ಜಗಳೂರು: ಏ. 25ರಿಂದ ನಗರದೇವತೆ ದೊಡ್ಡ ಮಾರಿಕಾಂಬಾ ದೇವಿ ಜಾತ್ರೆ

ಜಗಳೂರು: ಏ. 25ರಿಂದ ನಗರದೇವತೆ  ದೊಡ್ಡ ಮಾರಿಕಾಂಬಾ ದೇವಿ ಜಾತ್ರೆ

ಜಗಳೂರು, ಜ.24- ಪಟ್ಟಣದ  ನಗರದೇವತೆ ಶ್ರೀ ದೊಡ್ಡ ಮಾರಿಕಾಂಬಾ ದೇವಿ ಜಾತ್ರಾ ಮಹೋತ್ಸವವನ್ನು ಏಪ್ರಿಲ್ 25 ರಿಂದ28 ರವರೆಗೆ ಮೂರು ದಿನಗಳ ಕಾಲ ಅದ್ಧೂರಿ ಯಾಗಿ ಆಚರಿಸಲು ಇಂದು ನಡೆದ ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಯಿತು.

ಜಾತ್ರೆಯ ವೇಳೆ ಶಾಂತಿಸಾಗರದಿಂದ ಕುಡಿಯುವ ನೀರಿನ ಸಮರ್ಪಕ ಪೂರೈಕೆ, ಪಟ್ಟಣದ ಸ್ವಚ್ಛತೆ, ಘನತ್ಯಾಜ್ಯ ವಿಲೆವಾರಿಯನ್ನು ಸಮರ್ಪಕವಾಗಿ ನಿರ್ವಹಿಸಲು ಪಟ್ಟಣ ಪಂಚಾಯಿತಿ ಅಧಿಕಾರಿಗಳಿಗೆ ಸೂಚಿಸಲಾಯಿತು.

ಮುಖಂಡರಾದ ತಿಪ್ಪೇಸ್ವಾಮಿ ಗೌಡ, ಆರ್.ತಿಪ್ಪೇಸ್ವಾಮಿ ಸೇರಿದಂತೆ ಸಭೆಯಲ್ಲಿ ಮಾತನಾಡಿದ ಎಲ್ಲಾ ಪುರ ಪ್ರಮುಖರು, ಗ್ರಾಮದೇವತೆ ಹಬ್ಬವನ್ನು ಪಕ್ಷಾತೀತ,ಜಾತ್ಯತೀತವಾಗಿ ಯಾವುದೇ ಗೊಂದಲ ವಿಲ್ಲದಂತೆ ಸರ್ವರೂ ಭಾಗವಹಿಸಿ ಸಂಭ್ರಮದಿಂದ ಆಚರಿಸೋಣ ಎಂದು ಕರೆ ನೀಡಿದರು.

ಊರು ಗೌಡರಾದ ಮುಖಂಡ ಜೆ.ಎನ್. ಶಿವಣ್ಣಗೌಡ ಮಾತನಾಡಿ, ಐದು ವರ್ಷಗಳ ನಂತರ ಜಾತ್ರೆ ನಡೆಯುತ್ತಿದೆ. ಹಿರಿಯರ ಸಂಪ್ರದಾಯಗಳನ್ನು ಪಾಲಿಸೋಣ. ಎಲ್ಲರೂ ಒಗ್ಗೂಡಿ ಶಕ್ತಿದೇವತೆ ಮಾರಿಕಾಂಬಾ ದೇವಿ ಜಾತ್ರಾ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸೋಣ. ಎಲ್ಲಾ ಸಮುದಾಯದ ಮುಖಂಡರನ್ನು ಆಹ್ವಾನಿಸಿ ಸಲಹೆ, ಸೂಚನೆ ಪಡೆದು ಶಾಂತಿಯುತವಾಗಿ ಮುನ್ನಡೆಯೋಣ ಎಂದು ಮನವಿ ಮಾಡಿದರು.

ಸಭೆಯಲ್ಲಿ ವಿವಿಧ ಸಮುದಾಯಗಳ ಮುಖಂಡರು ಗಳಾದ ದತ್ತರಾಜ್, ತಿಪ್ಪೇಸ್ವಾಮಿ ,ರಮೇಶ್, ಓಬಳೇಶ್, ಬಿ.ಲೋಕೇಶ್, ಕಾಟಪ್ಪ, ಹಟ್ಟೇರ್ ಶಿವಣ್ಣ ,ಹಟ್ಟಿ ತಿಪ್ಪೇಸ್ವಾಮಿ, ಅಡಿವೆಪ್ಪ, ಬೆಲ್ಲದ ಬಸವರಾಜ್, ಪೂಜಾರಿ ಗಂಗಣ್ಣ, ತಿರುಕಪ್ಪರ ರಾಜಣ್ಣ, ಪ.ಪಂ ಸದಸ್ಯರಾದ ರೇವಣ್ಣ, ದೇವರಾಜ್, ರವಿಕುಮಾರ್, ರಮೇಶ್ ರೆಡ್ಡಿ ಹಾಗೂ ದೇವ ಸ್ಥಾನ ಸಮಿತಿಯ ಪದಾಧಿಕಾರಿಗಳು, ಸದಸ್ಯರು  ಭಾಗವಹಿಸಿದ್ದರು.