ಸಮಾಜ ಪರಿವರ್ತನೆ ಮಾಡುವ ಶಕ್ತಿ ಶಿಕ್ಷಣಕ್ಕಿದೆ

ಸಮಾಜ ಪರಿವರ್ತನೆ ಮಾಡುವ ಶಕ್ತಿ ಶಿಕ್ಷಣಕ್ಕಿದೆ

ಹರಪನಹಳ್ಳಿ, ಜ. 22- ಸಮಾಜದ ಪರಿವರ್ತನೆ ಮಾಡುವ ಶಕ್ತಿ ಶಿಕ್ಷಣಕ್ಕೆ ಇದೆ ಎಂದು ತೆಗ್ಗಿನಮಠದ ಶ್ರೀ ವರ ಸದ್ಯೋಜಾತ ಸ್ವಾಮೀಜಿ ಹೇಳಿದರು.

ಪಟ್ಟಣದ ಮೇಗಳಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಯ ಶತಮಾನೋತ್ಸವ ಕಾರ್ಯ ಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.

ಹರಪನಹಳ್ಳಿ ಸಾಹಿತ್, ಶೈಕ್ಷಣಿಕ, ಧಾರ್ಮಿಕವಾಗಿ ಮುಂದು ವರೆದಿದ್ದು ಮಕ್ಕಳಿಗೆ ಶಿಕ್ಷಣ ಕೊಡಿ ಸುವುದರವುದರ ಜೊತೆಗೆ ಸಂಸ್ಕಾರ ಕೊಡಬೇಕು. ಒಂದು ಶಾಲೆ ತೆರೆದರೆ ನೂರು ಜೈಲುಗಳನ್ನು ಮುಚ್ಚಿದಂತೆ. ಹಾಗಾಗಿ ಪ್ರತಿಯೊಬ್ಬರು ಶಿಕ್ಷಣವಂತ ರಾಗಬೇಕು. 1922 ರಲ್ಲಿ ಆರಂಭ ವಾದ ಸರ್ಕಾರಿ ಶಾಲೆ ಇಂದು ಶತ ಮಾನೋತ್ಸವ ಆಚರಿಸುತ್ತಿದ್ದು , ಅನ್ನದಾನಕ್ಕಿಂತ ಅಕ್ಷರ ಜ್ಞಾನ ಬಹು ಮುಖ್ಯವಾಗಿದೆೆ. ತಾಯಿ ಮೊದಲ ಗುರುವಾದರೆ, ಶಿಕ್ಷಕ ಎರಡನೇ ಗುರು ವಾಗಿ ಖ್ಯಾತೀ ಹೊಂದಿದ್ದಾನೆ. ಇಲ್ಲಿ ಕಲಿತ ಸಾವಿರಾರು ವಿದ್ಯಾರ್ಥಿಗಳು ಸರ್ಕಾರಿ, ಅರೆ ಸರ್ಕಾರಿ ಉದ್ಯೋಗದಲ್ಲಿದ್ದು ತಮ್ಮದೇ ಆದ ಚಾಪನ್ನು ಮೂಡಿಸಿದ್ದಾರೆ ಎಂದರು.

ಶಾಸಕ ಜಿ. ಕರುಣಾಕರ ರೆಡ್ಡಿ ಅವರು ಕಾರ್ಯಕ್ರಮವನ್ನು ಉದ್ಘಾ ಟಿಸಿ ಮಾತನಾಡಿ  ಹರಪನಹಳ್ಳಿ ತಾಲ್ಲೂಕಿನಲ್ಲಿ ಶತಮಾನ ಪೂರೈಸಿದ 28 ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವುದಾಗಿ ತಿಳಿಸಿದ್ದಾರೆ.

ಹರಪನಹಳ್ಳಿ ತಾಲ್ಲೂಕಿನಲ್ಲಿ 450 ಶಾಲಾ ಕೊಠಡಿಗಳನ್ನು ನಿರ್ಮಿಸಿದ್ದೇವೆ, ಈ ಮೇಗಳಪೇಟೆ ಶಾಲೆಗೆ 5 ಕೊಠಡಿಗಳನ್ನು ನಿರ್ಮಿಸಿ ಕೊಟ್ಟಿರುವುದಾಗಿ ಹೇಳದರು.

