ಹೊನ್ನಾಳಿ ತಾಲ್ಲೂಕಿನ ತರಗನಹಳ್ಳಿ ಗ್ರಾಮದಲ್ಲಿ ಶುಕ್ರವಾರ ಶ್ರೀ ಬಸವೇಶ್ವರ ದೇವರ ರಥೋತ್ಸವ ಮತ್ತು ಸ್ವಾಮಿಯ ಹೂವಿನ ಅಡ್ಡಪಲ್ಲಕ್ಕಿ ಮಹೋತ್ಸವ ಭಕ್ತರ ಸಮ್ಮುಖದಲ್ಲಿ ನೆರವೇರಿತು.
ಹೊನ್ನಾಳಿ

ಹೊನ್ನಾಳಿ : ರಾಜ್ಯ ಬಜೆಟ್ಗೆ ಖಂಡನೆ
ಹೊನ್ನಾಳಿ : ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಎಐಟಿಯುಸಿ ಫೆಡರೇಷನ್ ಹೊನ್ನಾಳಿ ಘಟಕದ ವತಿಯಿಂದ ಪಟ್ಟಣದ ತಾಲ್ಲೂಕು ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಯಿತು.

ಪಂಚಾಯಿತಿ ನೌಕರರಿಗೆ ಇಎಫ್ಎಂಎಸ್ ಮೂಲಕವೇ ವೇತನ ಪಾವತಿಯಾಗಲಿ
ಹೊನ್ನಾಳಿ : ಗ್ರಾಮ ಪಂಚಾಯಿತಿಯ ಎಲ್ಲಾ ನೌಕರರಿಗೆ 15 ನೇ ಹಣಕಾಸು ಯೋಜನೆಯಡಿ ಏಕಕಾಲದಲ್ಲಿ ವೇತನ ನೀಡುವಂತೆ ಇಓ ಕ್ರಿಯಾಯೋಜನೆ ತಯಾರಿಸು ವಂತೆ ಶಾಸಕ ರೇಣುಕಾಚಾರ್ಯ ಹೇಳಿದರು.

ಸಭೆಗೆ ಗೈರಾದ ಬಸ್ ಡಿಪೋ ಮ್ಯಾನೇಜರ್
ಹೊನ್ನಾಳಿ : ಪೋಕ್ಸೋ ಕಾಯ್ದೆಯ ಸರಿಯಾದ ತಿಳಿವಳಿಕೆ ಇಲ್ಲದೇ ಎಸ್ಸಿ-ಎಸ್ಟಿ ಜನಾಂಗದ ಜನತೆ ಅನೇಕ ತೊಂದರೆ ಅನುಭವಿಸುವಂತಾಗಿದೆ. ಇದನ್ನು ಸರಳೀಕರಣ ಗೊಳಿಸಿ ಜನರಲ್ಲಿ ಜಾಗೃತಿ ಮೂಡಿಸುವಂತೆ ದಿಡಗೂರು ರುದ್ರೇಶ್ ಅಧಿಕಾರಿಗಳನ್ನು ಒತ್ತಾಯಿಸಿದ ಪ್ರಸಂಗ ನಡೆಯಿತು.

ಹೊನ್ನಾಳಿ : 1.85 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ದಿ ಕಾರ್ಯಗಳಿಗೆ ಶಂಕುಸ್ಥಾಪನೆ
ಹೊನ್ನಾಳಿ ತಾಲ್ಲೂಕಿನ ರೈತ ಸಮುದಾಯದ ಅನುಕೂಲಕ್ಕೆ ಎಪಿಎಂಸಿ ಆವರಣದಲ್ಲಿ ಮಳಿಗೆ ಹಾಗೂ ಸಂತೆಕಟ್ಟೆಗಳ ನಿರ್ಮಾಣಕ್ಕೆ ಶಾಸಕ ಎಂಪಿ ರೇಣುಕಾಚಾರ್ಯ ಶಂಕುಸ್ಥಾಪನೆ ನೆರವೇರಿಸಿದರು.

ಶೀಘ್ರವೇ ಅವಳಿ ತಾ.ಗಳಲ್ಲಿ ಕೆರೆ ತುಂಬಿಸುವ ಕಾಮಗಾರಿಗಳಿಗೆ ಚಾಲನೆ : ಶಾಸಕ ಎಂಪಿಆರ್
ನ್ಯಾಮತಿ : ಹೊನ್ನಾಳಿ ಮತ್ತು ನ್ಯಾಮತಿ ಅವಳಿ ತಾಲ್ಲೂಕಿನ 94 ಕೆರೆಗಳನ್ನು ತುಂಬಿಸುವ ಮಹತ್ವಾಕಾಂಕ್ಷಿ ಯೋಜನೆಗೆ ಸರ್ಕಾರದಿಂದ ಆಡಳಿತ ಅನುಮೋದನೆ ಸಿಕ್ಕಿದ್ದು, 436 ಕೋಟಿ ವೆಚ್ಚದಲ್ಲಿ ಈ ಕಾಮಗಾರಿ ನಡೆಯಲಿದೆ.

