ಮೂಡಲಪಾಯ ಯಕ್ಷಗಾನ ನಾಟಕ

ಮೂಡಲಪಾಯ ಯಕ್ಷಗಾನ ನಾಟಕ

ಹರಪನಹಳ್ಳಿ, ಜ.16- ಹರಪನಹಳ್ಳಿಯ ಸಂಪ್ರದಾಯ ಟ್ರಸ್ಟ್ ವತಿಯಿಂದ ದಿ. ಶಶಿಕಲಾ ರಚಿಸಿದ ‘ಕೊರೊನಾ ಸುರ’ ಮೂಡಲಪಾಯ ಯಕ್ಷಗಾನ ಪ್ರಸಂಗವನ್ನು ಏಳು ಪ್ರಯೋಗಗಳ ಮೂಲಕ   ಹೊಸಪೇಟೆ, ಸ.ಪ.ಪೂ.ಕಾಲೇಜ್ ಹರಪನಹಳ್ಳಿ,  ದಾವಣಗೆರೆ ಡಯಟ್, ಬಾಲಕಿಯರ ಪ್ರೌಢಶಾಲೆ ಹರಪನಹಳ್ಳಿ ಮುಂತಾದ ಸ್ಥಳಗಳಲ್ಲಿ ಪ್ರದರ್ಶನಗಳನ್ನು ನೋಡಿದ ಶಾಲಾ ಮಕ್ಕಳು, ಶಿಕ್ಷಕರು, ಸಾರ್ವಜನಿಕರು ಮೆಚ್ಚುಗೆ ಸೂಚಿಸುವುದರ ಜೊತೆಗೆ ತಮ್ಮನ್ನು ತಾವು ಸದಾ ಜಾಗ್ರ ತೆಗೆ ಮಾನಸಿಕ ಸಿದ್ದತೆ ಮಾಡಿಕೊ ಳ್ಳದಿದ್ದಲ್ಲಿ ಮುಂದೆಯೂ ಅಪಾಯ ತಪ್ಪಿದ್ದಲ್ಲವೆಂಬ ಅಭಿಪ್ರಾಯ  ಸೂಚಿಸಿದರು.  

ಪಾತ್ರಧಾರಿಗಳಾದ ವಿದ್ಯಾಶ್ರಿ, ರಶ್ಮಿ, ಜಯಲಕ್ಷ್ಮಿ, ಶಫಿಯಾ, ಲೀಲಾವತಿ, ಅರ್ಚನ, ರೂಪಶ್ರೀ, ಚಂದನ ಮುಂತಾದವರಿಂದ ಉತ್ತಮ ಅಭಿನಯ ಮೂಡಿ ಬಂದಿತು. ಹಿಮ್ಮೇಳದಲ್ಲಿ ಭಾಗತಿಕೆಯನ್ನು ಬಿ.ಪರಶುರಾಮ, ಮದ್ದಲಿ ಗುರುವಯ್ಯ, ಶಹನಾಯಿ ಹೇಮಂತ ಮತ್ತು ಪ್ರಸಾದನ ಕು. ಮಮತ ಮಾಡಿದರು.