ಡಿಡಿಪಿಐ ಜಿ.ಕೊಟ್ರೇಶ್ ಮಾತ ನಾಡಿ, ಮಕ್ಕಳನ್ನು ಶಾಲೆಯಲ್ಲಿ ವಿವಿ ಐಪಿ ರೀತಿ ಕಂಡು ಗುಣ ಮಟ್ಟದ ಶಿಕ್ಷಣ ಕೊಡಬೇಕು, ನೌಕರಿಗಾಗಿ ಶಿಕ್ಷಣ ಅಲ್ಲ, ಜ್ಞಾನಕ್ಕಾಗಿ ಶಿಕ್ಷಣ ಎಂದ ಅವರು, ಕೌಶಲ್ಯ ಆಧಾರಿತ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಬರುತ್ತದೆ ಎಂದು ಅವರು ಹೇಳಿದರು.

ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿದ ಸಹಾಯಕ ಆಯುಕ್ತ ಟಿ.ವಿ. ಪ್ರಕಾಶ್ ಅವರು, ಟಿ.ವಿ. ಮೊಬೈಲ್‌ಗಳ ಪ್ರಭಾವದಿಂದ ವಿದ್ಯಾರ್ಥಿಗಳು ಕೇಳಿಸಿಕೊಳ್ಳುವ ವ್ಯವಧಾನ ಕಳೆದು ಕೊಂಡಿದ್ದಾರೆ.ಆದ್ದರಿಂದ ನೈತಿಕ ಶಿಕ್ಷಣವನ್ನು ಸರ್ಕಾರ ಅಳವಡಿಕೆ ಮಾಡುತ್ತಲಿದೆ ಎಂದು ಅವರು ಹೇಳಿದರು.

ಡಾ.ಎಸ್.ಎನ್.ಮಹೇಶ ಮಾತನಾಡಿದರು. ಪುರಸಭಾ ಅಧ್ಯಕ್ಷ ಎಚ್.ಎಂ.ಅಶೋಕ ಅಧ್ಯಕ್ಷತೆ ವಹಿಸಿದ್ದರು. ಪ್ರಭಾರಿ ಮುಖ್ಯ ಶಿಕ್ಷಕ ಎಚ್.ಸಲೀಂ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಶಿವಯೋಗಿ ಶಾಲಾಭಿವೃದ್ದಿ ಕುರಿತು ವರದಿ ಮಂಡಿಸಿದರು.

ಪುರಸಭಾ ಉಪಾಧ್ಯಕ್ಷೆ ನಿಟ್ಟೂರು ಭೀಮವ್ವ ಸಣ್ಣ ಹಾಲಪ್ಪ, ಶತಮಾನೋತ್ಸವ ಸಮಿತಿ ಅಧ್ಯಕ್ಷ ಪಾರಸ್ಮಲ್ ಜೈನ್, ಕ್ಷೇತ್ರ ಶಿಕ್ಷಣಾ ಧಿಕಾರಿ ಬಸವರಾಜಪ್ಪ, ಅಕ್ಷರ ದಾ ಸೋಹದ ಸಹಾಯಕ ನಿರ್ದೇಶಕ ಜಯರಾಜ್, ಎಸ್ ಡಿಎಂಸಿ ಅಧ್ಯಕ್ಷೆ ರೇಖಾ, ಶತಮಾನೋತ್ಸವ ಸಮಿತಿ ಉಪಾಧ್ಯಕ್ಷ ಪಿ.ಬಿ.ಗೌಡ, ಸ್ವಾಗತ ಸಮಿತಿ ಅಧ್ಯಕ್ಷ ಸಿ.ಎಂ. ಕೊಟ್ರಯ್ಯ, ಪದಾಧಿಕಾರಿಗಳಾದ ಎ ಎಸ್ ಎಂ ಗುರುಪ್ರಸಾದ್, ಹುರುಳಿ ಕೊಟ್ರಪ್ಪ, ಸಂಕಪ್ಪನವರ ಕೊಟ್ರೇಶ್, ಎಚ್.ಎಂ.ಜಗದೀಶ, ಇಸಿಒ ಗಿರಜ್ಜಿ ಮಂಜುನಾಥ ಮತ್ತಿತರರಿದ್ದರು.