ಅಯ್ಯಪ್ಪ ಸ್ವಾಮಿ ರಥೋತ್ಸವ, ದೀಪಾರಾಧನೆ

ಅಯ್ಯಪ್ಪ ಸ್ವಾಮಿ ರಥೋತ್ಸವ, ದೀಪಾರಾಧನೆ

ಹರಪನಹಳ್ಳಿ,ಜ.18- ಪಟ್ಟಣದ ಮೇಗಳಪೇಟೆಯ ಸಮೀಪದಲ್ಲಿರುವ ಭಾರತಿ ನಗರದ ಅಯ್ಯಪ್ಪಸ್ವಾಮಿ ಸನ್ನಿಧಿಯಲ್ಲಿ ಅಪಾರ ಭಕ್ತ ಸಮೂಹದ ನಡುವೆ ಸಂಕ್ರಾಂತಿ ಹಬ್ಬದ ಪ್ರಯುಕ್ತ ಎರಡನೇ ವರ್ಷದ ರಥೋತ್ಸವ, ದೀಪಾರಾಧನೆ, ಮಹಾ ಮಂಗಳಾರತಿ ಹಾಗೂ ಧರ್ಮಸಭೆ ಅದ್ಧೂರಿಯಾಗಿ  ಜರುಗಿತು.

ತೆಲುಗರ ಓಣಿ ನಿವಾಸಿಗಳಾದ ಆರ್.ಎನ್.ಗುರುಕಿರಣ್ ಅವರು ಐದು ಸಾವಿರದ ಒಂದುನೂರಾ ಒಂದು ರೂಪಾಯಿಗೆ ಅಯ್ಯಪ್ಪ ಸ್ವಾಮಿಯ ರುದ್ರಾಕ್ಷಿ ಮಾಲೆಯನ್ನು ಮತ್ತು ಭಾರತಿ ನಗರದ ನಿವಾಸಿ ಬಿ.ವೀರೇಶ್ ಆಚಾರಿ ಅವರು ಎರಡು ಸಾವಿರದ ಒಂದುನೂರಾ ಒಂದು ರೂಪಾಯಿಗೆ ಪಟಾಕ್ಷಿಯನ್ನು ತಮ್ಮದಾಗಿಸಿಕೊಂಡರು.  

ಹಡಗಲಿ ಗವಿಸಿದ್ದೇಶ್ವರ ಶಾಖಾಮಠದ ಡಾ.ಹಿರಿಶಾಂತವೀರ ಸ್ವಾಮಿಗಳು, ನೀಲಗುಂದ ಗುಡ್ಡದ ವಿರಕ್ತ ಮಠದ ಚನ್ನಬಸವ ಶಿವಯೋಗಿ ಶ್ರೀಗಳು, ಇಟ್ಟಿಗಿ ಚಿಕ್ಕಮ್ಯಾಗೇರಿಯ ಹಿರೇಮಠದ ಗುರುಶಾಂತವೀರ ಶಿವಾಚಾರ್ಯ ಶ್ರೀಗಳು ಸಾನಿಧ್ಯ ವಹಿಸಿದ್ದರು. 

ಈ ಬಾರಿಯ ಅಯ್ಯಪ್ಪಸ್ವಾಮಿ ಪ್ರಶಸ್ತಿ ಯನ್ನು ತರಕಾರಿ ವ್ಯಾಪಾರಿ ವೀರಣ್ಣ ಹಾಗೂ ಪುರಸಭೆ ಮಾಜಿ ಸದಸ್ಯ ಬಂಗ್ಲಿ ಸೋಮಶೇಖರ್ ಅವರಿಗೆ ನೀಡಿ ಗೌರವಿಸಲಾಯಿತು. 

ಹಡಗಲಿ ಶಾಸಕ ಪಿ.ಟಿ.ಪರಮೇಶ್ವರ್ ನಾಯ್ಕ್, ಪುರಸಭೆ ಅಧ್ಯಕ್ಷ ಹರಾಳು ಹೆಚ್.ಎಂಅಶೋಕ್, ಪುರಸಭೆ ಸದಸ್ಯ ಜಾಕೀರ್ ಹುಸೇನ್ ಸರ್ಖಾವಸ್, ಮುಖಂಡರಾದ ಶಶಿಧರ್ ಪೂಜಾರ್, ಎಂ.ಪಿ.ವೀಣಾ ಮಹಾಂತೇಶ್, ಆರ್.ಲೋಕೇಶ್, ಸುವರ್ಣ ಆರುಂಡಿ ನಾಗರಾಜ್, ಹೆಚ್.ಕೆ.ಹಾಲೇಶ್, ಪಿ.ಟಿ.ಭರತ್, ಕೌಟಿ ವಾಗೀಶ್,  ನಿವೃತ್ತ ಶಿಕ್ಷಕಿ ದಾನ ಚಿಂತಾಮಣಿ, ಮದರ್ ತೆರೇಸಾ ಪ್ರಶಸ್ತಿ ಪುರಸ್ಕೃತೆ ಹೆಚ್.ಎಂ.ಲಲಿತಮ್ಮ,  ಅಯ್ಯಪ್ಪ ಸ್ವಾಮಿ ಸೇವಾ ಸಮಿತಿ ಉಪಾಧ್ಯಕ್ಷ ಕೆ.ಆರ್.ಗಿರೀಶ್, ಕಾರ್ಯದರ್ಶಿ ಕೊಟ್ಗಿ ಈಶಣ್ಣ, ಖಜಾಂಚಿ ಕೌಟಿ ಮಂಜುನಾಥ, ಆಟೋ ಕೌಟಿ ಮಂಜುನಾಥ, ಕಿರಾಣಿ ವರ್ತಕರು ಹಾಗೂ ಸಂಸ್ಕಾರ ಭಾರತಿ ಅಧ್ಯಕ್ಷ ಮಹಾವೀರ ಭಂಡಾರಿ, ಸುಂಕದಕಲ್ಲು ಕೊಟ್ರೇಶ್, ಕಾಶಿಮಠದ ಅಕ್ಕನ ಬಳಗದ ಅಧ್ಯಕ್ಷೆ ಶಾಂತಮ್ಮ, ಸುರೇಂದ್ರ ಮಂಚಾಲಿ, ಶಿಕ್ಷಕರಾದ ಎ.ಎಂ.ಗುಪ್ರಸಾದ್, ಬಣಕಾರ್ ರಾಜಶೇಖರ್, ಪ್ರವೀಣ, ಮೃತ್ಯುಂಜಯ, ಮಟ್ಟೇರ ಪ್ರಕಾಶ್, ಸತೀಶ್, ಹುಚ್ಚಪ್ಪ, ವೀರಾಗಾಸೆ ಕಲಾವಿದ ಜಿ.ಮಲ್ಲಿಕಾರ್ಜುನ, ಕಾಶಿಮಠದ ಶಾಸ್ತ್ರಿ ಬಸಯ್ಯ     ಸೇರಿದಂತೆ ಇತರರು ಇದ್ದರು.