಂ ಹಿನ್ನೀರು ಹೆಚ್ಚಾದ ಪರಿಣಾಮ 200 ಎಕರೆಗಳಿಗಿಂತಲೂ ಹೆಚ್ಚು ಪ್ರದೇಶದಲ್ಲಿ ಬೆಳೆದ ಬೆಳೆ ನೀರಿನಲ್ಲಿ ಮುಳುಗಡೆಯಾಗಿದ್ದು, ದಾವಣಗೆರೆಯ ತಹಶೀಲ್ದಾರ್ ಗಿರೀಶ್ ಭೇಟಿ ನೀಡಿ ಪರಿಶೀಲಿಸಿದರು.

ಕರಾಳ ಕೃಷಿ ಮಸೂದೆಗಳ ವಾಪಸ್ ಸ್ವಾಗತಾರ್ಹ

ದೇಶದ ರೈತರ ಮೇಲೆ ವಿಧಿಸಿದ್ದ ಮೂರು ಕರಾಳ ಕೃಷಿ ಮಸೂದೆಗಳನ್ನು ವಾಪಸ್‌ ಪಡೆದಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಜಿಲ್ಲಾ ಜೆಡಿಎಸ್ ಕಾರ್ಯಾಧ್ಯಕ್ಷ ಗಣೇಶ್ ದಾಸಕರಿಯಪ್ಪ ಸ್ವಾಗತಿಸಿದ್ದಾರೆ.

ಕೃಷಿ ಕಾಯ್ದೆ ಹಿಂಪಡೆ : ಎಸ್ಸೆಸ್ ಸ್ವಾಗತ

ರೈತರಿಗೆ ಮಾರಕವಾಗಿದ್ದ ಮೂರು ಕೃಷಿ ಕಾಯಿದೆಗಳನ್ನು ಕೇಂದ್ರ ಸರ್ಕಾರ ವಾಪಸ್ ತೆಗೆದುಕೊಂಡಿರುವುದನ್ನು  ಹಿರಿಯ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಮತ್ತು ಮಾಜಿ ಸಚಿವ ಶಾಮನೂರು ಮಲ್ಲಿಕಾರ್ಜುನ್ ಸ್ವಾಗತಿಸಿದ್ದಾರೆ.

ರಾಜ್ಯದ ಶೇ. 60ರಷ್ಟು ಪ್ರದೇಶದಲ್ಲಿ ಕುಡಿಯುವ ನೀರಿನಲ್ಲಿ ಅಗತ್ಯ ಪ್ರಮಾಣಕ್ಕಿಂತ ಹೆಚ್ಚು ಫ್ಲೋರೈಡ್‌

ರಾಜ್ಯದಲ್ಲಿ ಶೇಕಡ 60ರಷ್ಟು ಪ್ರದೇಶದಲ್ಲಿ ಕುಡಿಯುವ ನೀರಿನಲ್ಲಿ ಅಗತ್ಯ ಪ್ರಮಾಣಕ್ಕಿಂತ ಹೆಚ್ಚು ಫ್ಲೋರೈಡ್‌, ಶೇ. 20ರಷ್ಟು ಅತ್ಯಧಿಕ ನೈಟ್ರೇಟ್‌, ಮತ್ತು ಶೇ. 38ರಷ್ಟು ಸೂಕ್ಷ್ಮಾಣುಗಳಿಂದ ಕಲುಷಿತವಾಗಿ ಜನರು ರೋಗ-ರುಜಿನಗಳಿಗೆ ತುತ್ತಾಗುತ್ತಿದ್ದಾರೆ.

ಈಶ್ವರ, ಆಂಜನೇಯ, ಕುಕ್ಕುವಾಡೇಶ್ವರಿ ದೇವಸ್ಥಾನಗಳ ಉದ್ಘಾಟನೆ

ತಾಲ್ಲೂಕಿನ ಅಣಬೇರು ಗ್ರಾಮದಲ್ಲಿ ನಾಡಿದ್ದು ದಿನಾಂಕ 13ರ ಶನಿವಾರ ಮತ್ತು 14 ರ ಭಾನುವಾರ ಶ್ರೀ ಈಶ್ವರ, ಶ್ರೀ ಆಂಜನೇಯ ಸ್ವಾಮಿ, ಶ್ರೀ ಕುಕ್ಕುವಾಡೇಶ್ವರಿ ದೇವಿ ದೇವಸ್ಥಾನಗಳ ಉದ್ಘಾಟನೆ, ಮೂರ್ತಿ ಪ್ರತಿಷ್ಠಾಪನೆ ಮತ್ತು ಕಳಸಾರೋಹಣ ಸಮಾರಂಭ ಹಮ್ಮಿಕೊಳ್ಳಲಾಗಿದೆ.

