ಹರಿಹರ : ಉಪವಿಭಾಗಧಿಕಾರಿ ದುರ್ಗಾಶ್ರೀ ಅವರಿಂದ ಮತಗಟ್ಟೆ ಕೇಂದ್ರ ಪರಿಶೀಲನೆ

ಹರಿಹರ : ಉಪವಿಭಾಗಧಿಕಾರಿ ದುರ್ಗಾಶ್ರೀ  ಅವರಿಂದ ಮತಗಟ್ಟೆ ಕೇಂದ್ರ ಪರಿಶೀಲನೆ

ಹರಿಹರ, ಜ. 23 – ಮುಂಬರುವ ವಿಧಾನ ಸಭಾ ಚುನಾವಣೆ ಹಿನ್ನೆಲೆಯಲ್ಲಿ ತಾಲ್ಲೂಕಿನ ವಿವಿಧ ಮತಗಟ್ಟೆ ಕೇಂದ್ರಗಳಿಗೆ ದಾವಣಗೆರೆ ಉಪವಿಭಾಗಧಿಕಾರಿ ಶ್ರೀಮತಿ ದುರ್ಗಾಶ್ರೀ ಅವರು ಇಂದು ಭೇಟಿ ಕೊಟ್ಟು, ಮತಗಟ್ಟೆ ಕೇಂದ್ರಗಳನ್ನು ಪರಿಶೀಲನೆ ನಡೆಸಿದರು.

ಕೊಂಡಜ್ಜಿ, ಗಂಗನಹರಸಿ, ಕೆಂಚನಹಳ್ಳಿ, ಬುಳ್ಳಾಪುರ, ಕುರುಬರಹಳ್ಳಿ, ಸಾರಥಿ, ಪಾಮೇ ನಹಳ್ಳಿ, ದೀಟೂರು, ಗುತ್ತೂರು, ಹರ್ಲಾಪುರ,  ಹರಿಹರ ನಗರದ ಮರಿಯಾ ನಿವಾಸ ಶಾಲೆ, ಗಾಂಧಿ ಮೈದಾನ ಶಾಲೆ, ನಗರಸಭೆ ಆವರಣ, ಭೀಮನಗರ, ತಾ.ಪಂ. ಕಚೇರಿ, ಎಂ.ಕೆ.ಇ.ಟಿ. ಶಾಲೆ, ಸೇರಿದಂತೆ 37 ಮತಗಟ್ಟೆ ಕೇಂದ್ರಗಳಿಗೆ ಭೇಟಿಕೊಟ್ಟು ಕೆಲವೊಂದು ಕಡೆಗಳಲ್ಲಿ ಕಿಟಕಿ, ಬಾಗಿಲು,  ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಸರಿಪಡಿಸಲು ಶಾಲಾ ಮುಖ್ಯಸ್ಥರಿಗೆ ಸೂಚನೆ ನೀಡಿದರು. ಈ ಸಂದರ್ಭದಲ್ಲಿ ಆರ್.ಐ. ಮಂಜುನಾಥ್, ಪಿಡಿಓ ಪ್ರಭು, ರಾಘವೇಂದ್ರ, ಅಂಗನವಾಡಿ ಶಿಕ್ಷಕಿಯರು, ಬಿಎಲ್ಓ ರವರು ಹಾಜರಿದ್ದರು.