ಅವೈಜ್ಞಾನಿಕ ವೃತ್ತಗಳನ್ನು ತೆರವುಗೊಳಿಸಲು ಸಮ್ಮತಿ

ಅವೈಜ್ಞಾನಿಕ ವೃತ್ತಗಳನ್ನು ತೆರವುಗೊಳಿಸಲು ಸಮ್ಮತಿ

ಹರಪನಹಳ್ಳಿ ಪುರಸಭೆಯ ಸದಸ್ಯರ ಒಮ್ಮತ

ಹರಪನಹಳ್ಳಿ, ಜ.24- ಪಟ್ಟಣದಲ್ಲಿ ಅವೈಜ್ಞಾನಿಕವಾಗಿ ನಿರ್ಮಿಸಿರುವ ಹಾಗೂ ಅಪಘಾತ ವಲಯವಾಗಿ ಮಾರ್ಪಟ್ಟಿರುವ ಕೊಟ್ಟೂರು ರಸ್ತೆಯ ವೃತ್ತ ಹಾಗೂ ಹರಿಹರ ರಸ್ತೆಯ ವೃತ್ತವನ್ನು ಕೂಡಲೇ ತೆರವುಗೊಳಿಸುವಂತೆ ಪುರಸಭೆಯ ಸರ್ವ ಸದಸ್ಯರು ಸಭೆಯಲ್ಲಿ ಸಮ್ಮತಿ ಸೂಚಿಸಿದರು.

ಪುರಸಭೆ ಅಧ್ಯಕ್ಷ ಹೆಚ್.ಎಂ.ಅಶೋಕ್ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಸಾಮಾನ್ಯ ಸಭೆಯಲ್ಲಿ ಸದಸ್ಯರಾದ ಕೌಟಿ ಸುಮಾ, ಎಂ.ಕೆ.ಜಾವಿದ್ ಮಾತನಾಡಿ, ಪಟ್ಟಣದ ಕೊಟ್ಟೂರು ರಸ್ತೆಯ ವೃತ್ತವು ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುವುದಲ್ಲದೇ, ಅಪಘಾತಗಳು ಸಂಭವಿಸುತ್ತಿದ್ದು, ತಕ್ಷಣವೇ ಈ ವೃತ್ತವನ್ನು ತೆರವುಗೊಳಿಸಿ, ಸುಗಮ ಸಂಚಾರಕ್ಕೆ ಅನು ಕೂಲ ಮಾಡಿಕೊಡಬೇಕೆಂದು ಹೇಳಿದರು.

ಆಗ ಪುರಸಭೆ ಅಧ್ಯಕ್ಷ ಅಶೋಕ್‌ ಮಾತ ನಾಡಿ, ವೃತ್ತಗಳನ್ನು ತೆರವುಗೊಳಿಸುವ ಕುರಿತು ಪೊಲೀಸ್ ಇಲಾಖೆ ಹಾಗೂ ಲೋಕೋಪ ಯೋಗಿ ಇಲಾಖೆಗಳಿಂದ ಪುರಸಭೆಗೆ ಪತ್ರ ಬಂ ದಿದ್ದು, ಈ ಎರಡೂ ವೃತ್ತಗಳು ಅಪಘಾತ ವಲ ಯಗಳೆಂದು ಪತ್ರದಲ್ಲಿ ಸೂಚಿಸಿದ್ದಾರೆ. ಮುಂ ದಿನ ಕ್ರಮಕ್ಕಾಗಿ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆ ಯಲಾಗುವುದು, ಜಿಲ್ಲಾಧಿಕಾರಿಗಳ ಆದೇಶದ ನಂತರ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದರು.

ಒಳಚರಂಡಿ (ಯುಜಿಡಿ) ಕಾಮಗಾರಿಗಳು ಕಳಪೆಯಿಂದ ಕೂಡಿದ್ದು, ಲೋಕೋಪಯೋಗಿ ಹಾಗೂ ಪಿಆರ್‍ಇ ವಿಭಾಗೀಯ ಇಲಾಖೆಗೆ ಪತ್ರ ಬರೆದಿದ್ದು, ಆ ಪತ್ರಗಳನ್ನು ಇಲಾಖೆಗಳು ಸ್ವೀಕೃತಿ ಮಾಡಿಕೊಂಡಿರುವುದಿಲ್ಲ. ನಿರ್ವಹಣೆ ಯನ್ನು ಪುರಸಭೆ ಮಾಡುವ ಬದಲು ಒಳ ಚರಂಡಿ ಗುತ್ತಿಗೆದಾರರನ್ನು ಮುಂದಿನ ಸಭೆಗೆ ಕರೆಸಿ, ಅವರಿಂದ ನಿರ್ವಹಣೆ ಮಾಡಿಸಲು ಮುಂ ದಾಗಬೇಕು ಎಂದು ಸದಸ್ಯರು ಒತ್ತಾಯಿಸಿದರು.

ಕೊಳವೆ ಬಾವಿಗಳನ್ನು ಕೊರೆಸಿ, ಸಿಸ್ಟರ್ನ್‍ಗಳನ್ನು ಅಳವಡಿಸಲಾಗಿದ್ದು, ಇದುವರೆಗೂ ಯಾವುದೇ ಕೊಳವೆ ಬಾವಿಗಳಿಗೆ ವಿದ್ಯುತ್ ಸಂಪರ್ಕ ನೀಡಿರುವುದಿಲ್ಲ. ಇದರಿಂದಾಗಿ ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರುವ ಸಂಭವವಿದೆ ಎಂದು ಸದಸ್ಯರಾದ ಜಾಕೀರ್, ಭರತೇಶ್, ವೆಂಕಟೇಶ್ ತಿಳಿಸಿದರು.

