ಹರಪನಹಳ್ಳಿ: ‘ನಟ ಭಯಂಕರ’ ಟ್ರೇಲರ್ ಬಿಡುಗಡೆ

ಹರಪನಹಳ್ಳಿ: ‘ನಟ ಭಯಂಕರ’ ಟ್ರೇಲರ್ ಬಿಡುಗಡೆ

ಹರಪನಹಳ್ಳಿ, ಜ. 13- ಪಟ್ಟಣದ ಹಳೇ ಬಸ್ ನಿಲ್ದಾಣದಲ್ಲಿ ಚಿತ್ರನಟ ಪ್ರಥಮ್ ಅವರು ತಮ್ಮ ಅಭಿನಯದ ನಟ ಭಯಂಕರ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದರು.

ಬಿಜೆಪಿ ಮುಖಂಡ ಮುತ್ತಿಗಿ ವಾಗೀಶ್ ಅವರ ಜನ್ಮದಿನದ ಅಂಗವಾಗಿ ಚಿತ್ರದ ಟ್ರೇಲರ್ ಬಿಡುಗಡೆಗೊಳಿಸಿ  ಮಾತನಾಡಿದ ಪ್ರಥಮ್, ನಟ ಭಯಂಕರ ಚಿತ್ರ ಪ್ರೇಕ್ಷಕರ ಮನಗೆಲ್ಲುತ್ತದೆ ಎಂಬ ನಿರೀಕ್ಷೆಯಲ್ಲಿದ್ದು, ಚಿತ್ರ ಫೆ. 3 ರಂದು ಬಿಡುಗಡೆಗೊಳ್ಳಲಿದೆ. ಚತ್ರಮಂದಿರಕ್ಕೆ ಬಂದು ಚಿತ್ರ ವೀಕ್ಷಿಸುವಂತೆ ಅಭಿಮಾನಿಗಳಲ್ಲಿ ಮನವಿ ಮಾಡಿದರು.

ಮುತ್ತಿಗಿ ಹಾಲಸ್ವಾಮಿ ಮಠದ ಹಾಲಪ್ಪಜ್ಜ ಸ್ವಾಮೀಜಿ ಮಾತನಾಡಿ, ಮುತ್ತಿಗೆ ಎಂಬ ಹೆಸರೇ ಮುತ್ತು ಇದ್ದಂಗೆ. ವಾಗೀಶ ಅವರನ್ನು ಎಲ್ಲರೂ ಸಸಿಗೆ ನೀರು ಹಾಕಿ ಬೆಳೆಸಿದಂತೆ ಬೆಳೆಸಿ, ಅವರು ಹೆಮ್ಮರವಾಗಿ ಬೆಳೆಯಬೇಕೆಂದು ಹೇಳಿದರು. ಬಿಜೆಪಿ ಜಿಲ್ಲಾಧ್ಯಕ್ಷ ಚನ್ನ ಬಸವನಗೌಡ ಮಾತನಾಡಿ, ವಾಗೀಶ ಅವರ ರಾಜಕೀಯ ಜೀವನ ಉಜ್ವಲವಾಗಲಿ ಎಂದು ಹಾರೈಸಿದರು.

ಪ್ರಾಸ್ತಾವಿಕವಾಗಿ ಮುತ್ತಿಗಿ ವಾಗೀಶ್ ಮಾತನಾಡಿದರು. ಸರಿಗಮಪ ಖ್ಯಾತಿಯ ಶಶಿಕಲಾ, ನಟಭಯಂಕರ ಚಿತ್ರದ ನಾಯಕಿ ಚಂದನ ಸೇರಿದಂತೆ ಇತರರು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಬಿ.ಪಿ. ಹರೀಶ್, ಬಿಜೆಪಿ ತಾಲ್ಲೂಕು ಅಧ್ಯಕ್ಷ ಸತ್ತೂರು ಹಾಲೇಶ್, ಪುರಸಭೆ ಅಧ್ಯಕ್ಷ ಹಾರಾಳು ಅಶೋಕ, ಮೈದೂರು ಮಲ್ಲಿಕಾರ್ಜುನ, ಜೆ. ಓಂಕಾರಗೌಡ, ಹಡಗಲಿ ಪುತ್ರೇಶ್, ಬಿ.ವೈ. ವೆಂಕ ಟೇಶ್, ಮುತ್ತಿಗಿ ಅಶೋಕ, ಚನ್ನೇಶಗೌಡ ಮತ್ತಿತರರಿದ್ದರು.