ರಾಣೇಬೆನ್ನೂರು ನಾಗನಂದೇಶ್ವರ ಮಠದ ಜೀರ್ಣೋದ್ಧಾರ: ಶಾಸಕ ಪೂಜಾರ ಭರವಸೆ

ರಾಣೇಬೆನ್ನೂರು ನಾಗನಂದೇಶ್ವರ ಮಠದ ಜೀರ್ಣೋದ್ಧಾರ: ಶಾಸಕ ಪೂಜಾರ ಭರವಸೆ

ರಾಣೇಬೆನ್ನೂರು,ಡಿ.29- ಇಲ್ಲಿನ ಶ್ರೀ ಸಿದ್ಧೇಶ್ವರ ನಗರದ 3ನೇ ಕ್ರಾಸ್‌ನಲ್ಲಿ ರುವ ಶ್ರೀ ನಾಗನಂದೇಶ್ವರ ಸ್ವಾಮೀಜಿಯವರ ಮಠದ ಜೀರ್ಣೋದ್ಧಾರ ಕಾರ್ಯಕ್ಕೆ ನೆರವು ನೀಡುವ ಭರವಸೆಯನ್ನು ಶಾಸಕ ಅರುಣ ಕುಮಾರ ಪೂಜಾರ  ನೀಡಿದರು.

ಶ್ರೀ ಸಿದ್ದಾರೂಢ ಸ್ವಾಮೀಜಿಯವರ ಶಿಷ್ಯರಾದ ಶ್ರೀ ನಾಗಲಿಂಗಪ್ಪಜ್ಜನವರ ಮಠಕ್ಕೆ ಆಗಮಿಸಿದ್ದ ಶಾಸಕರು, ಶ್ರೀ ಮಠದ ಹಾಗೂ 15 ಮತ್ತು 16ನೆಯ ವಾರ್ಡ್‌ನ  ಜನತೆ ಸೇರಿಸಿಕೊಂಡು ಎಲ್ಲಾ ವಿಷಯಗಳನ್ನೂ ಭಕ್ತರಲ್ಲಿ ಮನವರಿಕೆ ಮಾಡಿಕೊಂಡು ಜೀರ್ಣೋದ್ದಾರದ ಬಗ್ಗೆ ಭರವಸೆ ನೀಡುತ್ತಾ,  ವಾರ್ಡಿನ ಸಮಸ್ಯೆಯನ್ನು ಬಗೆಹರಿಸಿದ್ದೇನೆ , ನಾನು ಬಂದು ಮೂರು ವರ್ಷಗಳಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದೇನೆ. ದೇವಸ್ಥಾನ, ಮಠಗಳಿಗೆ, ಮಂದಿರಗಳಿಗೆ ನನ್ನ ಕೈಲಾದ ಕೆಲಸಗಳನ್ನು ಕಾರ್ಯಗಳನ್ನು ಮಾಡುತ್ತಾ ಬಂದಿದ್ದೇನೆ ಎಂದು ತಿಳಿಸಿದರು. 

ಪ್ರಧಾನಿ ನರೇಂದ್ರ ಮೋದಿಯವರು ನೇಕಾರರಿಗೆ ಹಲವಾರು  ಯೋಜನೆ ಯನ್ನು   ನೀಡುತ್ತಾ ಬಂದಿದ್ದಾರೆ, ನಮ್ಮ ತಾಲ್ಲೂಕಿನಲ್ಲಿ ಜವಳಿ ಫ್ರೀಡಂ ಪಾರ್ಕ್‌ ಈಗಾಗಲೇ ತುಮ್ಮಿನ ಕಟ್ಟಿ ಹತ್ತಿರ ಉದ್ಘಾಟನೆಗೆ  ರೆಡಿಯಾಗಿದ್ದು,   ಸುಮಾರು 25 ಸಾವಿರ ನೇಕಾರರಿಗೆ ಉದ್ಯೋಗ ವ್ಯವಸ್ಥೆಯನ್ನು ಮಾಡಿದ್ದೇನೆ ಎಂದು ತಿಳಿಸಿದರು.

ಶ್ರೀ ಸಿದ್ದೇಶ್ವರ ನಗರದ ಪದ್ಮಶಾಲಿ ಸಮಾ ಜದ ನೇಕಾರ ಶ್ರೀ ಚಂದ್ರಪ್ಪ ಹುಬ್ಬಳ್ಳಿಯವರ ಮಗನಾದ ಪ್ರತಿಭಾವಂತ ವಿದ್ಯಾರ್ಥಿ   ಸಿದ್ದು ಚಂದ್ರಪ್ಪ  ಅವರನ್ನು  ಶಾಸಕರು  ಸನ್ಮಾನಿಸಿದರು.  ನಿವೃತ್ತ ಸಿಪಿಐ  ನಾಗರಾಜ ಮೈಲಾರದ ಮತ್ತು  ಮಂಜುನಾಥ ಹುಬ್ಬಳ್ಳಿ  ಕಾರ್ಯಕ್ರಮ ನಡೆಸಿಕೊಟ್ಟರು. ವೇದಿಕೆಯಲ್ಲಿ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ   ಶಿವಕುಮಾರ ನರಸಗೌಡರ, ಸಿದ್ದಣ್ಣ ಚಿಕ್ಕಬಿದರಿ, ಯುವರಾಜ,  ಶಿವಣ್ಣ ಬಡೆಂಕಲ್, ಶಿವಣ್ಣ ಗುಲಗಂಜಿ, ರಮೇಶ ಗುತ್ತಲ, ಹನುಮಂತಪ್ಪ ಮುಕ್ತೇನಹಳ್ಳಿ, ಮಠದ ಅಧ್ಯಕ್ಷರಾದ ವಿಜಯ ಹುಬ್ಬಳ್ಳಿ, ಶಿವಣ್ಣ ಅಂಗಡಿ , ಶಿವಬಸಪ್ಪ ಹರಿಹರ, ಲಕ್ಷ್ಮಣ ಕಡ್ಲಿಬಾಳ, ಮಂಜುನಾಥ ಹಲಗೇರಿ, ರವಿ ಹುಬ್ಬಳ್ಳಿ, ವಿಜಯ ಕುಲಕರ್ಣಿ, ರಾಮಣ್ಣ ಗುಲಗಂಜಿ, ಶ್ರೀರಾಮಪುರದ ಚಂದ್ರಣ್ಣ, ಕುಬೇರಪ್ಪ ವಿಭೂತಿ ಮಂಜುನಾಥ ಪಾಟೀಲ್, ಶಂಕರ ಹಲಗೇರಿ, ಹನುಮಂತಪ್ಪ ಕಡ್ಲಿಬಾಳ, ನಾಗಪ್ಪ ಪೂಜಾರ ಮತ್ತಿತರರು ಪಾಲ್ಗೊಂಡಿದ್ದರು.