ವೀರೇಂದ್ರ ಹೆಗ್ಗಡೆಯವರ ಸಾಮಾಜಿಕ ಕಾರ್ಯ ಸ್ತುತ್ಯಾರ್ಹ

ವೀರೇಂದ್ರ ಹೆಗ್ಗಡೆಯವರ ಸಾಮಾಜಿಕ ಕಾರ್ಯ ಸ್ತುತ್ಯಾರ್ಹ

ಹರಿಹರ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಶ್ರೀ ಶಾರದೇಶಾನಂದ ಜೀ ಮಹಾರಾಜ್‌ ಶ್ಲ್ಯಾಘನೆ

ದಾವಣಗೆರೆ, ಜ. 23- ಗ್ರಾಮ ಗ್ರಾಮಗಳಲ್ಲಿ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಿ ಜನರಲ್ಲಿ ಸಂಸ್ಕೃತಿ, ಸಂಸ್ಕಾರಗಳೂಂದಿಗೆ  ಧಾರ್ಮಿಕ ಸಾಮರಸ್ಯ  ಮೂಡಿಸುತ್ತಿರುವ ಸಾಮಾಜಿಕ ಕಾಳಜಿಯ ಕಾರ್ಯವನ್ನು ನಿರಂತರವಾಗಿ ಮಾಡುತ್ತಿರುವ ಧರ್ಮಸ್ಥಳದ ಧರ್ಮಾಧಿಕಾರಿ ಡಾ|| ಡಿ. ವೀರೇಂದ್ರ ಹೆಗ್ಗಡೆಯವರ ಕಾರ್ಯ ಸ್ತುತ್ಯಾರ್ಹ ವಾಗಿದೆ ಎಂದು ಹರಿಹರ ರಾಮಕೃಷ್ಣ ವಿವೇಕಾ ನಂದ ಆಶ್ರಮದ ಅಧ್ಯಕ್ಷರಾದ ಶ್ರೀ ಶಾರದೇಶಾ ನಂದ ಜೀ ಮಹಾರಾಜ್‌ ಹೇಳಿದರು.

ಕೊಂಡಜ್ಜಿ ಗ್ರಾಮದ ಸ್ಕೌಟ್ಸ್ ಮತ್ತು ಗೈಡ್ಸ್  ಉದ್ಯಾನವನದಲ್ಲಿ ಹಮ್ಮಿಕೊಂಡಿದ್ದ ಸಾಮೂಹಿಕ ಶ್ರೀ ಸತ್ಯನಾರಾಯಣ  ಪೂಜೆ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ  ಶ್ರೀಗಳು ಆಶೀರ್ವಚನ ನೀಡಿದರು.

ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ, ಧಾರ್ಮಿಕ ಉಪನ್ಯಾಸ ನೀಡಿದ ಹಿರಿಯ ಪತ್ರಕರ್ತ ಹೆಚ್.ಬಿ. ಮಂಜುನಾಥ್,  ಭಾರತ ಸಾಂಸ್ಕೃತಿಕವಾಗಿ  ಸಂಪದ್ಭರಿತವಾದ ನಾಡು. ಅವಿಚ್ಛಿನ್ನವಾಗಿರುವ ನಮ್ಮ ದೇಶದ ಸಂಸ್ಕಾರ, ಸಂಸ್ಕೃತಿಗಳನ್ನು ಮೈಗೂಡಿಸಿಕೊಂಡು ಬೆಳೆದಾಗ ನಮ್ಮ ಜೀವನ ಸಾರ್ಥಕವಾಗಲಿದೆ. ದೇಶದ ಸಂಸ್ಕೃತಿಯನ್ನು ಕಾಪಾಡುವ ಕಾರ್ಯವನ್ನು ಧರ್ಮಸ್ಥಳ ಧರ್ಮಾಧಿಕಾರಿಗಳಾದ ವೀರೇಂದ್ರ ಹೆಗ್ಗಡೆಯವರು  ಮಾಡುತ್ತಿದ್ದಾರೆ. ಧರ್ಮಸ್ಥಳ ಸಂಸ್ಥೆ ಮಾಡುವ ಕಾರ್ಯ ಎಲ್ಲರಿಗೂ ಅನುಕರಣೀಯ ಎಂದರು.

ದಾವಣಗೆರೆ ಜಿಲ್ಲೆಯ ಹಿರಿಯ ನಿರ್ದೇಶಕ ವಿ. ವಿಜಯಕುಮಾರ ನಾಗನಾಳರವರು ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಯ ಮೂಲ ಧ್ಯೇಯ, ಗ್ರಾಮೀಣ  ಅಭಿವೃದ್ಧಿ ಯೊಂದಿಗೆ  ಜನರ ಸ್ವಾವ ಲಂಬಿ ಬದುಕಿಗೆ ಅಡಿ ಪಾಯ ಹಾಕುವುದೇ ಆಗಿದ್ದು, ಯೋಜನೆಯನ್ನು ಸದ್ಬಳಕೆ ಮಾಡಿಕೊಂಡು ನಿಮ್ಮ ಕನಸುಗಳನ್ನು ಸಾಕಾರಗೂಳಿಸಿಕೊಳ್ಳಿ ಎಂದರು.

