ಕ್ಯಾಸೇನಹಳ್ಳಿ ಗ್ರಾ.ಪಂ.ಗೆ ಟಿ.ನಾಗರಾಜ್ ಅಧ್ಯಕ್ಷ, ಪಿ.ನಾಗರಾಜ್ ಉಪಾಧ್ಯಕ್ಷ

ಕ್ಯಾಸೇನಹಳ್ಳಿ ಗ್ರಾ.ಪಂ.ಗೆ ಟಿ.ನಾಗರಾಜ್ ಅಧ್ಯಕ್ಷ, ಪಿ.ನಾಗರಾಜ್ ಉಪಾಧ್ಯಕ್ಷ

ಜಗಳೂರು, ಜ.6- ತಾಲ್ಲೂಕಿನ ಕ್ಯಾಸೇನಹಳ್ಳಿ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಟಿ.ನಾಗರಾಜ್,  ಉಪಾಧ್ಯಕ್ಷರಾಗಿ ಪಿ. ನಾಗರಾಜ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಎಸ್.ಟಿ. ಮೀಸಲು ಕ್ಷೇತ್ರದ ಅಧ್ಯಕ್ಷ ಸ್ಥಾನಕ್ಕೆ ಅಂಜಿನಮ್ಮ ಬೋರಪ್ಪ ಹಾಗೂ ಸಾಮಾನ್ಯ ಮೀಸಲು ಕ್ಷೇತ್ರದ ಉಪಾಧ್ಯಕ್ಷ ಸ್ಥಾನಕ್ಕೆ ಕೆ.ಹುಚ್ಚಪ್ಪ ಅವರ ರಾಜೀನಾಮೆ ಹಿನ್ನೆಲೆಯಲ್ಲಿ ತೆರವಾದ ಸ್ಥಾನಗಳಿಗೆ ಇಂದು ಚುನಾವಣೆ ನಡೆಯಿತು.

ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ್ ಚುನಾವಣೆ ಅಧಿಕಾರಿಯಾಗಿದ್ದರು. ನೂತನ ಅಧ್ಯಕ್ಷ ಟಿ.ನಾಗರಾಜ್ ಅವರು ಶಾಲಾ ಮಕ್ಕಳಿಗೆ ಉಚಿತ ಪೆನ್, ನೋಟ್ ಪುಸ್ತಕ, ವಿತರಿಸಿದರು. 

ಈ ಸಂದರ್ಭದಲ್ಲಿ ಮಾಜಿ ಅಧ್ಯಕ್ಷೆ ಅಂಜಿನಮ್ಮ, ಮಾಜಿ ಉಪಾಧ್ಯಕ್ಷ ಹುಚ್ಚಪ್ಪ, ಹನುಮಂತ, ಮಂಜಣ್ಣ, ತಿಮ್ಮನಕಟ್ಟೆ ರೇವಣ್ಣ, ತಾತಪ್ಪ, ಗೌರಿಪುರ ಎರ್ರಿಸ್ವಾಮಿ, ನಾಗರತ್ನಮ್ಮ, ರತ್ನಮ್ಮ, ಬಸವರಾಜ್ ಎಂಎಲ್, ಪಿಡಿಓ ಶ್ರೀನಿವಾಸ್, ಮುಖಂಡರಾದ ಅಂಜಿನಪ್ಪ, ಬೋಸಪ್ಪ, ಬಸವರಾಜ್, ಸಿದ್ಧೇಶ್ವರ್, ನಾಗರಾಜ್,  ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.