ದೇವನಾಯ್ಕನಹಳ್ಳಿಯಲ್ಲಿ ಇಂದು – ನಾಳೆ ದೇವಸ್ಥಾನದ ಗೃಹ ಪ್ರವೇಶ, ಕುಂಭಾಭಿಷೇಕ

ದೇವನಾಯ್ಕನಹಳ್ಳಿಯಲ್ಲಿ ಇಂದು – ನಾಳೆ  ದೇವಸ್ಥಾನದ ಗೃಹ ಪ್ರವೇಶ, ಕುಂಭಾಭಿಷೇಕ

ಹೊನ್ನಾಳಿ, ಜ. 22- ಪಟ್ಟಣದ ದೇವನಾಯ್ಕನಹಳ್ಳಿ ಶ್ರೀ ದುರ್ಗಮ್ಮ ದೇವಿ, ಮರಿಯಮ್ಮ ದೇವಿ ಹಾಗೂ ಗಾಳಿ ದುರ್ಗಮ್ಮ ದೇವಸ್ಥಾನದ ಗೃಹ ಪ್ರವೇಶ, ಮೂರ್ತಿಗಳ ಪ್ರತಿಷ್ಠಾಪನೆ, ಕಳಸಾರೋಹಣ, ಕುಂಭಾಭಿಷೇಕ ಕಾರ್ಯಕ್ರಮಗಳು ನಾಡಿದ್ದು ದಿನಾಂಕ 23 ಮತ್ತು 24ರ ಎರಡು ದಿನ ಅದ್ಧೂರಿಯಾಗಿ ಜರುಗಲಿದೆ ಎಂದು ಶ್ರೀ ಬೀರಲಿಂಗೇಶ್ವರ ದೇವಸ್ಥಾನ ಸೇವಾ ಸಮಿತಿ ಹಾಗೂ ಕುರುಬ ಸಮಾಜದ ಹಿರಿಯ ಮುಖಂಡ ಹೆಚ್.ಬಿ. ಗಿಡ್ಡಪ್ಪ ಹಾಗೂ ತೆಂಗಿನಮರದ ಮಾದಪ್ಪ ಅವರು ಹೇಳಿದರು.

ಅವರು ದೇವನಾಯ್ಕನಹಳ್ಳಿ ಯಲ್ಲಿ ಸಮಾಜದ ಮುಖಂಡರೊಂದಿಗೆ ನಡೆದ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.

ನಾಡಿದ್ದು ದಿನಾಂಕ 23ರ ಬೆಳಿಗ್ಗೆ 7 ಗಂಟೆಗೆ ಶ್ರೀ ಸೂರ್ಯನಾರಾಯಣ ಶ್ರೀ ಮೂರು ಝಾವೇಶ್ವರ ಮಠ ಬಹದ್ದೂರು ಘಟ್ಟ ಇವರ ಸಾನ್ನಿಧ್ಯದಲ್ಲಿ ಶ್ರೀ ಗಣಪತಿ ಪೂಜೆ, ಧ್ವಜಾರೋಹಣ, ವಾಸ್ತು ಪೂಜಾ ಮತ್ತು ಶ್ರೀ ದುರ್ಗಾ ಹೋಮ, ಶ್ರೀ ವಿಶ್ವಕರ್ಮ ಹೋಮ ದೇವಸ್ಥಾನಗಳ ಗೃಹ ಪ್ರವೇಶದ ಪೂರ್ವಭಾವಿಯಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು
ನಡೆಯಲಿವೆ. 

ದಿನಾಂಕ 24ರಂದು ಶ್ರೀ ದುರ್ಗಮ್ಮದೇವಿ, ಶ್ರೀ ಮರಿಯಮ್ಮ ದೇವಿ ಹಾಗೂ ಶ್ರೀ ಗಾಳಿ ದುರ್ಗಮ್ಮ ದೇವಿ ದೇವಸ್ಥಾನದ ಗೃಹ ಪ್ರವೇಶ, ಮೂರ್ತಿಗಳ ಪ್ರತಿಷ್ಠಾಪನೆ, ಗೋಪುರ ಕಳಸಾರೋಹಣ ಮತ್ತು ಕುಂಭಾಭಿಷೇಕ ಕಾರ್ಯಕ್ರಮಗಳು ಜರುಗಲಿವೆ.

ನಂತರ 12 ಗಂಟೆಗೆ ಕನಕ ಗುರುಪೀಠ ಕಾಗಿನೆಲೆ ಮಹಾಸಂಸ್ಥಾನದ ಜಗದ್ಗುರು ಶ್ರೀ ನಿರಂಜನಾನಂದಪುರಿ ಮಹಾಸ್ವಾಮಿಗಳು ವೇದಿಕೆ ಕಾರ್ಯಕ್ರಮ ಉದ್ಘಾಟನೆ ಹಾಗೂ ದಿವ್ಯ ಸಾನ್ನಿಧ್ಯ ವಹಿಸಲಿದ್ದು, ಜೊತೆಗೆ ಕನಕ ಗುರು ಪೀಠದ ಹೊಸದುರ್ಗ ಶಾಖಾ ಮಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ, ಹಿರೇಕಲ್ಮಠದ ಡಾ.ಶ್ರೀ ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ.

ನೂತನ ದೇವಸ್ಥಾನ ಗೃಹ ಪ್ರವೇಶ, ಮೂರ್ತಿ ಪ್ರತಿಷ್ಠಾಪನೆ, ಕಳಸಾರೋಹಣ, ಧಾರ್ಮಿಕ ಕಾರ್ಯಕ್ರ ಮಗಳಲ್ಲಿ ದೇವರ ಗಣಮಕ್ಕಳಾದ ಪ್ರಭಾಕರ್ ದ್ಯಾಮಜ್ಜಿ, ಅಣ್ಣಪ್ಪ ಗುಡ್ಡಜ್ಜಿ, ತೆಂಗಿನಮರದ ಮಾದಪ್ಪ ಗುಡ್ಡಜ್ಜಿ ಭಾಗವಹಿಸಲಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಕುರುಬ ಸಮಾಜದ ತಾಲ್ಲೂಕು ಅಧ್ಯಕ್ಷ ಎಂ.ಎಸ್. ಪಾಲಾಕ್ಷ, ಮಾದಪ್ಪ, ಬುದ್ದಿವಂತರ ನರಸಿಂಹಪ್ಪ, ವಿಜೇಂದ್ರಪ್ಪ, ಬಿಸಾಟಿ ನಾಗರಾಜ್, ಮಾರ್ಜೋಗಿ ನಾಗರಾಜಪ್ಪ ಉಪಸ್ಥಿತರಿದ್ದರು.