ರೈತ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ
ಸಿಗದ ಹೊರತು ರೈತರ ಉದ್ಧಾರ ಸಾಧ್ಯವಿಲ್ಲ

Home ಸುದ್ದಿಗಳು ಹರಿಹರ ರೈತ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆಸಿಗದ ಹೊರತು ರೈತರ ಉದ್ಧಾರ ಸಾಧ್ಯವಿಲ್ಲ
ರೈತ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆಸಿಗದ ಹೊರತು ರೈತರ ಉದ್ಧಾರ ಸಾಧ್ಯವಿಲ್ಲ

ಮಲೇಬೆನ್ನೂರು, ಸೆ.29- ತರಳಬಾಳು ಅಮೃತ ತೋಟಗಾರಿಕೆ ರೈತ ಉತ್ಪಾದಕ ಕಂಪನಿಗಳು ರೈತರು ಬೆಳೆದ ಉತ್ಪನ್ನಗಳನ್ನು ಸರಿಯಾದ ಬೆಲೆಗೆ ಮಾರಾಟ ಮಾಡಿಸುವ ಕೆಲಸ ಮಾಡುತ್ತಿದೆ ಎಂದು ದಾವಣಗೆರೆಯ ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥ ಡಾ. ಟಿ.ಎನ್.ದೇವರಾಜ್ ತಿಳಿಸಿದರು.

ನಿಟ್ಟೂರು ಗ್ರಾಮದಲ್ಲಿ ಹಮ್ಮಿಕೊಂಡಿದ್ದ ನಿಟ್ಟೂರು ತರಳಬಾಳು ಅಮೃತ ತೋಟಗಾರಿಕೆ ರೈತ ಉತ್ಪಾದಕ ಕಂಪನಿಯ 2021-22 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

20 ಜನ ರೈತರ ಸೇರಿಸಿ, ರೈತ ಆಸಕ್ತಿ ಗುಂಪು ರಚಿಸಿ, ರೈತ ಉತ್ಪನ್ನಗಳನ್ನು ತಯಾರು ಮಾಡುವಂತೆ ಮಾಡಲಾಗುವುದು. ರೈತರಿಗೆ ಬೇಕಾದ ಪರಿಕರಗಳನ್ನು ಕಂಪನಿಯಿಂದಲೇ ತರಿಸಿ, ಕಡಿಮೆ ಬೆಲೆಯಲ್ಲಿ ನೀಡಲಾಗುವುದೆಂದರು.

ಜನರಿಗೆ ಆರೋಗ್ಯದ ಬಗ್ಗೆ ಅರಿವು ಬಂದಿದ್ದು, ಬಹಳಷ್ಟು ಜನ ಸಾವಯವ ಕೃಷಿ ಉತ್ಪನ್ನಗಳನ್ನು ಕೇಳುತ್ತಿದ್ದಾರೆ. ಸರ್ಕಾರವೂ ಸಹ ಸಾವಯವ, ನೈಸರ್ಗಿಕ, ಸಹಜ ಕೃಷಿಗೆ ಒತ್ತು ನೀಡುತ್ತಿದೆ ಎಂದು ದೇವರಾಜ್ ಹೇಳಿದರು.

ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ರಾದ ಶ್ರೀಮತಿ ರೇಖಾ, ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಜಿಲ್ಲಾ ಯೋಜನಾ ಸಂಯೋಜಕ ಆಕಾಶ್, ಗೃಹ ವಿಜ್ಞಾನಿ ಡಾ. ಸುಪ್ರಿಯಾ ಪಾಟೀಲ್, ಬೇಸಾಯ ತಜ್ಞ ಮಲ್ಲಿಕಾರ್ಜುನ್ ಮಾತನಾಡಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ನಿಟ್ಟೂರು ತರಳ ಬಾಳು ಅಮೃತ ತೋಟಗಾರಿಕೆೆ ರೈತ ಉತ್ಪಾದಕ ಕಂಪನಿ ಅಧ್ಯಕ್ಷ ಇಟಗಿ ಶಿವಣ್ಣ ಮಾತನಾಡಿ, ರೈತರಿಗೆ ಸೂಕ್ತ ಮಾರುಕಟ್ಟೆ ಸಿಗದ ಹೊರತು ರೈತರ ಉದ್ಧಾರ ಸಾಧ್ಯವಿಲ್ಲ. ರೈತರು ರಾಜಕಾರಣಿಗಳ ಸಹವಾಸ ಮತ್ತು ಪೊಲೀಸ್ ಠಾಣೆ, ಕೋರ್ಟು-ಕಚೇರಿಗಳಿಂದ ದೂರವಿದ್ದು, ಕೃಷಿಯಲ್ಲೇ ತಮ್ಮನ್ನು ತಾವು ತೊಡಗಿಸಿಕೊಂಡರೆ ಮಾತ್ರ ಉತ್ತಮ ಆರೋಗ್ಯ, ನೆಮ್ಮದಿ ಸಿಗಲು ಸಾಧ್ಯ ಎಂದರು.

ಕಂಪನಿ ಉಪಾಧ್ಯಕ್ಷ ಹೆಚ್.ಸಿ.ಮೋಹನ್‌ಕುಮಾರ್, ನಿರ್ದೇಶಕರಾದ ಬಿ.ಮರುಳಪ್ಪ, ದಾನಪ್ಳ ಹನುಮಂತಪ್ಪ, ಕರೇಗೌಡ್ರ ರಂಗನಾಥ್, ಎಸ್.ಜಿ.ಪ್ರಭುದೇವ್, ಶ್ರೀಮತಿ ಸರೋಜ ಪಾಟೀಲ್, ಶ್ರೀಮತಿ ಉಮಾದೇವಿ ಬಿ.ಶಂಭುಲಿಂಗಪ್ಪ, ಡಿ.ಎನ್.ಶಿವಕುಮಾರ್, ಜಿ.ಎಸ್.ಮಂಜುನಾಥ್, ಭರಮಳ್ಳಿ ಮಂಜುನಾಥ್, ಯಲವಟ್ಟಿಯ ಜಿ.ಎ.ಹನುಮಂತಗೌಡ, ಸಿಇಓ ಎಸ್.ಜಿ.ದಿನೇಶ್, ರೈತರಾದ ಜಿ.ಮಂಜುನಾಥ್ ಪಟೇಲ್, ಎನ್.ಜಿ.ಶಿವಾಜಿ ಪಾಟೀಲ್, ಯಲವಟ್ಟಿ ಯೋಮಕೇಶ್ವರಪ್ಪ, ಹಳೇಮನಿ ಶಂಭುಲಿಂಗಪ್ಪ, ಹೆಚ್.ಬಿ.ಶಿವಕುಮಾರ್, ಬಿ.ಜಿ.ಧನಂಜಯ, ಹುಲ್ಲುಮನಿ ಷಣ್ಮುಖಪ್ಪ, ಕೆ.ದೇವೇಂದ್ರಪ್ಪ, ತಳಸದ ಸಂತೋಷ್, ಎಸ್.ಜಿ.ದೇವರಾಜ್, ಎನ್.ಜಿ.ಬಸವನಗೌಡ್ರು, ಯರೇಚಿಕ್ಕನಹಳ್ಳಿ ರಂಗನಾಥ್, ಹೆಚ್.ಜಿ.ಚಂದ್ರಶೇಖರ್ ಸೇರಿದಂತೆ ಇನ್ನೂ ಅನೇಕರು ಸಭೆಯಲ್ಲಿದ್ದರು.