ಮಲೇಬೆನ್ನೂರು, ಜ.24- ಪಟ್ಟಣದ 5 ಶಾಲೆಗಳಿಗೆ ಕಾಂಗ್ರೆಸ್ ಯುವ ಮುಖಂಡ ನಂದಿಗಾವಿ ಶ್ರೀನಿವಾಸ್ ಅವರು ತಮ್ಮ 44ನೇ ಹುಟ್ಟುಹಬ್ಬದ ಸವಿನೆನಪಿಗಾಗಿ `ಜ್ಞಾನ ಜ್ಯೋತಿ’ ಕಾರ್ಯಕ್ರಮದಡಿ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿದ್ದಾರೆ.
ಶ್ರೀಮತಿ ಬಸಮ್ಮ ಕೆಂಚಪ್ಪ ಮಡಿವಾಳರ ಹಿರಿಯ ಪ್ರಾಥಮಿಕ ಶಾಲೆ, ಎಸ್.ಎನ್. ಉರ್ದು ಕಿರಿಯ ಪ್ರಾಥಮಿಕ ಶಾಲೆ, ಎಸ್.ಎನ್. ಉರ್ದು ಕಿರಿಯ ಪ್ರಾಥಮಿಕ ಶಾಲೆ, ಶ್ರೀ ಬೀರಲಿಂಗೇಶ್ವರ ಪ್ರಥಮ ದರ್ಜೆ ಕಾಲೇಜು, ಕಲ್ಲೇಶ್ವರ ಬಡಾವಣೆಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮತ್ತು ಜಾಮೀಯಾ ನ್ಯಾಷನಲ್ ಪ್ರೌಢಶಾಲೆಗೆ ಸೋಮವಾರ ಡಯಸ್, ಬೆಂಚ್, ಸ್ಕೂಲ್ ಬ್ಯಾಗ್ ಇತ್ಯಾದಿ ಸಾಮಗ್ರಿಗಳನ್ನು ನಂದಿಗಾವಿ ಶ್ರೀನಿವಾಸ್ ವಿತರಿಸಿದರು.
ಎಸ್ಬಿಕೆಎಂ ಶಾಲೆಯಲ್ಲಿ ನಡೆದ ವಿತರಣಾ ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿ ಹೆಚ್.ಜಿ. ಚಂದ್ರಶೇಖರ್, ನಿರ್ದೇಶಕ ಎಂ. ಮಾದಪ್ಪ, ಶಾಲಾ ಮುಖ್ಯ ಶಿಕ್ಷಕ ದಂಡಿ ತಿಪ್ಪೇಸ್ವಾಮಿ, ಪಿಎಸಿಎಸ್ ಮಾಜಿ ಅಧ್ಯಕ್ಷ ಕೆ.ಪಿ. ಗಂಗಾಧರ್, ಪುರಸಭೆ ಸದಸ್ಯ ಸಾಬೀರ್ ಅಲಿ ಮತ್ತು ಜಾಮೀಯಾ ಶಾಲೆಯಲ್ಲಿ ತಾ.ಪಂ. ಮಾಜಿ ಅಧ್ಯಕ್ಷ ಎಂ.ಬಿ. ರೋಷನ್ಸಾಬ್, ಫಾಜಿಲ್ ಖಾನ್, ಹಿಂದೂಸ್ತಾನ್ ಸಲೀಮ್ ಮತ್ತಿತರರು ಹಾಜರಿದ್ದರು.