ಕುಂಬಳೂರಿನಲ್ಲಿ ಅಂಬಿಗರ ಚೌಡಯ್ಯ ಜಯಂತಿ

ಕುಂಬಳೂರಿನಲ್ಲಿ ಅಂಬಿಗರ ಚೌಡಯ್ಯ ಜಯಂತಿ

ಮಲೇಬೆನ್ನೂರು, ಜ.22- ಕುಂಬಳೂರು ಗ್ರಾಮದ ಶ್ರೀ ಗಂಗಾ ಪರಮೇಶ್ವರಿ ದೇವಸ್ಥಾನದಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿಯನ್ನು ಶನಿವಾರ ಸಂಭ್ರಮದಿಂದ ಆಚರಿಸಲಾಯಿತು. ಗ್ರಾ.ಪಂ. ಮಾಜಿ ಅಧ್ಯಕ್ಷ ಆರ್.ಹೆಚ್.ಬಸವರಾಜಪ್ಪ, ಮುಖಂಡರಾದ ಕರಡೆಪ್ಪರ ರಾಜಪ್ಪ, ಎಂ.ಹೆಚ್.ಪರಮೇಶ್ವರಪ್ಪ, ಕಡೇಮನಿ ಪುಟ್ಟಪ್ಪ, ಶಿಕ್ಷಕ ತಿಪ್ಪೇಶ್, ಕೆ.ಬಸವರಾಜ್, ಬಲ್ಲೂರು ರುದ್ರಪ್ಪ, ಬೆನ್ನೂರು ಕರಿಬಸಪ್ಪ, ಡಿ.ಕುಬೇರಪ್ಪ, ಎಂ.ಚಂದ್ರಪ್ಪ, ಜಯ್ಯಪ್ಪ, ಗಾಂಧಿ ರಾಮಪ್ಪ, ಮೋಹನ್, ವಿಜಯಕುಮಾರ್, ಬಾರ್ಕಿ ಚಂದ್ರಪ್ಪ, ಬಾತಿ ಲಕ್ಷ್ಮಣ, ಕೆ.ಆರ್.ರಮೇಶ್, ಡಿ.ಎಂ.ಶಿವು, ಬಿ.ಆಂಜನೇಯ, ಮಾರುತಿ, ಹನುಮೇಶ್ ಮತ್ತಿತರರು ಭಾಗವಹಿಸಿದ್ದರು.

ಅನ್ನ ಸಂತರ್ಪಣೆ : ಗ್ರಾಮದ ನಿಟ್ಟೂರು ವೃತ್ತದಲ್ಲಿ ತುಮಕೂರಿನ ಸಿದ್ದಗಂಗಾ ಮಠದ ಶ್ರೀ ಡಾ.ಶಿವಕುಮಾರ ಮಹಾಸ್ವಾಮೀಜಿಯವರ 4ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಅಂಗಡಿ ಕೆ.ಹೊಳೆಬಸಪ್ಪ, ಎಂ.ಹೆಚ್.ರಮೇಶ್, ನಾಗೋಳ್ ಬಾಬು, ಮಡಿವಾಳರ ಸಂದೀಪ್ ಮತ್ತಿತರರು ಸೇರಿ ಅನ್ನ ಸಂತರ್ಪಣೆ ಹಮ್ಮಿಕೊಂಡಿದ್ದರು.