ಕೊಟ್ಟೂರು : ಸ್ವಾಮಿ ವಿವೇಕಾನಂದರ ಸ್ಫೂರ್ತಿ ಪುಸ್ತಕ ವಿತರಣೆ

ಕೊಟ್ಟೂರು : ಸ್ವಾಮಿ ವಿವೇಕಾನಂದರ ಸ್ಫೂರ್ತಿ ಪುಸ್ತಕ ವಿತರಣೆ

ಕೊಟ್ಟೂರು, ಜ. 22 – ಪಟ್ಟಣದ  ಸರ್ಕಾರಿ ಪಿ.ಯು ಕಾಲೇಜಿನಲ್ಲಿ  ನೆಹರು ಯುವ ಕೇಂದ್ರ ಬಳ್ಳಾರಿ ಹಾಗೂ  ಆಶಾ ಕಿರಣ ಮಹಿಳಾ ಅಭಿವೃದ್ಧಿ ಸಂಘದ ಸಹಯೋಗದಲ್ಲಿ ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆಯನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ  ವೀರೇಶ್ ಹಿರಿಲಿಂಗಪ್ಪನವರ್ ಮಾತನಾಡಿ,  ಚಿಕಾಗೋ ಸರ್ವಧರ್ಮ ಸಮ್ಮೇಳನದಲ್ಲಿ  ಸಹೋದರಿಯರೇ, ಸಹೋದರರೇ ಎಂದು ಹೇಳುವ ಮೂಲಕ ಪಾಶ್ಚಿಮಾತ್ಯರ ಕಣ್ಣನ್ನು ತೆರೆಸಿದ ವಿವೇಕಾನಂದರು, ಭಾರತದ ಕೀರ್ತಿ ಪತಾಕೆಯನ್ನು ವಿಶ್ವದ ಮುಂದೆ ಎತ್ತಿ ಹಿಡಿದರು ಎಂದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಸ್ವಾಮಿ ವಿವೇಕಾನಂದರ‍ ಸ್ಫೂರ್ತಿ ಪುಸ್ತಕ  ವಿತರಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಡಾ.ಸೋಮಶೇಖರ್  ಉಪನ್ಯಾಸಕ ಬಸವರಾಜ ಎಂ. ಮುನೇಗೌಡ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.