ಫೆಬ್ರುವರಿ ತಿಂಗಳಲ್ಲಿ ಸರ್ಕಾರಿ ನೌಕರರ ಜಿಲ್ಲಾ ಸಮ್ಮೇಳನ

ಫೆಬ್ರುವರಿ ತಿಂಗಳಲ್ಲಿ ಸರ್ಕಾರಿ ನೌಕರರ ಜಿಲ್ಲಾ ಸಮ್ಮೇಳನ

ಜಗಳೂರು, ಜ. 13- ಫೆಬ್ರವರಿ ತಿಂಗಳಲ್ಲಿ ನೌಕರರ ಸಂಘದ ಬೃಹತ್ ಜಿಲ್ಲಾ ಸಮ್ಮೇಳನ ಆಯೋಜಿಸಲಾಗುವುದು. ಎಲ್ಲರೂ ಕೈಜೋಡಿಸಿ ಯಶಸ್ವಿಗೊಳಿಸಬೇಕು ಎಂದು ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಪಾಲಾಕ್ಷಿ ಕರೆ ನೀಡಿದರು.

ಪಟ್ಟಣದ ತಾಲ್ಲೂಕು ಕಛೇರಿ ಸಭಾಂಗಣದಲ್ಲಿ ತಾಲ್ಲೂಕು ನೌಕರರ ಸಂಘದಿಂದ ಹಮ್ಮಿಕೊಂಡಿದ್ದ 2023ರ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು. ರಾಜ್ಯದಲ್ಲಿ 5 ಲಕ್ಷಕ್ಕೂ ಅಧಿಕ ನೌಕರರಿದ್ದು. ಸಂಘದ ರಾಜ್ಯಾಧ್ಯಕ್ಷ ಷಡಕ್ಷರಿ ಅವರ ನೇತೃತ್ವದಲ್ಲಿ 2019 ರಿಂದ ರಾಜ್ಯವ್ಯಾಪಿ ಸರ್ಕಾರಿ ನೌಕರರು ಒಂದೇ ವೇದಿಕೆಯಲ್ಲಿ ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳಿಗೆ ಸದಾ ಸಹಕರಿಸುತ್ತಿದ್ದು. ಕ್ರಿಯಾಶೀಲವಾಗಿ ಸಂಘ ಕಾರ್ಯನಿರ್ವಹಿಸುತ್ತಿದೆ  ಎಂದು ಹೇಳಿದರು.

7 ನೇ ವೇತನ ಪರಿಷ್ಕರಣೆ, ಎನ್ ಪಿಎಸ್ ರದ್ದುಗೊಳಿಸಿ ಓಪಿಎಸ್ ಜಾರಿಗೊಳಿಸಲು ಹೋರಾಟಕ್ಕೆ‌ ಸನ್ನದ್ಧರಾಗಬೇಕು ಎಂದರು.

ತಾಲ್ಲೂಕು ಅಧ್ಯಕ್ಷ ಬಿ. ಚಂದ್ರಪ್ಪ ಮಾತನಾಡಿ, ತಾಲ್ಲೂಕಿನಲ್ಲಿ ಸುಸಜ್ಜಿತ ನೌಕರರ ಭವನ ನಿರ್ಮಾಣಕ್ಕೆ ದೇಣಿಗೆ ಸಂಗ್ರಹಿಸೋಣ ಎಂದರು.

ತಹಶೀಲ್ದಾರ್  ಸಂತೋಷ್ ಕುಮಾರ್ ಮಾತನಾಡಿ, ಸರ್ಕಾರಿ ನೌಕರರು ಕರ್ತವ್ಯದ  ಒತ್ತಡದ ಮಧ್ಯೆ ಮಾನಸಿಕ ನೆಮ್ಮದಿಗೆ  ಸಾಂಸ್ಕೃತಿಕ ಕಾರ್ಯಕ್ರಮಗಳು, ಕ್ರೀಡೆ ಅವಶ್ಯಕ. ಎಲ್ಲರೂ ಒಂದಾಗಿ   ಜನಸ್ನೇಹಿಯಾಗಿ  ಸಂಘ ಹೊರಹೊಮ್ಮಲಿ ಎಂದು ಅಭಿಪ್ರಾಯಪಟ್ಟರು

ಈ ಸಂದರ್ಭದಲ್ಲಿ  ತಾ.ಪಂ. ಇಓ ಚಂದ್ರಶೇಖರ್, ಸಂಘದ ಜಿಲ್ಲಾ ಕಾರ್ಯದರ್ಶಿ ಗುರುಮೂರ್ತಿ, ಜಿಲ್ಲಾ ಖಜಾಂಚಿ ತಿಪ್ಪೇಸ್ವಾಮಿ, ತಾಲ್ಲೂಕು ಗೌ, ಬಿ. ಮಹೇಶ್ವರಪ್ಪ, ತಾಲ್ಲೂಕು ಕಾರ್ಯದರ್ಶಿ ನಾಗರಾಜ್, ಪತ್ತಿನ ಸಹಕಾರ ಬ್ಯಾಂಕ್ ಸತೀಶ್, ಡಾ.ನಾಗರಾಜ್, ತಾ.ಪಂ ಇಓ ಚಂದ್ರಶೇಖರ್,ಮಿಥುನ್ ಖಿಮಾವತ್, ಬೀರೇಂದ್ರಕುಮಾರ್, ರುದ್ರಪ್ಪ, ಲಿಂಗರಾಜ್, ಕಸಾಪ ತಾಲ್ಲೂಕು ಅಧ್ಯಕ್ಷೆ ಸುಜಾತಮ್ಮ, ಪ್ರಾಂಶುಪಾಲ ಕಲ್ಲೇಶ್ ಮುಂತಾದವರು ಉಪಸ್ಥಿತರಿದ್ದರು.