ಜಿಲ್ಲಾ ಸಹಕಾರ ಒಕ್ಕೂಟದ  ಅದ್ಯಕ್ಷರೂ ಆದ ಪಿ ಎಲ್‌ ಡಿ  ಬ್ಯಾಂಕ್‌ ಅಧ್ಯಕ್ಷ ಸಿರಿಗೆರೆ  ರಾಜಣ್ಣ ಮಾತ ನಾಡಿ, ಸರ್ಕಾರ ಮಾಡುವ ಕಾರ್ಯವನ್ನು ಧರ್ಮ ಸ್ಥಳ ಸಂಸ್ಥೆ ಮಾಡುತ್ತಿದೆಯೆಂದರೆ ತಪ್ಪಾಗಲಾರದು. ಪೂಜ್ಯರು ನಡೆದಾಡುವ ದೇವರಿದ್ದಂತೆ ಎಂದರು.

ಯೋಜನಾಧಿಕಾರಿ ಗಣಪತಿ ಮಾಳಂಜಿ ಮಾತನಾಡಿ, ಹರಿಹರ ತಾಲ್ಲೂಕಿನಲ್ಲಿ ಯೋಜನೆಯ ಕಾರ್ಯಕ್ರಮಗಳು ಅತ್ಯುತ್ತಮ ವಾಗಿ ನಡೆದ ಕಾರಣ,  ಮಲೇಬೆನ್ನೂರಿನಲ್ಲಿ ಮತ್ತೊಂದು ಯೋಜನಾ ಕಚೇರಿಯನ್ನು ತೆರೆಯಲಾಗಿದೆ. ವಿಭಜಿತ ಹರಿಹರ ಯೋಜನಾ ಕಚೇರಿ ವ್ಯಾಪ್ತಿಯಲ್ಲಿ 2600 ಸಂಘಗಳಿದ್ದು, 21000 ಸದಸ್ಯರು ಯೋಜನೆಯ ಸದುಪ ಯೋಗ ಪಡೆದುಕೊಳ್ಳುತ್ತಿದ್ದಾರೆ  ಎಂದರು.

ಜಿಲ್ಲಾ ಜನಜಾಗೃತಿ  ವೇದಿಕೆಯ ಸದಸ್ಯ ರಾದ ಹೊನ್ನಾಳಿ ಬಾಬಣ್ಣ, ಶುಭ, ಅಣಬೇರು ಮಂಜಣ್ಣ, ಚಂದ್ರಶೇಖರ ಶಿಕಾರಿಪುರ ಇವರು ಸಾಂದರ್ಭಿಕವಾಗಿ ಮಾತನಾಡಿದರು.

ಬೆಳಿಗ್ಗೆ 7 ಗಂಟೆಯಿಂದ ಆರಂಭವಾದ ಪೂಜಾ ಕಾರ್ಯವನ್ನು ಪುರೋಹಿತರಾದ ದತ್ತಾತ್ರೇಯ ನೆರವೇರಿಸಿದರು. ಇದೇ ಸಂದರ್ಭದಲ್ಲಿ ಕೊಂಡಜ್ಜಿ ಕೆರೆಗೆ ಬಾಗಿನ ಅರ್ಪಣೆ ಮಾಡಲಾಯಿತು.

ಸಮಾರಂಭದಲ್ಲಿ ಗೌಡಗೇರಿ ನರೇಶಪ್ಪ,  ಎಂ ಜಗದೀಶ, ಹರಿಯಪ್ಪ ಕೆ., ನಾಗರಾಜ್‌ ದೀಟೂರು, ಕೆ.ಹನುಮಂತಪ್ಪ, ಎನ್‌.ಹೆಚ್‌. ನಾಗರಾಜ್‌, ಬಸವರಾಜಪ್ಪ, ಗೌಡಗೇರಿ ಹನುಮಂತಪ್ಪ ಪ್ರಕಾಶಪ್ಪ, ಶ್ರೀಮತಿ ಸಿದ್ದಮ್ಮ ಉಪಸ್ಥಿತರಿದ್ದರು  

ಕಾರ್ಯಕ್ರಮದಲ್ಲಿ ಜಿಲ್ಲಾ ಜನ ಜಾಗೃತಿ ವೇದಕೆ ಉಪಾಧ್ಯಕ್ಷ ರಾಜಶೇಖರ ಕೊಂಡಜ್ಜಿ ಸ್ವಾಗತಿಸಿದರು. ಮೇಲ್ವಿಚಾರಕ ಮೃತ್ಯುಂಜಯ ನಿರೂಪಿಸಿದರು. ಕೃಷಿ ಮೇಲ್ವಿಚಾರಕ ಸುನೀಲ್ ವಣ್ಣೂರ್‌ ವಂದಿಸಿದರು. ವಲಯದ ಮೇಲ್ವಿಚಾರಕರಾದ ಯಶೋಧಾ ಮುನವಳ್ಳಿ ಮತ್ತು ಸೇವಾಪ್ರತಿನಿಧಿಗಳು  ಒಕ್ಕೂಟದ ಸದಸ್ಯರು ಕಾರ್ಯಕ್ರಮಕ್ಕೆ ಸಹಕರಿಸಿದರು.