ದೇಶದ ಐಕ್ಯತೆ-ಸಮಗ್ರತೆಗೆ ಒಟ್ಟಾಗಿ ಶ್ರಮಿಸೋಣ
ಹೊನ್ನಾಳಿ : ದೇಶದ ಐಕ್ಯತೆ ಮತ್ತು ಸಮಗ್ರತೆಗೆ ಎಲ್ಲರೂ ಒಟ್ಟಾಗಿ ಅವಿರತವಾಗಿ ಶ್ರಮಿಸಬೇಕು ಎಂದು ಉಪ ತಹಸೀಲ್ದಾರ್ ಬಿ.ಎಂ. ರಮೇಶ್ ಹೇಳಿದರು.

ವಚನ ಸಾಹಿತ್ಯ ಎಲ್ಲಾ ಕಾಲದಲ್ಲೂ ಅತ್ಯವಶ್ಯಕ
ಹೊನ್ನಾಳಿ : ಸಮ-ಸಮಾಜ ನಿರ್ಮಾಣ ಮಾಡಲು ವಚನ ಸಾಹಿತ್ಯ ಎಲ್ಲಾ ಕಾಲಘಟ್ಟಗಳಲ್ಲೂ ಅತ್ಯವಶ್ಯಕವಾಗಿದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಎಚ್.ಎಸ್. ಮಂಜುನಾಥ್ ಕುರ್ಕಿ ಹೇಳಿದರು.

ಪ್ರಗತಿಗೆ ಬುನಾದಿಯಾಗಿರುವ ಶಿಕ್ಷಣಕ್ಕೆ ಪ್ರತಿಯೊಬ್ಬರೂ ಆದ್ಯತೆ ನೀಡಬೇಕು
ಹರಪನಹಳ್ಳಿ : ಶಿಕ್ಷಣ, ಎಲ್ಲಾ ಪ್ರಗತಿಗೆ ಭದ್ರಬುನಾದಿಯಾಗಿದ್ದು ಪ್ರತಿಯೊಬ್ಬರೂ ಶಿಕ್ಷಣಕ್ಕೆ ಆದ್ಯತೆ ನೀಡಬೇಕು ಎಂದು ನೀಲಗುಂದ ಕ್ಷೇತ್ರದ ಜಿಲ್ಲಾ ಪಂಚಾಯ್ತಿ ಸದಸ್ಯ ಹೆಚ್.ಬಿ.ಪರಶುರಾಮಪ್ಪ ಹೇಳಿದರು.

ಹೊನ್ನಾಳಿ ತಾ. ವ್ಯಾಪ್ತಿಗೆ ವಿಸ್ತರಿಸಿದ ಹಿರಿಯ ನಾಗರಿಕರ ಸಂಘ
ಹೊನ್ನಾಳಿ ಪಟ್ಟಣಕ್ಕೆ ಸೀಮಿತ ವಾಗೊಂಡಿದ್ದ ಹಿರಿಯ ನಾಗರಿಕರ ಸಹಕಾರ ಸಂಘವನ್ನು ಇದೀಗ ತಾಲ್ಲೂಕು ವ್ಯಾಪ್ತಿಗೆ ವಿಸ್ತರಿ ಸುವ ಆಸಕ್ತಿ ಹೊಂದಿದೆ ಎಂದು ಸೊಸೈಟಿಯ ಅಧ್ಯಕ್ಷ ಬೆನಕನಹಳ್ಳಿ ಪಿ. ವೀರಪ್ಪ ಹೇಳಿದರು.

ಹೊನ್ನಾಳಿ ಅರ್ಬನ್ ಕ್ರೆಡಿಟ್ ಸೊಸೈಟಿಯಿಂದ ಶೇ.12 ಡಿವಿಡೆಂಡ್
ಹೊನ್ನಾಳಿ ಅರ್ಬನ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯು 50 ಲಕ್ಷ ರೂ.ಗಳ ನಿವ್ವಳ ಲಾಭ ಹೊಂದಿದೆ. 12ರಷ್ಟು ಡಿವಿಡೆಂಡನ್ನು ಸದಸ್ಯರಿಗೆ ನೀಡಲು ತೀರ್ಮಾನಿಸಲಾಗಿದೆ ಎಂದು ಸೊಸೈಟಿಯ ಅಧ್ಯಕ್ಷ ಡಾ. ರಾಜಕುಮಾರ್ ಹೇಳಿದರು.

ಹೊನ್ನಾಳಿಯ ಶಿವ ಕೋ-ಆಪರೇಟಿವ್ ಸೊಸೈಟಿ ಸದಸ್ಯರಿಗೆ ಶೇ.10 ಲಾಭಾಂಶ ಹಂಚಿಕೆ
ಹೊನ್ನಾಳಿ ಶಿವ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯು ತಾಲ್ಲೂಕಿನ ಸುರಹೊನ್ನೆಯಲ್ಲಿ 42 ಲಕ್ಷ ರೂ. ವೆಚ್ಚದ ಶಾಖಾ ಕಟ್ಟಡ ಹೊಂದಿದ್ದು, ಸುಮಾರು 14 ಲಕ್ಷ ರೂ. ವೆಚ್ಚದಲ್ಲಿ ಸಾಸ್ವೆಹಳ್ಳಿ ಶಾಖೆಗೆ ನಿವೇಶನ ಖರೀದಿಸಲಾಗಿದೆ. 5,245 ಸದಸ್ಯರೊಂದಿಗೆ 37 ಕೋಟಿ ರೂ. ದುಡಿಯುವ ಬಂಡವಾಳ ಹೊಂದಿದೆ