ಪಡಿತರ ಆಹಾರ ಧಾನ್ಯ ಹಂಚಿಕೆ

ದಾವಣಗೆರೆ, ಜ.23- 2023 ರ ಜನವರಿಯಲ್ಲಿ ವಿವಿಧ ವರ್ಗದ ಪಡಿತರ ಚೀಟಿದಾರರಿಗೆ ಆಹಾರ ಧಾನ್ಯ ಹಂಚಿಕೆ ಮಾಡಲಾಗಿದೆ.

ಎನ್.ಎಫ್.ಎಸ್.ಎ ಆದ್ಯತಾ ಪಡಿತರ ಚೀಟಿಗಳ ಫಲಾನುಭವಿಗಳಿಗೆ 5 ಕೆ.ಜಿ ಅಕ್ಕಿಯನ್ನು ಜನವರಿ 2023 ರಿಂದ ಡಿಸೆಂಬರ್ 2023ರ ವರೆಗೆ ಆಹಾರ ಧಾನ್ಯಗಳನ್ನು ಉಚಿತವಾಗಿ ವಿತರಿಸುವುದರೊಂದಿಗೆ, 1 ಕೆ.ಜಿ. ಅಕ್ಕಿಯನ್ನು ಹೆಚ್ಚುವರಿಯಾಗಿ ರಾಜ್ಯ ಸರ್ಕಾರದ ವೆಚ್ಚದಲ್ಲಿ ವಿತರಿಸಲು ಆದೇಶಿಸಲಾಗಿದ್ದು, ಪಡಿತರ ಹಂಚಿಕೆ ಮತ್ತು ಎತ್ತುವಳಿ ಆರಂಭ ಹಾಗೂ ಸರ್ಕಾರದಿಂದ ನಿಯೋಜಿತ ಸಂಸ್ಥೆಗಳಿಂದ ಅಕ್ಕಿ ಸರಬರಾಜು ಮಾಡಲು 45 ದಿನಗಳ ಅವಧಿಯನ್ನು ನೀಡಿರುವ ಹಿನ್ನೆಲೆಯಲ್ಲಿ ಅಕ್ಕಿಯನ್ನು ಫೆಬ್ರವರಿಯಲ್ಲಿ ವಿತರಿಸಲಾಗುತ್ತದೆ.

ಅಂತ್ಯೋದಯ ಪಡಿತರ ಚೀಟಿ ಹೊಂದಿದವರಿಗೆ ಪ್ರತಿ ಕಾರ್ಡಿಗೆ 35 ಕೆಜಿ ಅಕ್ಕಿ, ಆದ್ಯತಾ ಪಡಿತರ ಚೀಟಿ ಹೊಂದಿದ ಪ್ರತಿ ಸದಸ್ಯರಿಗೆ 5 ಕೆ.ಜಿ ಅಕ್ಕಿ ಉಚಿತವಾಗಿ ಮತ್ತು ಒಪ್ಪಿಗೆ ನೀಡಿದ ಏಕಸದಸ್ಯ ಎ.ಪಿ.ಎಲ್ ಪಡಿತರ ಚೀಟಿಗಳಿಗೆ 1 ಕೆ.ಜಿ. ಗೆ 15 ರೂ ಗಳಂತೆ ಅಕ್ಕಿಯನ್ನು ವಿತರಿಸಲಾಗುವುದು ಮತ್ತು ಅಂತರ್ ರಾಜ್ಯ/ಜಿಲ್ಲೆ  ಪೋರ್ಟೆಬಿಲಿಟಿ ಜಾರಿಯಲ್ಲಿ ಇರುವುದರಿಂದ ಯಾವುದೇ ವರ್ಗದ
ಪಡಿತರ ಚೀಟಿಗೆ ನ್ಯಾಯಬೆಲೆ ಅಂಗಡಿಗಳಲ್ಲಿ ಉಚಿತವಾಗಿ
ಪಡಿತರ ಪಡೆಯಲು ಅವಕಾಶವಿರುತ್ತದೆ. 

ಪಡಿತರಕ್ಕೆ ಪ್ರತ್ಯೇಕ ರಶೀದಿಯನ್ನು ನೀಡುವಂತೆ ತಾಲ್ಲೂಕಿನ ಎಲ್ಲಾ ಅಂಗಡಿಕಾರರಿಗೆ ತಿಳಿಸಿದ್ದು, ಫಲಾನುಭವಿಗಳು ನ್ಯಾಯಬೆಲೆ ಅಂಗಡಿಗಳಲ್ಲಿ ತಿಂಗಳ ಅಂತ್ಯದವರೆಗೆ ಫಲಾನುಭವಿಗಳು ಬಯೋ ಮೂಲಕ ಕಾರ್ಡಿಗೆ ಬರಬೇಕಾದ ಆಹಾರ ಧಾನ್ಯದ ಪ್ರಮಾಣವನ್ನು ಪಡೆದುಕೊಳ್ಳಲು ತಾಲ್ಲೂಕು ತಹಶೀಲ್ದಾರ್‌ ತಿಳಿಸಿದ್ದಾರೆ.