ದೇಶದಲ್ಲಿ ಗೊಬ್ಬರದ ಕೊರತೆ ಇಲ್ಲ

ಕಳೆದ ಏಳು ವರ್ಷಗಳಲ್ಲಿ ದೇಶದಲ್ಲಿ ಎಲ್ಲೂ ಬೀಜ ಹಾಗೂ ಗೊಬ್ಬರದ ಕೊರತೆಯಾಗಿಲ್ಲ. ಮಧ್ಯವರ್ತಿಗಳು ಕೊರತೆ ಇದೆ ಎಂದು ರೈತರಲ್ಲಿ ಆತಂಕ ಮೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಕೇಂದ್ರ ರಸಗೊಬ್ಬರ ಖಾತೆ ಅಧೀನ ಸಚಿವ ಭಗವಂತ ಖೂಬಾ ಹೇಳಿದ್ದಾರೆ.

ರೈತರ ಕುಂದು – ಕೊರತೆ ನಿವಾರಣೆ ಅಗತ್ಯ ಕ್ರಮ : ತಹಶೀಲ್ದಾರ್ ಗಿರೀಶ್

ಗ್ರಾಮೀಣ ರೈತರ ಜಮೀನಿನ ಸಮಸ್ಯೆಗಳನ್ನು ಇತ್ಯರ್ಥಗೊಳಿಸುವ ಸಲುವಾಗಿ ಇಲ್ಲಿನ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ತಹಶೀಲ್ದಾರ್ ಸಮ್ಮುಖದಲ್ಲಿ ಕುಂದುಕೊರತೆ ಸಭೆ ಕರೆಯಲಾಗಿತ್ತು.

ಅಕ್ರಮ ಸಾಗಾಟದ 28 ಗೋವುಗಳನ್ನು ರಕ್ಷಿಸಿದ ಹಿಂದೂ ಜಾಗರಣ ವೇದಿಕೆ

ಗೋವುಗಳ ಅಕ್ರಮ ಸಾಗಾಟದ ಜಾಲ ಪತ್ತೆ ಮಾಡಿರುವ ಇಲ್ಲಿನ ಹಿಂದೂ ಜಾಗರಣ ವೇದಿಕೆಯು ಕಂಟೇನರ್ ಮತ್ತು ಲಾರಿಗಳಲ್ಲಿ ಸಾಗಿಸಲಾಗುತ್ತಿದ್ದ 28 ಗೋವುಗಳನ್ನು ರಕ್ಷಿಸಿರುವ ಘಟನೆ ನಗರದ ಹೊರ ವಲಯದಲ್ಲಿ ಭಾನುವಾರ ರಾತ್ರಿ ನಡೆದಿದೆ. 

ಗಾಳಿ-ಮಳೆಗೆ 5 ವಾಹನ ಜಖಂ

ಹರಿಹರ ನಗರದಲ್ಲಿ ಸೋಮವಾರ ಸಂಜೆ ಬೀಸಿದ ಭಾರೀ ಗಾಳಿ ಹಾಗೂ ಮಳೆ ಯಿಂದಾಗಿ ಆರಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದ್ದು, ಮರ ಬಿದ್ದು ಐದು ವಾಹನಗಳು ಜಖಂಗೊಂಡಿವೆ.

