ಬೂತ್ ವಿಜಯ ಅಭಿಯಾನ ಕಾರ್ಯಕ್ರಮ ಯಶಸ್ವಿಗೊಳಿಸಿ: ಸಂಸದ ಜಿ.ಎಂ. ಸಿದ್ದೇಶ್ವರ

ಬೂತ್ ವಿಜಯ ಅಭಿಯಾನ ಕಾರ್ಯಕ್ರಮ ಯಶಸ್ವಿಗೊಳಿಸಿ: ಸಂಸದ ಜಿ.ಎಂ. ಸಿದ್ದೇಶ್ವರ

ಜಗಳೂರು, ಜ.5- ಬಿಜೆಪಿ ಡಬಲ್ ಇಂಜಿನ್   ಸರ್ಕಾರದ ಜನಪರ ಅಭಿವೃದ್ದಿ ಯೋಜನೆಗಳನ್ನು ಮತದಾ ರರಿಗೆ ಜಾಗೃತಿ ಮೂಡಿಸಿ ಅಭಿಯಾನ ಯಶಸ್ವಿಗೊಳಿಸಿ  ಎಂದು   ಸಂಸದ ಜಿಎಂ ಸಿದ್ದೇಶ್ವರ ಹೇಳಿದರು.

ತಾಲ್ಲೂಕಿನ ಕೆಚ್ಚೇನಹಳ್ಳಿ,ಹೊಸಕೆರೆ ಗ್ರಾಮಗಳಲ್ಲಿ ಜನವರಿ 3 ರಿಂದ 12 ರವರೆಗೆ ನಡೆಯಲಿರುವ “ಬೂತ್ ವಿಜಯ ಅಭಿಯಾನ”ಕ್ಕೆ ಚಾಲನೆ ನೀಡಿ ಮಾತನಾಡಿದರು.

ಬಿಜೆಪಿ ಸರ್ಕಾರ ದೇಶದ ಭದ್ರತೆ ಸ್ವಚ್ಛತೆ,ಅಭಿವೃದ್ದಿ ಗಾಗಿ  ಸಂಕಲ್ಪ ಗೈದಿದ್ದು.ಮುಂದಿನ ಚುನಾವಣೆಯಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ತರಬೇಕಿದೆ.ಪಕ್ಷ ಸಂಘಟಿಸಿ ಕಾರ್ಯಕರ್ತರು ಒಗ್ಗಟ್ಟಿನಿಂದ ಚುನಾವಣೆ ಎದುರಿಸಬೇಕು ಎಂದರು.

ಶಾಸಕ ಎಸ್.ವಿ.ರಾಮಚಂದ್ರ ಮಾತನಾಡಿ, ವಿಧಾನ ಸಭಾ ಕ್ಷೇತ್ರಕ್ಕೆ ಬಿಜೆಪಿ ಆಡಳಿತ ಪಕ್ಷ  ನೀಡಿರುವ ನೀರಾವರಿ ಯೋಜನೆಗಳನ್ನು, ಅಭಿವೃದ್ದಿ ಕಾಮಗಾರಿಗಳ ಬಗ್ಗೆ ಬೂತ್ ಮಟ್ಟದಿಂದ ಕಾರ್ಯಕರ್ತರು ಹಳ್ಳಿ, ಹಳ್ಳಿಗಳಲ್ಲಿ ಜನರಿಗೆ ಮನವರಿಕೆ ಮಾಡಬೇಕು. ಮತ್ತೊಮ್ಮೆ ಜನರ ಆಶೀರ್ವಾದ ಪಡೆಯಬೇಕು ಎಂದರು.

ಈ ಸಂದರ್ಭದಲ್ಲಿ  ಮಂಡಲ ಅಧ್ಯಕ್ಷ ಎಚ್.ಸಿ. ಮಹೇಶ್, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ವಿಶಾಲಾಕ್ಷಿ, ಎಸ್.ಕೆ.ಮಂಜುನಾಥ್, ಸಿದ್ದೇಶ್, ದೀಪಕ್ ಪಟೇಲ್, ಚಂದ್ರಪ್ಪ, ಸಿದ್ದೇಶ್, ನಾರಾಯಣ ಸ್ವಾಮಿ, ಶಿವಕುಮಾರ್ ಸ್ವಾಮಿ, ಮುಂತಾದವರು ಭಾಗವಹಿಸಿದ್ದರು.