ನಾಳೆಯಿಂದ ಬಿಜೆಪಿಯ ವಿಜಯ ಸಂಕಲ್ಪ ಅಭಿಯಾನ

ನಾಳೆಯಿಂದ ಬಿಜೆಪಿಯ ವಿಜಯ ಸಂಕಲ್ಪ ಅಭಿಯಾನ

ಹರಪನಹಳ್ಳಿ,ಜ.19- ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರದ ಸಾಧನೆಗಳನ್ನು ಜನರಿಗೆ ತಿಳಿಸುವ ಉದ್ದೇಶದಿಂದ ನಾಡಿದ್ದು ದಿನಾಂಕ 21 ರಿಂದ 29 ರವರೆಗೆ ವಿಜಯ ಸಂಕಲ್ಪ ಅಭಿಯಾನ ಹಮ್ಮಿಕೊಳ್ಳ ಲಾಗಿದೆ ಎಂದು ಸಂಕಲ್ಪ ಅಭಿಯಾನದ ಸಂಚಾಲಕ ಹಾಗೂ ಬಿಜೆಪಿ ಸಹಕಾರಿ ಪ್ರಕೋಷ್ಟದ ರಾಜ್ಯ ಸಹ ಸಂಚಾಲಕ ಜಿ. ನಂಜನಗೌಡ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ವಿಜಯ ಸಂಕಲ್ಪ ಅಭಿಯಾನ ರಾಜ್ಯದ 224 ವಿಧಾಸಭಾ ಕ್ಷೇತ್ರಗಳಲ್ಲಿ ನಡೆಯಲಿದೆ. ಸರ್ಕಾರದ ಸಾಧನೆಗಳನ್ನು ಕರಪತ್ರದ ಮೂಲಕ ಪ್ರತಿಯೊಂದು ಮನೆ-ಮನೆಗೆ ತೆರಳಿ ಮತದಾರರಿಗೆ ಮನವರಿಕೆ ಮಾಡುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದು ಮಾಹಿತಿ ನೀಡಿದರು.

ಪಟ್ಟಣ ಸೇರಿದಂತೆ, ತಾಲ್ಲೂಕಿನಾದ್ಯಂತ ನಮ್ಮ ಪಕ್ಷದ ಕಾರ್ಯಕರ್ತರು ಈ ಅಭಿಯಾನದಲ್ಲಿ ತೋಡಗಿಕೊಂಡು ಕೆಲಸ ಮಾಡಲಿದ್ದಾರೆ, ತಾಲೂಕಿನಾದ್ಯಂತ ಒಟ್ಟು 257 ಬೂತ್‍ಗಳು, 8 ಮಹಾಶಕ್ತಿ ಕೇಂದ್ರ, 54 ಶಕ್ತಿ ಕೇಂದ್ರಗಳನ್ನು ಗುರುತಿಸಲಾಗಿದ್ದು, ಅಧ್ಯಕ್ಷರು ಪದಾಧಿಕಾರಿಗಳು ಈ ಅಭಿಯಾನ ಪ್ರಕ್ರಿಯಲ್ಲಿ ಸಕ್ರಿಯವಾಗಿ ಕೆಲಸ ಮಾಡಲಿದ್ದಾರೆ ಎಂದರು.

ಬಿಜೆಪಿ ತಾಲೂಕು ಅಧ್ಯಕ್ಷ ಸತ್ತೂರು ಹಾಲೇಶ್ ಮಾತನಾಡಿ, ವಿಜಯ ಸಂಕಲ್ಪ ಅಭಿಯಾನಕ್ಕೂ ಜ.21ರಂದು ಸಿಂಧಗಿಯಲ್ಲಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಚಾಲನೆ ನೀಡಲಿದ್ದಾರೆ, ಅಂದು ರಾಜ್ಯಾದ್ಯಂತ ಎರಡು ಕೋಟಿ ಜನರು ಈ ಅಭಿಯಾನದಲ್ಲಿ ಭಾಗಿಯಾಗಲಿದ್ದಾರೆ ಎಂದು ಅವರು ವಿವರಿಸಿದರು.

ಕರ್ನಾಟಕ ರಾಜ್ಯ ಸಾರಿಗೆ ನಿಗಮದ ನಿರ್ದೇಶಕ ಆರುಂಡಿ ನಾಗರಾಜ, ಮಹಿಳಾ ಮೋರ್ಚಾ ಜಿಲ್ಲಾ ಅಧ್ಯಕ್ಷೆ ಸುವರ್ಣ ನಾಗರಾಜ ಮಾತನಾಡಿದರು.

ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಹಾರಾಳು ಅಶೋಕ್, ಮುಖಂಡರಾದ ಪಿ.ಮಹಾಬಲೇಶ್ವರ ಗೌಡ, ಎಂ.ಪಿ.ನಾಯ್ಕ್, ಚಂದ್ರಶೇಖರ್ ಪೂಜಾರ್, ಮುತ್ತಿಗಿ ವಾಗೀಶ್, ಮಸ್ಕಿ ದೇವರಾಜ್, ಎಲ್.ಮಂಜ್ಯಾನಾಯ್ಕ್, ಮೈದೂರು ಮಲ್ಲಿಕಾರ್ಜುನ್, ವಿನಾಯಕ ಭಜಂತ್ರಿ, ಚನ್ನನಗೌಡ, ಜೆ.ಓಂಕಾರಗೌಡ, ಬಿ.ವೈ.ವೆಂಕಟೇಶ್,  ಆರ್.ಕರೇಗೌಡ, ಕುಸುಮ ಜಗದೀಶ್, ರೇಣುಕಮ್ಮ, ಉದಯಶಂಕರ್, ಪ್ರಕಾಶ್, ರೇವನಗೌಡ, ಅಕ್ಷಯಕುಮಾರ್ ಸೇರಿದಂತೆ, ಇತರರು ಇದ್ದರು.