ಕೇರಳ ಮಾದರಿಯಲ್ಲಿ ಪಡಿತರ ದಾಸ್ತಾನು ವಿತರಿಸಲಿ

ಕೇರಳ ಮಾದರಿಯಲ್ಲಿ ಪಡಿತರ ದಾಸ್ತಾನು ವಿತರಿಸಲಿ

ಜಗಳೂರಿನಲ್ಲಿ ನ್ಯಾಯಬೆಲೆ ಅಂಗಡಿ ಮಾಲೀಕರ ಸಂಘದ ರಾಜ್ಯಾಧ್ಯಕ್ಷ  ಕೃಷ್ಣಪ್ಪ ಆಗ್ರಹ

ಜಗಳೂರು, ಜ.24- ರಾಜ್ಯ ಸರ್ಕಾರ ತಮಿಳುನಾಡು, ಕೇರಳ ಮಾದರಿಯಲ್ಲಿ  ಪಡಿತರ ದಾಸ್ತಾನು ವಿತರಿಸಲಿ ಎಂದು ನ್ಯಾಯಬೆಲೆ ಅಂಗಡಿ ಮಾಲೀಕರ ಸಂಘದ ರಾಜ್ಯಾಧ್ಯಕ್ಷ ಟಿ. ಕೃಷ್ಣಪ್ಪ ಆಗ್ರಹಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲ್ಲೂಕು ನ್ಯಾಯಬೆಲೆ ಅಂಗಡಿ ಮಾಲೀಕರ ಸಂಘದಿಂದ ನಡೆದ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರಾಜ್ಯದಲ್ಲಿ 10 ಕೆಜಿ ಒಂದು ಘಟಕಕ್ಕೆ ಕೊಡುತ್ತಿರುವುದನ್ನು ಕಡಿತಗೊಳಿಸಿ ಪ್ರತಿ ಕಾರ್ಡ್‌ಗೆ 5 ಕೆಜಿ ಅಕ್ಕಿ ವಿತರಿಸಲಾಗುತ್ತಿದೆ. ಅಲ್ಲದೆ ರಾಗಿ, ಎಣ್ಣೆ, ಇತರೆ ದಾಸ್ತಾನು ವಿತರಿಸಲು ಮನವಿ ಸಲ್ಲಿಸಲಾಗಿದೆ. ರಾಜ್ಯ ಸರ್ಕಾರದ ಭರವಸೆಯಂತೆ  ಕನಿಷ್ಠ 7 ಕೆಜಿಗೆ ಏರಿಕೆ ಮಾಡಲಿ ಎಂದು ಒತ್ತಾಯಿಸಿದರು. ಜೀವನ ನಿರ್ವಹಣೆ ವೆಚ್ಚ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ದೇಶದಲ್ಲಿ ಏಕರೂಪ ಆಹಾರ ಭದ್ರತೆ ಜಾರಿಗೊಳಿಸಿ, ಬಡ ಜನರಿಗೆ ಅನುಕೂಲ ಮಾಡಬೇಕು ಎಂದರು.

ಕಾಂಗ್ರೆಸ್ ಮುಖಂಡ ಚಿಕ್ಕಮ್ಮನಹಟ್ಟಿ ದೇವೇಂದ್ರಪ್ಪ ಮಾತನಾಡಿ, ನ್ಯಾಯಬೆಲೆ ಅಂಗಡಿ ಮಾಲೀಕರ ಸಂಘದ ನ್ಯಾಯಯುತ ಬೇಡಿಕೆಗಳನ್ನು ಸರ್ಕಾರ ಶೀಘ್ರ ಈಡೇರಿಸಲಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಡ ಳಿತಾವಧಿಯಲ್ಲಿನ ಅನ್ನಭಾಗ್ಯ ಯೋಜನೆ ಮರುಕಳಿಸಲಿ ಎಂದು ಹೇಳಿದರು.

ಪಡಿತರ ಫಲಾನುಭವಿಗಳಿಗೆ ಅಕ್ಕಿ ವಿತರಣೆ ಕಡಿತ ಅನ್ಯಾಯದ ಪರಮಾವಧಿ. ಸಂಘಟನೆ ಇಚ್ಛಾಶಕ್ತಿಯಿಂದ ಹೋರಾಟಕ್ಕೆ ಯಶಸ್ಸು ಲಭಿಸಲಿ ಎಂದರು.

ತಾಲ್ಲೂಕು ಪಡಿತರ ವಿತರಕರ ಸಂಘದ ಅಧ್ಯಕ್ಷ ಎಂ.ಬಿ.ರಸೂಲ್, ಪದಾ ಧಿಕಾರಿಗಳಾದ ರುದ್ರಮುನಿ, ಪುಟ್ಟಣ್ಣ, ಹನುಮಂತಪ್ಪ, ಬಸವಣ್ಣ, ರವಿಕುಮಾರ್, ಮುಖಂಡರಾದ ಓಮಣ್ಣ, ಸೇರಿದಂತೆ ಸಂಘದ ಪಧಾದಿಕಾರಿಗಳು ಇದ್ದರು.