ಬಾಪೂಜಿ ಶಾಲೆಯಲ್ಲಿ `ಸಾರಂಗೋತ್ಸವ-2023′

ಬಾಪೂಜಿ ಶಾಲೆಯಲ್ಲಿ `ಸಾರಂಗೋತ್ಸವ-2023′

ದಾವಣಗೆರೆ,ಜ.23- ನಗರದ ಬಾಪೂಜಿ ಹಿರಿಯ ಪ್ರಾಥಮಿಕ ಆಂಗ್ಲ ಮಾಧ್ಯಮ ಶಾಲೆಯಲ್ಲಿ  `ಸಾರಂಗೋತ್ಸವ-2023′ ವಾರ್ಷಿಕೋತ್ಸವವನ್ನು ಶಾಲೆಯ ಅಧ್ಯಕ್ಷ   ಎಸ್.ಎಸ್. ಗಣೇಶ್  ಅವರ ಅಧ್ಯಕ್ಷತೆಯಲ್ಲಿ  ಸಂಭ್ರಮದಿಂದ ಆಚರಿಸಲಾಯಿತು.

ಮೊದಲನೇ ದಿನ ಎಲ್.ಕೆ.ಜಿಯಿಂದ ಎರಡನೇ ತರಗತಿ ವಿದ್ಯಾರ್ಥಿಗಳು  `ವೈವಿಧ್ಯತೆಯಲ್ಲಿ ಏಕತೆ’ ಮತ್ತು 6ನೇ ತರಗತಿಯಿಂದ 8ನೇ ತರಗತಿಯ ವಿದ್ಯಾರ್ಥಿಗಳು `ಜಗತ್ತಿನ ವಿವಿಧ ದೇಶಗಳ ನೃತ್ಯಗಳು’ ಹಾಗೂ ಎರಡನೆಯ ದಿನ 3 ರಿಂದ 5ನೇ ತರಗತಿಯ ವಿದ್ಯಾರ್ಥಿಗಳು `ಪಂಚ ತತ್ವ’ ಹಾಗೂ 9 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳು `ಭಾರತದ ಬಣ್ಣಗಳು’ ಎಂಬ ಶೀರ್ಷಿಕೆಯಲ್ಲಿ ಕಾರ್ಯಕ್ರಮ ಪ್ರಾರಂಭ ಮಾಡಲಾಯಿತು.

ಪ್ರಾಂಶುಪಾಲರಾದ   ಜೆ. ಎಸ್. ವನಿತಾ  ಶಾಲೆಯ ವಾರ್ಷಿಕ ವರದಿಯನ್ನು ಓದಿದರು.  ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನಗರದ ಪೊಲೀಸ್ ಇಲಾಖೆಯ ಉಪ ಅಧೀಕ್ಷಕ    ಪ್ರಕಾಶ್ ಸಿ.ಬಿ. ಮಾತನಾಡಿ,  ಪ್ರತಿಯೊಂದು ಮಗುವು ಸರ್ವತೋಮುಖ ಅಭಿವೃದ್ಧಿಯಾಗಲು, ತಂತ್ರಜ್ಞಾನದಲ್ಲಿ ಮುಂದುವರಿಯಲು, ಜ್ಞಾನ ಗಳಿಸುವಲ್ಲಿ ಶಾಲೆಯು ಶ್ರಮಿಸುತ್ತಿರುವುದು ಅತ್ಯಂತ ಸಂತೋಷ ಹಾಗೂ ಮಕ್ಕಳಲ್ಲಿರುವ ಸೂಕ್ತ ಪ್ರತಿಭೆಯನ್ನು ಹೊರಹಾಕಲು ಈ ಒಂದು ಸುಂದರ ವೇದಿಕೆಯನ್ನು   ನಿರ್ಮಿಸಿರುವುದು ಶ್ಲ್ಯಾಘನೀಯ ಕಾರ್ಯ ಎಂದರು.

ಶಾಲೆಯ ಮುಖ್ಯಸ್ಥ ಮಂಜುನಾಥ ರಂಗರಾಜು ಅವರು ವಿದ್ಯಾರ್ಥಿಗಳು ಹೆಚ್ಚು ಹೆಚ್ಚಾಗಿ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಭಾಗಿಯಾಗಿ ಉತ್ತಮ ಶಿಕ್ಷಣ ಪಡೆಯಬೇಕು ಹಾಗೂ ಹೊಸ ಹೊಸ ಆವಿಷ್ಕಾರಗಳಿಗೆ ಹೊಂದಿಕೊಂಡು ಜ್ಞಾನವನ್ನು ವೃದ್ಧಿಸಿಕೊಳ್ಳಬೇಕೆಂದು ಆಶಿಸಿದರು. ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ನಡೆದ ಕ್ರೀಡೆಗಳಲ್ಲಿ ಭಾಗವಹಿಸಿ ಪ್ರಶಸ್ತಿ ಗೆದ್ದ ಶಾಲೆಯ ವಿದ್ಯಾರ್ಥಿಗಳಾದ   ಕಸ್ತೂರಿ ವಿ.ಜಿ., ಶಶಾಂಕ್  ಆದಿತ್ಯ   ಮತ್ತು ಅಕ್ಷಯ್ ಪಿ.ಜಿ. ಇವರುಗಳನ್ನು    ಸನ್ಮಾನಿಸ ಲಾಯಿತು.

ಕಾರ್ಯಕ್ರಮದಲ್ಲಿ ಎಸ್.ಎಸ್.ಎನ್.ಪಿ ಶಾಲೆಯ ಪ್ರಾಂಶುಪಾಲರಾದ ಡಾ. ಪ್ರೀತಿ ಸಿಂಗ್, ಶೈಕ್ಷಣಿಕ ಮಾರ್ಗದರ್ಶಕ  ಮಂಜಪ್ಪ, ಉಸ್ತುವಾರಿಗಳಾದ ಸುಮಂಗಲ,  ಸುಮಾ ಕುಲಕರ್ಣಿ,   ಪಿ.ವಿ ಪ್ರಭು,  ಸವಿತಾ ರಮೇಶ್  ಇತರರು ಉಪಸ್ಥಿತರಿದ್ದರು.