ಆಮ್ ಪಕ್ಷಕ್ಕೆ ಚಂದ್ರು ಬಸವಂತಪ್ಪ ಜಿಲ್ಲಾಧ್ಯಕ್ಷ

ದಾವಣಗೆರೆ, ಜ.24- ಕರ್ನಾಟಕ ಆಮ್ ಆದ್ಮಿ ಪಕ್ಷಕ್ಕೆ ನೂತನ ಜಿಲ್ಲಾ ಸಮಿತಿ ನೇಮಕವಾಗಿದೆ. ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಚಂದ್ರು ಬಸವಂತಪ್ಪ, ತಾವು ಜಿಲ್ಲಾಧ್ಯಕ್ಷರಾಗಿ ನೇಮಕ ಗೊಂಡಿದ್ದು, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಸಿ.ಆರ್. ಅರುಣ್ ಕುಮಾರ್, ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾಗಿ ಆದಿಲ್ ಖಾನ್ ಎಸ್.ಕೆ. ನೇಮಕಗೊಂಡಿದ್ದಾರೆ ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಸಿ.ಆರ್. ಅರುಣ್ ಕುಮಾರ್, ಆದಿಲ್ ಖಾನ್ ಎಸ್.ಕೆ., ಕೆ.ರವೀಂದ್ರ, ಕೆ.ಟಿ. ಕಲ್ಲೇಶ್, ವಿಕಾಸ್ ಕೆ.ಪಿ.ವಿ. ಉಪಸ್ಥಿತರಿದ್ದರು.