ಪಟ್ಟಣದಲ್ಲಿ ಕುಡಿಯುವ ನೀರಿನ ನಿರ್ವಹಣೆ ಹಾಗೂ ಬೀದಿ ದೀಪಗಳ ನಿರ್ವಹಣಾ  ಅವಧಿ ಪೂರ್ಣಗೊಂಡಿದ್ದು, ಹೊಸದಾಗಿ ಟೆಂಡರ್ ಕರೆಯಲು ಸಭೆ ಒಪ್ಪಿಗೆ ಸೂಚಿಸಿತು. ಈ ವೇಳೆ ಎಂ.ವಿ.ಅಂಜಿನಪ್ಪ ಪ್ರತಿಕ್ರಿಯಿಸಿ, ಈಗಾಗಲೇ ದುರಸ್ತಿಗೊಂಡಿರುವ ವಿದ್ಯುತ್ ಕಂಬಗಳನ್ನು ತೆರವುಗೊಳಿಸಿ, ಹೊಸ ಕಂಬಗಳನ್ನು ಅಳವಡಿಸಿ ಎಂದರು.

ಪಟ್ಟಣದ ಹೊಂಬಳಗಟ್ಟಿ ರಸ್ತೆಯಲ್ಲಿನ ಘನ ತ್ಯಾಜ್ಯ ವಿಲೇವಾರಿ ಘಟಕದ ಸುತ್ತ, ಮುತ್ತ ಬಡಾವಣೆ ಅಥವಾ ವಸತಿ ಗೃಹ ನಿರ್ಮಾಣ ಮಾಡದಂತೆ ಪುರಸಭೆ ಅನುಮೋದನೆ ನೀಡುವ ಮೊದಲು ಎಲ್ಲಾ ಸದಸ್ಯರು ಸ್ಥಳ ಪರಿಶೀಲಿಸಿ, ಮುಂದಿನ ಕ್ರಮ ಕೈಗೊಳ್ಳಿ ಎಂದು ಸದಸ್ಯ ಎಂ.ವಿ.ಅಂಜಿನಪ್ಪ ಸಭೆಯ ಗಮನಕ್ಕೆ ತಂದರು.

ಮುಖ್ಯಮಂತ್ರಿಗಳ ನಗರೋತ್ಥಾನ ಯೋಜನೆಯಡಿಯಲ್ಲಿ ನಾಲ್ಕನೇ ಹಂತದ 1.50ಕೋಟಿ ರೂ. ಅನುದಾನ ಮಂಜೂ ರಾಗಿದ್ದು, ಈ ಅನುದಾನದಲ್ಲಿ ಪಟ್ಟಣದ 27 ವಾರ್ಡ್‌ಗಳಲ್ಲಿನ ಎಸ್‍ಸಿ, ಎಸ್‍ಟಿ, ಹಿಂದುಳಿದ ಹಾಗೂ ಅಂಗವಿಕಲರಿಗೆ ವಿಶೇಷ ಸಹಾಯ ಧನ ನೀಡಲಾಗುವುದು ಎಂದು ಮುಖ್ಯಾಧಿಕಾರಿ ಶಿವಕುಮಾರ ತಿಳಿಸಿದರು. 

ಅಂಜಿನಪ್ಪ ಮಧ್ಯೆ ಪ್ರವೇಶಿಸಿ, ಮುಖ್ಯಮಂತ್ರಿಗಳ ನಗರೋತ್ಥಾನ ಅನುದಾನವು ಪುರಸಭೆಗೆ ಸಂಬಂಧಿಸಿದ್ದು, 27 ವಾರ್ಡ್ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದು ಕೊಂಡು, ಫಲಾನುಭವಿಗಳನ್ನು ಆಯ್ಕೆ ಮಾಡಿ ಎಂದಾಗ ಸದಸ್ಯರು ಒಪ್ಪಿಗೆ ಸೂಚಿಸಿದರು.

ಸದಸ್ಯ ಡಿ.ಅಬ್ದುಲ್ ರೆಹಮಾನ್‌ ಸಾಬ್ ಮಾತನಾಡಿ, ಸಿಡಿಪಿಓ ಕಚೇರಿಗೆ ಸಿಎ ನಿವೇಶನ ನೀಡುವಂತೆ ಜಿಲ್ಲಾಧಿಕಾರಿಗಳ ಮುಖಾಂತರ ಪುರಸಭೆಗೆ ಮನವಿ ಪತ್ರ ಬಂದಿದ್ದು, ಆ ಕಚೇ ರಿಗೆ ನಿವೇಶನ ಕಲ್ಪಿಸುವಂತೆ ಸಭೆಗೆ ತಿಳಿಸಿದರು.

ಈ ಸಂದರ್ಭದಲ್ಲಿ ಪುರಸಭೆ ಉಪಾಧ್ಯಕ್ಷೆ ನಿಟ್ಟೂರು ಭೀಮವ್ವ, ಮುಖ್ಯಾಧಿಕಾರಿ ಶಿವಕುಮಾರ ಎರಗುಡಿ, ಹಿರಿಯ ಆರೋಗ್ಯ ನಿರೀಕ್ಷಕ, ತಾಂತ್ರಿಕ ಅಧಿಕಾರಿ ಸಿದ್ದೇಶ್, ಪುರಸಭೆ ಸಿಬ್ಬಂದಿಗಳು ಇತರರು ಇದ್ದರು.