ಅಪೌಷ್ಟಿಕ ಆಹಾರ, ಅತಿಯಾದ ಮೊಬೈಲ್ ಬಳಕೆಯಿಂದ ದೃಷ್ಟಿ ಹೀನತೆ ಹೆಚ್ಚಳ

ಅಪೌಷ್ಟಿಕ ಆಹಾರ, ಅತಿಯಾದ ಮೊಬೈಲ್ ಬಳಕೆಯಿಂದ ದೃಷ್ಟಿ ಹೀನತೆ ಹೆಚ್ಚಳ

ಎಂ.ಪಿ.ಪ್ರಕಾಶ್ ಸಮಾಜಮುಖಿ ಟ್ರಸ್ಟ್ ಅಧ್ಯಕ್ಷೆ ಎಂ.ಪಿ. ವೀಣಾ ಅಭಿಪ್ರಾಯ

ಹರಪನಹಳ್ಳಿ, ಜ. 10- ಅಪೌಷ್ಟಿಕ ಆಹಾರದಿಂದಲೂ, ಅತಿಯಾದ ಮೊಬೈಲ್ ಬಳಕೆಯಿಂದ ದೃಷ್ಟಿ ಹೀನತೆ ಹೆಚ್ಚಾಗುತ್ತಿದೆ ಎಂದು ಎಂ.ಪಿ.ಪ್ರಕಾಶ್ ಸಮಾಜಮುಖಿ ಟ್ರಸ್ಟ್ ಅಧ್ಯಕ್ಷರಾದ ಶ್ರೀಮತಿ ಎಂ.ಪಿ. ವೀಣಾ ಮಹಾಂತೇಶ್ ಅಭಿಪ್ರಾಯ ಪಟ್ಟರು.

ಪಟ್ಟಣದ ಬಾಲಕಿಯರ ಪ್ರೌಢಶಾಲೆ ಯಲ್ಲಿ ಎಂ.ಪಿ.ಪ್ರಕಾಶ್ ಸಮಾಜಮುಖಿ ಟ್ರಸ್ಟ್, ತಥಾಗತ್ ಹಾರ್ಟ್ ಹಾಸ್ಪಿಟಲ್ ಬೆಂಗಳೂರು, ಭಾರತೀಯ ವೈದ್ಯ ಸಂಘ ಐಎಂಎ ಬೆಂಗಳೂರು, ಲಯನ್ಸ್‌ ಕ್ಲಬ್ ಆಫ್‌ ಬೆಂಗಳೂರು ಡಾಕ್ಟರ್ಸ್, ಲಯನ್ಸ್ ಕ್ಲಬ್ ಆಫ್ ಬೆಂಗಳೂರು ಗ್ರೇಟರ್ ಕೋರಮಂಗಲ, ಲಯನ್ಸ್ ಕ್ಲಬ್ ಆಫ್ ಬಿಟಿಎಂ ನೈಟಿಂಗೇಲ್, ಲಯನ್ಸ್ ಕ್ಲಬ್ ಆಫ್ ಐಕ್ಯ ಹಾಗೂ ಕಾರ್ಲ್ ಜೀಸ್ ಇವರ ಸಹಯೋಗದೊಂದಿಗೆ ಪಟ್ಟಣದ ಸರ್ಕಾರಿ ಬಾಲಕಿಯರ ಪ್ರೌಢಶಾಲಾ ಮಕ್ಕಳಿಗೆ ಬೃಹತ್ ಉಚಿತ ನೇತ್ರ ತಪಾಸಣೆ ಶಿಬಿರ ಹಾಗೂ ಅರ್ಹರಿಗೆ ಉಚಿತ ಕನ್ನಡಕಗಳ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮುಖ್ಯ ಶಿಕ್ಷಕ ಬಿ.ರವೀಂದ್ರ ಮಾತನಾಡಿದರು. ಮಾಜಿ ಪುರಸಭೆ ಅಧ್ಯಕ್ಷೆ ಕವಿತಾ ವಾಗೀಶ್ ಮಾತನಾಡಿ, ಕಣ್ಣು ಮತ್ತು ಕಾಲುಗಳಿದ್ದರೆ ಬದುಕು ಹಸನು, ಕಣ್ಣೇ ಇಲ್ಲದಿದ್ದರೆ ಎಂತಹ ಸಂಪತ್ತಿದ್ದರೂ ತೃಣಕ್ಕೆ ಸಮವಾಗುವುದು ಎಂದರು.

ಕಾರ್ಯಕ್ರಮದಲ್ಲಿ ವಿಜಯನಗರ ಜಿಲ್ಲಾ ಕಾನೂನು ಮಾಹಿತಿ ಹಕ್ಕುಗಳ ವಿಭಾಗದ ಜಿಲ್ಲಾ ಉಪಾಧ್ಯಕ್ಷ ಕೆ.ಸಿದ್ದಲಿಂಗನಗೌಡ್ರ, ಮುತ್ತಿಗಿ ಕೊಟ್ರೇಶ್, ದೇವರ ತಿಮ್ಮಲಾ ಪುರ ನಾಗರಾಜ್, ಗಾಯತ್ರಿದೇವಿ, ರೇಣುಕಾ, ಕೆಂಚಮ್ಮ, ಬಸಮ್ಮ, ಲಯನ್ಸ್ ಕ್ಲಬ್‍ನ ಸಂಪ್ರೀತಾ, ಪ್ರಜ್ಞಾ, ಮನಿಷಾ, ತೊಗರಿಕಟ್ಟಿ ಮಹೇಶ್ವ  ರಪ್ಪ, ಯುವ ಕಾಂಗ್ರೇಸ್ ಉಪಾದ್ಯಕ್ಷ ದಾದಾಪೀರ್., ಮನೋಜ್, ಬಸವರಾಜ್ ಸೇರಿದಂತೆ ಆನೇಕರು ಉಪಸ್ಥಿತರಿದ್ದರು.