ಹರಿಹರ: ಬಿಜೆಪಿಯಿಂದ ವಿಜಯ ಸಂಕಲ್ಪ

ಹರಿಹರ: ಬಿಜೆಪಿಯಿಂದ ವಿಜಯ ಸಂಕಲ್ಪ

ಹರಿಹರ, ಜ. 22 – ವಿಜಯ ಸಂಕಲ್ಪ ಅಭಿಯಾನದ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರ ದೇಶದ ಹಾಗೂ ರಾಜ್ಯ ಸರ್ವತೋ ಮುಖ ಅಭಿವೃದ್ಧಿಗಾಗಿ ಇಲ್ಲಿಯ ವರೆಗೂ ಸಾಧಿಸಿರುವ ಸಾಧನೆಗಳ ಸಮಗ್ರ ವಿವರವನ್ನು ಮನೆ-ಮನೆಗೂ ತಲುಪಿಸುವುದ ರೊಂದಿಗೆ ಬಿಜೆಪಿ ಪಕ್ಷವನ್ನು ಬಲ ಪಡಿಸಲು ಪ್ರತಿ ಯೊಬ್ಬ ಕಾರ್ಯಕರ್ತರು ಶ್ರಮಿಸಬೇಕೆಂದು ಸಂಸದ ಜಿ.ಎಂ. ಸಿದ್ದೇಶ್ವರ ಕಾರ್ಯಕರ್ತರಿಗೆ ಕರೆ ನೀಡಿದರು.

ನಗರದ ಮಹಜೇನಹಳ್ಳಿ ಊರಮ್ಮ ದೇವಿ ದೇವ ಸ್ಥಾನದ ಎದುರು ಏರ್ಪಡಿಸಿದ್ದ ವಿಜಯ ಸಂಕಲ್ಪ ಅಭಿ ಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ನಗರದ ಜೆಸಿ ಬಡಾವಣೆ, ಹಳ್ಳದಕೆರಿ, ಕುಂಬಾರ ಓಣಿಗಳಲ್ಲಿ ಅವರು ಮನೆಮನೆಗೆ ತೆರಳಿ ಕರಪತ್ರ ಹಂಚಿ ಮಾತನಾಡಿದರು.

ಮಾಜಿ ಶಾಸಕ ಬಿ.ಪಿ ಹರೀಶ್ ಮಾತನಾಡಿ, ಬಾರತೀಯ ಜನತಾ ಪಕ್ಷ ದೇಶದ ಹಾಗೂ ರಾಜ್ಯದ ಆಡಳಿತ ಚುಕ್ಕಾಣಿ ಹಿಡಿದಾಗಿನಿಂದ ಅಭಿವೃದ್ಧಿಯ ಮಹಾಪೂರವೆ ಹರಿದಿದೆ ಎಂದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಹನಗವಾಡಿ ವೀರೇಶ್, ಬಿಜೆಪಿ ಮುಖಂಡ ಚಂದ್ರಶೇಖರ ಪೂಜಾರ, ನಗರ ಘಟಕದ ಅಧ್ಯಕ್ಷ ಅಜೀತ್ ಸಾವಂತ್, ಗ್ರಾಮಾಂತರ ಅಧ್ಯಕ್ಷ ಎಂ.ಪಿ ಲಿಂಗರಾಜ್, ಪ್ರಧಾನ ಕಾರ್ಯದರ್ಶಿ ಗಳಾದ ತುಳಜಪ್ಪ ಭೂತೆ, ಮಂಜಾನಾಯ್ಕ, ವಿರೇಶ ಆದಾಪುರ, ನಗರಸಭೆ ಸದಸ್ಯರಾದ ರಜನಿಕಾಂತ, ಆಟೋ ಹನುಮಂತಪ್ಪ, ವಿಜಯ ಸಂಕಲ್ಪ ಅಭಿಯಾನ ಸಂಚಾಲಕ ವಿಜಯಕುಮಾರ ಎಬಿಎಂ, ಜಿಲ್ಲಾ ಕಾರ್ಯದರ್ಶಿ ರೂಪಾ ಕಾಟವೆ ಕಾರ್ಯಕ್ರಮ ಕುರಿತು ಮಾತನಾಡಿದರು.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬಾತಿ ಚಂದ್ರಶೇಖರ, ರಾಜು ರೋಖಡೆ, ರಾಘವೇಂದ್ರ ಕಾಮದೇನು, ಸುರೇಶ ತೆರೆದಹಳ್ಳಿ, ನ್ಯಾಯವಾದಿ ಆನಂದ್, ಸಂತೋಷ ಗುಡಿಮನಿ, ರವಿ ರಾಯ್ಕರ್, ರವಿರಾಜ, ರಾಜು ಐರಣಿ, ಸುನಿಲ್, ವಿನಾಯಕ ಆರಾದ್ಯ, ಅಜ್ಜಪ್ಪ ಶೇರಾಪುರ, ಲೋಕಿಕೆರೆ ಅಣ್ಣಪ್ಪ, ಚಂದ್ರು ಪಾಟೀಲ, ನಿರಂಜನ ಉಪಸ್ಥಿತರಿದ್ದರು.