ಜಗಳೂರು: ಸಾಮಾಜಿಕ ಕಾರ್ಯಕರ್ತನ ಹತ್ಯೆ

ಜಗಳೂರು, ಜ. 8- ತಾಲ್ಲೂ ಕಿನ ಗೌರಿಪುರ ಗ್ರಾಮದ ಸಾಮಾ ಜಿಕ ಕಾರ್ಯಕರ್ತ ರಾಮಕೃಷ್ಣ (30) ಎಂಬ ಯುವಕನ್ನು ಹೊಸ ಕೆರೆ ಮಾಯಮ್ಮ ಡಾಬಾದಲ್ಲಿ ಶನಿ ವಾರ ರಾತ್ರಿ ಹತ್ಯೆ ಮಾಡಲಾಗಿದೆ.

ಮೃತನ ತಂದೆ ಪಿ.ಪ್ರಕಾಶ್ ಅವರು ನನಗೆ ಇಬ್ಬರು ಗಂಡು ಮಕ್ಕಳು, ಒಬ್ಬಳು ಹೆಣ್ಣುಮಗಳಿದ್ದು ವ್ಯವಸಾಯ ಮಾಡುತ್ತಾ ಜೀವನ ಸಾಗಿಸುತ್ತಿದ್ದೆ. ನನ್ನ ಮಗ ರಾಮಕೃಷ್ಣ ಕಳೆದ ಎರಡು ವರ್ಷಗಳಿಂದ ಸಂಘಟನೆಯ ಮಾಹಿತಿ ಹಕ್ಕು ಕಾರ್ಯ ಕರ್ತನಾಗಿ  ಬಡವರಿಗೆ, ದಲಿತರಿಗೆ, ಸರ್ಕಾರದ ಸೌಲಭ್ಯ ಕಲ್ಪಿಸುವ ಹಿನ್ನೆಲೆಯಲ್ಲಿ ಹೋರಾಟ ನಡೆಸುತ್ತಿದ್ದನು.

 ಕ್ಯಾಸೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಗರಣಗಳನ್ನು ಪತ್ತೆ ಹಚ್ಚಿ ನ್ಯಾಯ ಕೊಡಿಸಲು ಮುಂದಾಗಿದ್ದ. ಇದಕ್ಕೆ ದ್ವೇಷದಿಂದ ಪಿಡಿಓ ಎ.ಟಿ. ನಾಗರಾಜ್ ಅವರ ಕುಟುಂಬದ ಕುಮ್ಮಕ್ಕಿನಿಂದ 8 ಜನ ತಂಡ ನನ್ನ ಮಗನನ್ನು ಡಾಬಾಕ್ಕೆ ಕರೆದುಕೊಂಡು ಹೋಗಿ ಮದ್ಯಪಾನ ಮಾಡಿಸಿ ಕಲ್ಲಿನಿಂದ ಬಲವಾಗಿ ಹೊಡೆದು ಕೊಲೆ ಮಾಡಿದ್ದಾರೆ ಎಂದು ದೂರು ನೀಡಿದ್ದಾರೆ.

ಸ್ಥಳಕ್ಕೆ ಡಿವೈಎಸ್ ಪಿ ಭೇಟಿ: ಘಟನಾ ಸ್ಥಳಕ್ಕೆ ಡಿವೈಎಸ್ ಪಿ ಕನ್ನಿಕಾ ಸಿಕ್ರಿವಾಲ್ ಹಾಗೂ ತಂಡ ಭೇಟಿ ನೀಡಿ ಮಹಜರ್ ಮಾಡಲಾಗಿದೆ. ಜಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಇಬ್ಬರ ಬಂಧನ: ಈ ಕೊಲೆಗೆ ಸಂಬಂಧಿಸಿದಂತೆ ಅರ್ಜುನ್, ಪ್ರಶಾಂತ ಎಂಬುವರನ್ನು ಬಂಧಿಸಲಾಗಿದೆ. ತನಿಖೆ ಮುಂದುವರೆದಿದೆ ಎಂದು ಎಸ್ಪಿ ಸಿ.ಬಿ.ರಿಷ್ಯಂತ್ ಮಾಹಿತಿ ನೀಡಿದ್ದಾರೆ. 

ಶಾಸಕ ಎಸ್‌.ವಿ.ರಾಮಚಂದ್ರ ಪ್ರಕ್ರಿಯೆ: ನನ್ನ ಆಡಳಿತಾವಧಿಯಲ್ಲಿ  ಈ ರೀತಿ ದ್ವೇಷದಿಂದ ಕೊಲೆಗೈದ ಪ್ರಕರಣ ಪ್ರಥಮವಾಗಿದೆ. ಶಾಂತಿ ಕಾಪಾಡಿದ ನನಗೆ ಬೇಸರ ತಂದಿದೆ.ಕೂಡಲೇ ಯಾರೇ ಆಗಿರಲಿ ಆರೋಪಿಗಳನ್ನು ಪತ್ತೆ ಹಚ್ಚಿ ಕಾನೂನು ಶಿಕ್ಷೆಗೊಳಪಡಿಸಬೇಕು ಎಂದು ತಿಳಿಸಿದ್ದಾರೆ.