30 ರಂದು ನಗರದಲ್ಲಿ ಪಂಚಮಸಾಲಿ ಸಮಾಜದ ಬೃಹತ್ ಸಮಾವೇಶ

ಲಿಂಗಾಯತ ಪಂಚಮಸಾಲಿ ಪ್ರತಿಜ್ಞಾ ಪಂಚಾಯತ್ ಅಭಿಯಾನ ಹಾಗೂ ರಾಜ್ಯ ಯುವ ಘಟಕದ ಅಧ್ಯಕ್ಷ ಬಿ.ಜೆ. ಅಜಯ್ ಕುಮಾರ್ ಪದಗ್ರಹಣ ಸಮಾರಂಭ ಇದೇ ದಿನಾಂಕ 30 ರ ಗುರುವಾರ ಸಂಜೆ  5 ಗಂಟೆಗೆ ನಗರದ ತ್ರಿಶೂಲ್ ಕಲಾ ಭವನದಲ್ಲಿ ನಡೆಯಲಿದೆ

ದೂಡಾ ನಿವೇಶನಕ್ಕೆ 22 ಸಾವಿರ ಅರ್ಜಿ

ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದಿಂದ ನಡೆಸಲಾದ ನಿವೇಶನ ಬೇಡಿಕೆ ಸಮೀಕ್ಷೆಯಲ್ಲಿ 22 ಸಾವಿರದಷ್ಟು ಅರ್ಜಿಗಳು ದಾಖಲಾಗಿವೆ.

ಸಿಎಂ ನೇತೃತ್ವದಲ್ಲೇ ಚುನಾವಣೆ

ಯಾರೇ ಸಿಎಂ ಆಗಲಿ ಅವರ ನೇತೃತ್ವದಲ್ಲೇ ಚುನಾವಣೆ ಆಗೋದು. ಸಿಎಂ ಇದ್ದಾರೆ ಎಂದ ಮೇಲೆ ಅವರ ನೇತೃತ್ವದಲ್ಲೇ ಮುಂಬರುವ ಚುನಾವಣೆಗೆ ಹೋಗಬೇಕು.‌ 

ಅವೈಜ್ಞಾನಿಕ ಆಸ್ತಿ ತೆರಿಗೆ ಹೆಚ್ಚಳ ಖಂಡಿಸಿ ನಿರ್ಣಯ ಕೈಗೊಳ್ಳಲು ಆಗ್ರಹ

ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಹೆಚ್ಚಳ ಅವೈಜ್ಞಾನಿಕವಾಗಿದ್ದು, ಮಹಾನಗರ ಪಾಲಿಕೆ ತಕ್ಷಣ ಅವೈಜ್ಞಾನಿಕ ಆಸ್ತಿ ತೆರಿಗೆಯನ್ನು ರದ್ದು ಪಡಿಸಿ ಹಿಂದಿನ ಆಸ್ತಿ ತೆರಿಗೆಯನ್ನೇ ಮುಂದುವರೆಸಬೇಕೆಂದು ಪಾಲಿಕೆ ಮಾಜಿ ಸದಸ್ಯರೂ, ನಗರಸಭೆ ಮಾಜಿ ಅಧ್ಯಕ್ಷರೂ ಆದ ದಿನೇಶ್ ಕೆ.ಶೆಟ್ಟಿ ಅವರು ಒತ್ತಾಯಿಸಿದ್ದಾರೆ.

ಜಿಲ್ಲೆಯಲ್ಲಿ 5 ಪಾಸಿಟಿವ್ 13 ಗುಣ

ಜಿಲ್ಲೆಯಲ್ಲಿ ಸೋಮವಾರ 5 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, 13 ಜನ ಗುಣಮುಖರಾಗಿದ್ದಾರೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಬೋನಿಗೆ ಬಿದ್ದ ಚಿರತೆ

ಚನ್ನಗಿರಿ ತಾಲ್ಲೂಕಿನ ದಾಗಿನಕಟ್ಟೆ-ಯಲೋದಳ್ಳಿ ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಕೊನೆಗೂ ಅರಣ್ಯ ಇಲಾಖೆಯ ಯಶಸ್ವೀ ಕಾರ್ಯಾಚರಣೆಗೆ ಸೆರೆ ಸಿಕ್ಕಿದೆ.

ಜಿಲ್ಲೆಯಲ್ಲಿ 12 ಪಾಸಿಟಿವ್ 14 ಗುಣಮುಖ

ಜಿಲ್ಲೆಯಲ್ಲಿ ಗುರುವಾರ 12 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, 14 ಜನ ಗುಣಮುಖರಾಗಿದ್ದಾರೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ದಾವಣಗೆರೆ ತಾಲ್ಲೂಕಿನಲ್ಲಿಯೇ 12 ಜನರಿಗೆ ಸೋಂಕು ಕಾಣಿಸಿಕೊಂಡಿದೆ.