ಕೂಲಹಳ್ಳಿ ಗ್ರಾ.ಪಂ. ಅಧ್ಯಕ್ಷರಾಗಿ ಹಳ್ಳಿ ಮಲ್ಲಪ್ಪ ಅವಿರೋಧ ಆಯ್ಕೆ

ಕೂಲಹಳ್ಳಿ ಗ್ರಾ.ಪಂ. ಅಧ್ಯಕ್ಷರಾಗಿ  ಹಳ್ಳಿ ಮಲ್ಲಪ್ಪ ಅವಿರೋಧ ಆಯ್ಕೆ

ಹರಪನಹಳ್ಳಿ, ಜ.16- ತಾಲ್ಲೂಕಿನ ಕೂಲಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಬಂಡ್ರಿ ಗ್ರಾಮದ ಹಳ್ಳಿ ಮಲ್ಲಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಈವರೆಗೂ ಅಧ್ಯಕ್ಷರಾಗಿದ್ದ ಎರಡೆತ್ತಿನಹಳ್ಳಿ ಮಂಜುನಾಥ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಇಂದು ಚುನಾವಣೆ ನಡೆದಿದ್ದು, ಈ ವೇಳೆ 15 ಜನ ಸದಸ್ಯರ ಪೈಕಿ, 14 ಜನ ಸದಸ್ಯರು ಹಾಜರಿದ್ದರು. 

ಅಧ್ಯಕ್ಷ ಸ್ಥಾನ ಬಯಸಿ ಬಂಡ್ರಿ ಮಲ್ಲಪ್ಪ, ಉಪಾಧ್ಯಕ್ಷ ಸ್ಥಾನಕ್ಕೆ ಭೋವಿ ಸಾವಿತ್ರಮ್ಮ ಮಾತ್ರ ನಾಮಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ ಇಬ್ಬರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಗ್ರೇಡ್ 2 ತಹಶೀಲ್ದಾರ್ ಎಚ್.ಪ್ರಭಾಕರಗೌಡ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಮಾಜಿ ಗ್ರಾಪಂ ಅಧ್ಯಕ್ಷ ತಾಳೇದಹಳ್ಳಿ ಮಂಜುನಾಥ, ಸದಸ್ಯರಾದ ಪೂಜಾರಿ ಕೊಟ್ರೇಶ, ಅಂಬಳಿ ಶಾರದಮ್ಮ, ಭೋವಿ ಪುಷ್ಪಾವತಿ, ಭೋವಿ ಹನುಮಂತಪ್ಪ, ಬಂಡ್ರಿ ಪವಿತ್ರಬಾಯಿ, ಸೇವ್ಯಾನಾಯ್ಕ, ಚಿಕ್ಕಹಳ್ಳಿ ಬಸವರಾಜ, ಪೂಜಾರಿ ಕೆಂಚಮ್ಮ, ಶಿಲ್ಪಾ, ಜಿ.ಗೌರಮ್ಮ, ಚಂದ್ರಮ್ಮ, ಕೆ.ನಾಗೇಂದ್ರಪ್ಪ, ಪ್ರಕಾಶ ಸೇರಿದಂತೆ, ಇತರರು ಇದ್ದರು.