ಜಗಳೂರು : ರೋಟರಿ ಕ್ಲಬ್‌ನಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ

ಜಗಳೂರು, ಜ.17- ರೋಟರಿ ಕ್ಲಬ್ ದಾವಣಗೆರೆ ಮತ್ತು ಜಗಳೂರು ತಾಲ್ಲೂಕು ಅರೋಗ್ಯ ಇಲಾಖೆ ಸಹಯೋಗದಲ್ಲಿ ಜಗಳೂರು ತಾಲ್ಲೂಕಿನ ಮಹಿಳೆಯರಿಗಾಗಿ `ಉಚಿತ ಆರೋಗ್ಯ’ ತಪಾಸಣಾ ಶಿಬಿರಗಳನ್ನು ಎಲ್ಲಾ ಹೋಬಳಿ ಕೇಂದ್ರಗಳಲ್ಲಿ ಏರ್ಪಡಿಸಲು ಉದ್ದೇಶಿಸಲಾಗಿದ್ದು, ಆಶಾ ಕಾರ್ಯಕರ್ತರಿಗೆ ಶಿಬಿರಗಳ ಬಗ್ಗೆ ಪರಿಚಯ ಮತ್ತು ಮಾಹಿತಿ ನೀಡುವ ಕಾರ್ಯಕ್ರಮವನ್ನು ಕೆ.ಎಂ. ವಿಶ್ವನಾಥ್ ಅವರ ಪ್ರಥಮ ಪುಣ್ಯ ಸ್ಮರಣೆಯ ದಿನವಾದ ಗೌರವಿ ಆರ್ಕೆಡ್ ನ ನೀಲ್ ಕಲಾ ಫಂಕ್ಷನ್ ಹಾಲ್‌ನಲ್ಲಿ ಇಂದು ಹಮ್ಮಿಕೊಳ್ಳಲಾಗಿತ್ತು.  ಕಾರ್ಯಕ್ರಮವನ್ನು ತಾಲ್ಲೂಕು ಆರೋಗ್ಯಾಧಿಕಾರಿ ಡಾ. ನಾಗರಾಜ್ ಮತ್ತು ಫಿಜಿಷಿಯನ್ ಡಾ. ಶಂಕರಪ್ಪ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಡಾ. ಜಯಸಿಂಹ ಮತ್ತು ಡಾ. ಸುನಿಲ್ ಬ್ಯಾಡಿಗಿ ಅವರು ಶಿಬಿರಗಳ ಬಗ್ಗೆ ಮಾಹಿತಿ ನೀಡಿದರು. ರೋಟರಿ ಕ್ಲಬ್ ದಾವಣಗೆರೆಯ ನಯನ್ ಪಾಟೀಲ್, ಪ್ರಕಾಶ್, ಬಸವರಾಜ್, ರೋಷನ್, ರಂಗಪ್ಪ, ಡಾ.ಹಾಲಸ್ವಾಮಿ ಕಂಬಾಳಿಮಠ್, ಉಪಸ್ಥಿತರಿದ್ದರು.