ಜಗಳೂರು, ಜ.10- ಹತ್ಯೆಗೊಳಗಾದ ಆರ್ ಟಿ ಐ ಕಾರ್ಯಕರ್ತ ರಾಮಕೃಷ್ಣ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ ಹಾಗೂ ಸರ್ಕಾರಿ ಉದ್ಯೋಗ ಒದಗಿಸಬೇಕು ಎಂದು ವಕೀಲ ಆರ್. ಓಬಳೇಶ್ ಒತ್ತಾಯಿಸಿದರು.
ಪಟ್ಟಣದ ಪತ್ರಿಕಾ ಭವನದಲ್ಲಿ ನಾಯಕ ಸಮಾಜದಿಂದ ನಡೆಸಿದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು. ಹಣಕ್ಕಾಗಿ ಅಲ್ಲದೆ ಭ್ರಷ್ಟಾಚಾರ ಪ್ರಶ್ನಿಸಿದ್ದಕ್ಕೆ ಶನಿವಾರ ನಡೆದ ದಲಿತ ಯುವಕನ ಬರ್ಬರ ಹತ್ಯೆ ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ.11 ಜನ ಆರೋಪಿಗಳಲ್ಲಿ ಆರೋಪಿ ನಂಬರ್ 1 ಪಿಡಿಓ ಎ.ಟಿ. ನಾಗರಾಜ್ ಅವರನ್ನು ಬಂಧಿಸಿಲ್ಲ. ಕೊಲೆ ನಡೆದು 10 ರಿಂದ 12 ಗಂಟೆ ಯೊಳಗೆ 15 ನೇ ಹಣಕಾಸಿನಡಿ ಹಿರೇಮಲ್ಲನಹೊಳೆ ಗ್ರಾಮ ಪಂಚಾಯಿತಿಯಲ್ಲಿ 20 ಲಕ್ಷ ಹಣ ಬಿಡುಗಡೆ ಮಾಡಿರುವುದು ಪ್ರಭಾವಿತನದ ಪರಮಾವಧಿಯಾಗಿದೆ ಎಂದರು.
ನಾಯಕ ಸಮಾಜದ ಕಾರ್ಯದರ್ಶಿ ಸೂರಲಿಂಗಪ್ಪ ಮಾತನಾಡಿ, ಪಿಡಿಓ ಎ.ಟಿ. ನಾಗರಾಜ್ ಸೇವೆಯಿಂದ ವಜಾಗೊಳಿಸ ಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ನಾಯಕ ಸಮಾ ಜದ ಮುಖಂಡರಾದ ಬಿ.ಲೋಕೇಶ್, ಡಿ.ಆರ್. ಹನುಮಂತಪ್ಪ, ವಕೀಲರಾದ ಸಣ್ಣಓಬಯ್ಯ, ಕುಬೇಂದ್ರಪ್ಪ, ರೇವಣ್ಣ, ಸಿದ್ದಪ್ಪ, ಡಿಎಸ್ ಎಸ್ ತಾಲ್ಲೂಕು ಸಂಚಾ ಲಕ ಸತೀಶ್, ವಕೀಲರಾದ ತಿಪ್ಪೇಸ್ವಾಮಿ ಮುಂತಾದವರು ಉಪಸ್ಥಿತರಿದ್ದರು.