ಸದ್ಗುಣಗಳಿಂದ ಸಚ್ಚಾರಿತ್ರ್ಯ ಬೆಳೆಯುತ್ತದೆ

ಸದ್ಗುಣಗಳಿಂದ ಸಚ್ಚಾರಿತ್ರ್ಯ ಬೆಳೆಯುತ್ತದೆ

ರಾಣೇಬೆನ್ನೂರು,ಜ.13-  ಮಕ್ಕಳು ಸಂಸ್ಕಾರಯುತ ವ್ಯಕ್ತಿತ್ವವನ್ನು ಹೊಂದಿ ಕುಟುಂಬದ ಘನತೆಯನ್ನು ಹೆಚ್ಚಿಸಬೇಕು. ಕೇವಲ ಅಂಕಗಳ ಗಳಿಕೆಯೊಂದೇ ಶಿಕ್ಷಣವಲ್ಲ  ಎಂದು  ನಗರಸಭೆ ಪೌರಾಯುಕ್ತ ಉದಯಕುಮಾರ್  ತಿಳಿಹೇಳಿದರು.

ನಗರದ  ನ್ಯಾಷನಲ್ ಪಬ್ಲಿಕ್ ಶಾಲೆಯ 20ನೇ ವರ್ಷದ ವಾರ್ಷಿಕೋತ್ಸವ `ಸಂವರ್ಧಿನಿ 2022-23’ರ   ಸಮಾರಂಭದಲ್ಲಿ ಮಾತನಾಡುತ್ತ, ಜೀವನ ಮೌಲ್ಯಗಳಿಂದ, ಸದ್ಗುಣಗಳಿಂದ ಮಾತ್ರ ಸಚ್ಚಾರಿತ್ರ್ಯ ಬೆಳೆದು ಬರುತ್ತದೆ ಪ್ರಾಮಾಣಿಕತೆಯನ್ನು ಜೀವನದುದ್ದಕ್ಕೂ ಅಳವಡಿಸಿ ಕೊಳ್ಳಬೇಕು, ನುಡಿದಂತೆ ನಡೆಯಬೇಕು, ನಡೆದಂತೆ ನುಡಿಯಬೇಕು  ಎಂದು ಅವರು ಹಿತ ನುಡಿದರು.  

ಆಡಳಿತ ಮಂಡಳಿ ಪ್ರಧಾನ ಕಾರ್ಯದರ್ಶಿ ನಾಗೇಶ ಮುರಡಣ್ಣವರ ಮಾತನಾಡಿ, ಮಣ್ಣಿಗೆ ಸಂಸ್ಕಾರ ಕೊಟ್ಟರೆ ಮಡಿಕೆಯಾಗುತ್ತದೆ. ಸಗಣಿಗೆ ಸಂಸ್ಕಾರ ಕೊಟ್ಟರೆ ವಿಭೂತಿಯಾಗುತ್ತದೆ. ಚಿನ್ನಕ್ಕೆ ಸಂಸ್ಕಾರ ಕೊಟ್ಟರೆ ಒಡವೆಯಾಗುತ್ತದೆ. ಹಾಗೆಯೇ ಇಂತಹ ಕಾರ್ಯಕ್ರಮದ ಸಂಸ್ಕಾರ ಕೊಟ್ಟರೆ ಮಹದೇವನಾಗುವುದು ನಿಶ್ಚಿತ ಎಂದುತಿಳಿಸಿದರು.

ಸಂಸ್ಥೆಯಲ್ಲಿ ಸುಮಾರು 10 ವರ್ಷ ಗಳಿಂದ ಸೇವೆ ಸಲ್ಲಿಸುತ್ತಿರುವ ಭೋದಕ ಭೋದಕೇತರ ಸಿಬ್ಬಂದಿ ವರ್ಗದವರನ್ನು 75 ನೇ ವರ್ಷದ ಅಮೃತ ಮಹೋತ್ಸವದ ಸವಿನೆನಪಿಗಾಗಿ ಶಿಕ್ಷಕರಿಗೆ ನಗದು ರೂ. 75,000 ಹಾಗೂ ಬೋಧಕೇತರ ಸಿಬ್ಬಂದಿಯವರಿಗೆ ನಗದು ರೂ. 50,000 ಗಳನ್ನು ನೀಡಿ ಸನ್ಮಾನಿಸಲಾಯಿತು. 

ಕಾರ್ಯಕ್ರಮದ ಅಧ್ಯಕತೆ ವಹಿಸಿದ್ದ  ವಾಸುದೇವಸಾ ಪಿ ಲದ್ವಾ, ಸಂವರ್ಧಿನಿಯ ಮಹತ್ವವನ್ನು ವಿವರಿಸಿದರು.

ಆಡಳಿತ ಮಂಡಳಿ ನಿರ್ದೇಶಕರುಗಳಾದ ಡಾ.ಬಿ.ಆರ್. ಸಾವಕಾರ, ಡಾ. ಎಂ.ಎಂ. ಅನಂತ ರಡ್ಡೇರ,   ತುಳಜಪ್ಪ ಲದ್ವಾ,  ಮಲ್ಲಿಕಾರ್ಜುನ ಅಂಗಡಿ,  ವಜ್ರೇಶ್ವರಿ ವಿ. ಲದ್ವಾ, ಪರಶುರಾಮ ಕಬಾಡಿ,   ವಿದ್ಯಾ ಮುರಡಣ್ಣವರ,   ಸುಧಾ ನರಸಗೊಂಡರ,   ಪ್ರಾಚಾರ್ಯ  ಪ್ರಕಾಶ ಎಸ್. ಹಾಗೂ   ಶಾಲೆಯ ಹಂಸಭಾವಿ ಶಾಖೆಯ ಪ್ರಾಚಾರ್ಯ ಇಸ್ಮಾಯಿಲ್ ಉಪಸ್ಥಿತರಿದ್ದರು.  ರಾಜಶ್ರೀ ವರಗಿರಿ ಸ್ವಾಗತಿಸಿದರು. ಪ್ರಾಚಾರ್ಯ  ಪ್ರಕಾಶ ಎಸ್.  ವಾರ್ಷಿಕ ವರದಿ ವಾಚಿಸಿದರು, ಬಸವರಾಜ ಕಂಬಳಿ  ವಂದಿಸಿದರು.